ಪಿಎಂ ಮೋದಿ, ಅಮಿತ್ ಶಾ ನೀತಿ ಸಂಹಿತೆ ಉಲ್ಲಂಘನೆ: ಇಸಿ ಉತ್ತರ ಕೋರಿದ ಸುಪ್ರೀಂ
Team Udayavani, Apr 30, 2019, 4:17 PM IST
ಹೊಸದಿಲ್ಲಿ : ರಾಜಕೀಯ ಪ್ರಚಾರಕ್ಕಾಗಿ ಸಶಸ್ತ್ರ ಪಡೆಗಳ ಬಳಕೆ ಮತ್ತು ದ್ವೇಷ ಭಾಷಣ ಮಾಡುವ ಮೂಲಕ ಚುನಾವಣಾ ಮಾದರಿ ನೀತಿ ಸಂಹಿತೆಯನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಉಲ್ಲಂಘನೆ ಮಾಡಿದ್ದಾರೆಂದು ದೂರಿ ಸಲ್ಲಿಸಲಾಗಿರುವ ಮನವಿಗೆ ಉತ್ತರಿಸುವಂತೆ ಸುಪ್ರೀಂ ಕೋರ್ಟ್ ಇಂದು ಮಂಗಳವಾರ ಚುನಾವಣಾ ಆಯೋಗಕ್ಕೆ ಸೂಚಿಸಿದೆ.
ಅಸ್ಸಾಂ ನ ಸಿಲ್ಚಾರ್ ಕಾಂಗ್ರೆಸ್ ಸಂಸದೆ ಮತ್ತು ಅಖೀಲ ಭಾರತ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿರುವ ಸುಸ್ಮಿತಾ ದೇವ್ ಅವರು ಸಲ್ಲಿಸಿರುವ ದೂರಿಗೆ ಸಂಬಂಧಿಸಿ ಚುನಾವಣಾ ಆಯೋಗವು ಯಾವುದೇ ಆದೇಶ ಜಾರಿ ಮಾಡಲು ಸ್ವತಂತ್ರವಿದೆ ಎಂದು ಸಿಜೆಐ ರಂಜನ್ ಗೊಗೋಯ್ ನೇತೃತ್ವದ ಸುಪ್ರೀಂ ಕೋರ್ಟ್ ಪೀಠ ಹೇಳಿತು.
ಜಸ್ಟಿಸ್ ಗಳಾದ ಎಸ್ ಕೆ ಕೌಲ್ ಮತ್ತು ಕೆ ಎಂ ಜೋಸೆಫ್ ಅವರನ್ನೂ ಒಳಗೊಂಡಿರುವ ಸುಪ್ರೀಂ ಪೀಠವು, ಅರ್ಜಿಯ ವಿಚಾರಣೆಯನ್ನು ಇದೇ ಗುರುವಾರಕ್ಕೆ ನಿಗದಿಸಿತು.