ನಟ ಶಾರುಖ್ ಖಾನ್ ರ ಐಶಾರಾಮಿ ಫಾರ್ಮ್ ಹೌಸ್ ಜಪ್ತಿ
Team Udayavani, Jan 31, 2018, 11:02 AM IST
ನವದೆಹಲಿ: ಮಹಾರಾಷ್ಟ್ರದ ಅಲಿಭಾಗ್ ಪ್ರಾಂತ್ಯದಲ್ಲಿರುವ ನಟ ಶಾರುಖ್ ಖಾನ್ಗೆ ಸೇರಿದ್ದೆನ್ನಲಾದ ಐಶಾರಾಮಿ ಫಾರ್ಮ್ ಹೌಸ್ ಅನ್ನು ಆದಾಯ ತೆರಿಗೆ ಇಲಾಖೆ (ಐಟಿ) ಮುಟ್ಟುಗೋಲು ಹಾಕಿಕೊಂಡಿದೆ. ಈ ಕುರಿತಂತೆ ಪ್ರಕಟಣೆ ಹೊರಡಿಸಿರುವ ಇಲಾಖೆ, ಅಲಿಭಾಗ್ ಪ್ರಾಂತ್ಯದಲ್ಲಿನ ಕೃಷಿಭೂಮಿಯನ್ನು “ಡೇಜಾ ವು ಫಾರ್ಮ್ ಪ್ರೈವೇಟ್ ಲಿಮಿಟೆಡ್’ ಎಂಬ ಸಂಸ್ಥೆ ಕೃಷಿ ಚಟುವಟಿಕೆ ನಡೆಸುವುದಾಗಿ ಹೇಳಿ ಖರೀದಿಸಿತ್ತು.
ಇದಕ್ಕೆ ಶಾರುಖ್ ಪರೋಕ್ಷವಾಗಿ ಹಣ ಹಾಕಿದ್ದಾರೆ. ಆದರೆ, ಇಲ್ಲಿ ಯಾವುದೇ ಕೃಷಿ ಸಂಬಂಧಿ ಚಟುವಟಿಕೆ ಮಾಡದೇ ಐಶಾರಾಮಿ ಫಾರ್ಮ್ ಹೌಸ್ ಅನ್ನು ಕಟ್ಟಿ ಶಾರುಖ್ ತನ್ನ ಸ್ವಂತ ಲಾಭಕ್ಕೆ ಉಪಯೋಗಿಸುತ್ತಿದ್ದಾರೆಂದು ಇಲಾಖೆ ಆರೋಪಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ