ಸ್ಪೆಲ್ಲಿಂಗ್ ತಪ್ಪು ಬರೆದು ಟ್ರೋಲ್ಗೆ ಒಳಗಾದ ಮಾಜಿ ಸಚಿವ ತರೂರ್
Team Udayavani, Nov 12, 2018, 7:05 AM IST
ಹೊಸದಿಲ್ಲಿ: ಸಾಮಾನ್ಯವಾಗಿ, ತಮ್ಮ ಟ್ವೀಟ್ಗಳನ್ನು ಓದುವ ಮಂದಿ ಕಡ್ಡಾಯವಾಗಿ ಇಂಗ್ಲೀಷ್ ನಿಘಂಟು ಇಟ್ಟುಕೊಂಡಿರಲೇಬೇಕೇನೋ ಎಂಬಂತೆ ತಮ್ಮ ಇಂಗ್ಲೀಷ್ ಪಾಂಡಿತ್ಯವನ್ನು ಟ್ವಿಟರ್ನಲ್ಲಿ ಅಭಿವ್ಯಕ್ತಗೊಳಿಸುವ ಕಾಂಗ್ರೆಸ್ ನಾಯಕ, ಮಾಜಿ ಸಚಿವ ಶಶಿ ತರೂರ್, ಇತ್ತೀಚೆಗೆ ಮಾಡಿದ ಟ್ವೀಟ್ ಒಂದರಲ್ಲಿ ಸ್ಪೆಲ್ಲಿಂಗ್ ಅನ್ನು ತಪ್ಪಾಗಿ ಬರೆದು ಟ್ರೋಲ್ಗೆ ಒಳಗಾಗಿದ್ದಾರೆ.
ಟ್ವೀಟ್ ಒಂದರಲ್ಲಿ ತರೂರ್ ‘Innovation’ ಎಂಬ ಆಂಗ್ಲ ಪದವನ್ನು ‘Innivation’ ಎಂದು ಬರೆದಿದ್ದರು. ಅದರಲ್ಲಿ ಸ್ಪೆಲಿಂಗ್ ತಪ್ಪನ್ನು ಅನೇಕರು ಅವರ ಗಮನಕ್ಕೆ ತಂದರೆ, ಮತ್ತೂ ಕೆಲವರು ಹೀಗೆ ತಿದ್ದಿದ ಮಂದಿಯನ್ನು ಉದ್ದೇಶಿಸಿ, ಹಾಗೆಲ್ಲಾ ತಿದ್ದಲು ಹೋಗಬೇಡಿ. ಇಂಗ್ಲಿಷ್ನಲ್ಲಿ ತರೂರ್ ಏನು ಬರೆದರೂ ಅದೇ ಇಂಗ್ಲಿಷ್ ಆಗುತ್ತದೆ. ಅವರೊಬ್ಬ ಇಂಗ್ಲೀಷ್ ಶಬ್ದಭಂಡಾರದ ರಜನೀಕಾಂತ್ ಇದ್ದಂತೆ ಎಂದು ಛೇಡಿಸಿದ್ದಾರೆ. ಮತ್ತೂ ಕೆಲವರು, ಅವರ ಈ ಸ್ಪೆಲಿಂಗ್ ತಪ್ಪಾದ ಪದವನ್ನೇ ಯಾವುದೊ ಹೊಸ ಪದವಿರಬೇಕೆಂದು ಭಾವಿಸಿ ಗೂಗಲ್ನಲ್ಲಿ ಹುಡುಕಿ ನಿರಾಸೆ ಪಟ್ಟಿದ್ದಾಗಿ ಹೇಳಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!