ಸೋನಿಯಾಗೆ ಅಧಿಕಾರ ಕೊಡಿ; ಸೆ. 20ರ ಒಳಗೆ ನಿರ್ಣಯ ಕೈಗೊಳ್ಳಲು ಪಿಸಿಸಿಗಳಿಗೆ ಸೂಚನೆ?

Team Udayavani, Sep 15, 2022, 7:30 AM IST

sonioya gandhi thumb

ಹೊಸದಿಲ್ಲಿ: ಮುಂದಿನ ತಿಂಗಳು ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿರುವಂತೆಯೇ ಮಹತ್ವದ ವಿದ್ಯಮಾನವೊಂದು ನಡೆದಿದೆ. ಕಾಂಗ್ರೆಸ್‌ನ ಹಂಗಾಮಿ ಅಧ್ಯಕ್ಷೆಯಾಗಿರುವ ಸೋನಿಯಾ ಗಾಂಧಿ ಅವರೇ ವಿವಿಧ ಪ್ರದೇಶ ಕಾಂಗ್ರೆಸ್‌ ಸಮಿತಿಗಳಿಗೆ ಅಧ್ಯಕ್ಷರನ್ನು ಆರಿಸಲಿದ್ದಾರೆ ಎಂಬ ಬಗ್ಗೆ ಸೆ. 20ರ ಒಳಗಾಗಿ ನಿರ್ಧರಿಸಿ, ಅಭಿಪ್ರಾಯವನ್ನು ವರಿಷ್ಠರಿಗೆ ಕಳುಹಿಸಬೇಕು ಎಂಬ ಸೂಚನೆಯನ್ನು ರವಾನಿಸಲಾಗಿದೆ.

ಕಾಂಗ್ರೆಸ್‌ ಅಧ್ಯಕ್ಷೀಯ ಚುನಾವಣೆ ಪಾರದರ್ಶಕ ವಾಗಿ ನಡೆಯುತ್ತಿಲ್ಲ ಎಂದು ಹಿರಿಯ ಮುಖಂಡರಾದ ಕಾರ್ತಿ ಚಿದಂಬರಂ, ಮನೀಶ್‌ ತಿವಾರಿ, ಶಶಿ ತರೂರ್‌ ಅವರು ಕೆಲವು ದಿನಗಳ ಹಿಂದೆ ಬಹಿರಂಗವಾಗಿಯೇ ಆಕ್ಷೇಪ ಮಾಡಿರುವಂತೆಯೇ ಈ ಬೆಳವಣಿಗೆ ನಡೆದಿದೆ.

ಈ ತಿಂಗಳ 20ರ ಒಳಗಾಗಿ ನಿರ್ಣಯವನ್ನು ಅಂಗೀಕರಿಸಿ ಕಳುಹಿಸಬೇಕಾಗಿದೆ. ಕಾಂಗ್ರೆಸ್‌ ಅಧ್ಯಕ್ಷೀಯ ಚುನಾವಣೆಯ ಪ್ರಕ್ರಿಯೆ ಸೆ. 22ರಿಂದ ಶುರುವಾಗಲಿದೆ. ನಾಮಪತ್ರಗಳನ್ನು ಸೆ. 24ರಿಂದ 30ರ ನಡುವೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಮತದಾನ ಅ. 17ರಂದು ನಡೆಯಲಿದೆ.

ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ರಾಹುಲ್‌ ಗಾಂಧಿಯವರೇ ಸ್ಪರ್ಧಿಸಬೇಕು ಎಂಬ ಬೇಡಿಕೆಯನ್ನು ಕೆಲವು ಮುಖಂಡರು ಈಗಾಗಲೇ ಮಂಡಿಸಿದ್ದಾರೆ. ಸದ್ಯ ಭಾರತ್‌ ಜೋಡೋ ಯಾತ್ರೆಯಲ್ಲಿ ಇರುವ ರಾಹುಲ್‌ ಗಾಂಧಿ ಮಾತ್ರ ಈ ಬಗ್ಗೆ ಸ್ಪಷ್ಟ ಉತ್ತರ ನೀಡಿಲ್ಲ. ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್‌ ಗೆಹೊÉàಟ್‌ ಅವರನ್ನೇ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಸೂಚಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ. ಅವರೇ ಒಂದು ಹಂತದಲ್ಲಿ ಈ ಅಂಶವನ್ನು ನಿರಾಕರಿಸಿದ್ದಾರೆ.

ಸಂಬಂಧವಿಲ್ಲ?: ಪ್ರದೇಶ ಕಾಂಗ್ರೆಸ್‌ ಸಮಿತಿಯ ಮುಖಂಡರಿಗೆ ಅಧ್ಯಕ್ಷರನ್ನು ಆಯ್ಕೆಯ ಸ್ವಾತಂತ್ರ್ಯವನ್ನು ಸೋನಿಯಾ ಅವರಿಗೇ ನೀಡುವ ಬಗ್ಗೆ ನಿರ್ಣಯ ಕೈಗೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ. ಇದರಿಂದ ಕಾಂಗ್ರೆಸ್‌ನ ಅಧ್ಯಕ್ಷೀಯ ಚುನಾವಣೆ ಉಸ್ತುವಾರಿ ಹೊತ್ತಿರುವ ಸಂಸದ ಮಧುಸೂದನ ಮಿಸ್ತ್ರಿ ನೇತೃತ್ವದ ಸಮಿತಿಯ ಮೇಲೆ ಯಾವುದೇ ಪ್ರಭಾವ ಬೀರಲಾರದು ಎಂದು ಕೆಲವರು ನಾಯಕರು ವಾದಿಸಿದ್ದಾರೆ. ಈ ಬಗ್ಗೆ ಮೂಲಗಳನ್ನು ಉಲ್ಲೇಖಿಸಿ “ಎನ್‌ಡಿಟಿವಿ’ ವರದಿ ಮಾಡಿದೆ.

ಹಂಗಾಮಿ ಅಧ್ಯಕ್ಷೆ: 2019ರ ಲೋಕಸಭೆ ಚುನಾ ವಣೆಯಲ್ಲಿ ಕಾಂಗ್ರೆಸ್‌ ಸೋತ ಬಳಿಕ ಸೋನಿಯಾ ಗಾಂಧಿ ಅವರು ಹಂಗಾಮಿ ಅಧ್ಯಕ್ಷರಾಗಿಯೇ ಮುಂದುವರಿದಿದ್ದಾರೆ. ಈ ಅವಧಿಯಲ್ಲಿ ಕಾಂಗ್ರೆಸ್‌ನ ಭಿನ್ನಮತೀಯ ನಾಯಕರ ಗುಂಪು ಜಿ-23 ಪಕ್ಷದ ವ್ಯವಸ್ಥೆಯಲ್ಲಿ ಆಮೂಲಾಗ್ರವಾಗಿ ಸುಧಾರಣೆ ಯಾಗಬೇಕು ಎಂದು ಒತ್ತಾಯಿಸುತ್ತಾ ಬಂದಿದೆ. ಈ ಪೈಕಿ ಕೆಲವರು ಪಕ್ಷವನ್ನು ತ್ಯಜಿಸಿದ್ದಾರೆ.

ಸಹಮತ ಇರಲಿ: ಇದೇ ವೇಳೆ, ಸಂದರ್ಶನವೊಂದರಲ್ಲಿ ಮಾತನಾಡಿದ ರಾಜ್ಯಸಭಾ ಸದಸ್ಯ ಜೈರಾಮ್‌ ರಮೇಶ್‌ ಕಾಂಗ್ರೆಸ್‌ ಅಧ್ಯಕ್ಷ ಹುದ್ದೆಗೆ ಸಹಮತದ ಅಭ್ಯರ್ಥಿಯೇ ಆಯ್ಕೆಯಾಗಬೇಕು ಎಂದು ಪ್ರತಿಪಾದಿಸಿದ್ದಾರೆ. ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿಯ ವರು ಪಕ್ಷದಲ್ಲಿ ಪ್ರಧಾನವಾಗಿ ಮುಂದುವರಿಯಬೇಕು ಎಂದು ಅವರು ಹೇಳಿದ್ದಾರೆ. ರಾಹುಲ್‌ ಅವರು ಪಕ್ಷದ ತಾತ್ವಿಕ ಮುಖವಾಗಬೇಕು ಎಂದು ಹೇಳಿದ್ದಾರೆ.

ಟಾಪ್ ನ್ಯೂಸ್

ವೇಣೂರು: ಜಾನುವಾರು ಹಾಯ್ದು ಗಾಯಗೊಂಡಿದ್ದ ಮಹಿಳೆ ಸಾವು

ವೇಣೂರು: ಜಾನುವಾರು ಹಾಯ್ದು ಗಾಯಗೊಂಡಿದ್ದ ಮಹಿಳೆ ಸಾವು

ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌ : ಅರಿನಾ ಸಬಲೆಂಕಾ ಬಲ ಪ್ರದರ್ಶನ

ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌ : ಅರಿನಾ ಸಬಲೆಂಕಾ ಬಲ ಪ್ರದರ್ಶನ

ಶ್ರದ್ಧಾ ಭಕ್ತಿಯ ಮಂಗಳೂರು ರಥೋತ್ಸವ: ಸಹಸ್ರಾರು ಭಕ್ತರು ಭಾಗಿ

ಶ್ರದ್ಧಾ ಭಕ್ತಿಯ ಮಂಗಳೂರು ರಥೋತ್ಸವ: ಸಹಸ್ರಾರು ಭಕ್ತರು ಭಾಗಿ

ಫೆಬ್ರವರಿ 1ರಂದು ರವೀಂದ್ರ ಜಡೇಜಾಗೆ ಫಿಟ್‌ನೆಸ್ ಪರೀಕ್ಷೆ

ಫೆಬ್ರವರಿ 1ರಂದು ರವೀಂದ್ರ ಜಡೇಜಾಗೆ ಫಿಟ್‌ನೆಸ್ ಪರೀಕ್ಷೆ

ಒಂದೇ ತಾಯಿ‌ ಮಕ್ಕಳಂತಿದ್ದೇವೆ; ಭಿನ್ನಮತ ಇಲ್ಲ: ಬೆಳಗಾವಿಯಲ್ಲಿ ಬಿಎಸ್ ವೈ ಸ್ಪಷ್ಟನೆ

ಒಂದೇ ತಾಯಿ‌ ಮಕ್ಕಳಂತಿದ್ದೇವೆ; ಭಿನ್ನಮತ ಇಲ್ಲ: ಬೆಳಗಾವಿಯಲ್ಲಿ ಬಿಎಸ್ ವೈ ಸ್ಪಷ್ಟನೆ

ಗೌಡರನ್ನು ಎಳೆದು ತರಬೇಡಿ: ಎಚ್‌.ಡಿ.ಕುಮಾರಸ್ವಾಮಿ

ಗೌಡರನ್ನು ಎಳೆದು ತರಬೇಡಿ: ಎಚ್‌.ಡಿ.ಕುಮಾರಸ್ವಾಮಿ

ಕ್ಷೇತ್ರದ ಜನತೆಯ ಎದುರು ಜನ್ಮದಿನ ಆಚರಿಸಿಕೊಳ್ಳುತ್ತಿರುವುದು ಚಿರಸ್ಮರಣೀಯ : ಸಿಎಂ ಬೊಮ್ಮಾಯಿ

ಕ್ಷೇತ್ರದ ಜನತೆಯ ಎದುರು ಜನ್ಮದಿನ ಆಚರಿಸಿಕೊಳ್ಳುತ್ತಿರುವುದು ಚಿರಸ್ಮರಣೀಯ : ಸಿಎಂ ಬೊಮ್ಮಾಯಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೈ ಕಡಿದು ಹಾಕುವೆ : ಡಿಎಂಕೆ ಹಿರಿಯ ನಾಯಕನ ವಿವಾದಾತ್ಮಕ ಹೇಳಿಕೆ

ಕೈ ಕಡಿದು ಹಾಕುವೆ : ಡಿಎಂಕೆ ಹಿರಿಯ ನಾಯಕನ ವಿವಾದಾತ್ಮಕ ಹೇಳಿಕೆ

22ರಿಂದ 30 ವಯಸ್ಸು ತಾಯ್ತನಕ್ಕೆ ಸೂಕ್ತ ಸಮಯ: ಅಸ್ಸಾಂ ಸಿಎಂ

22ರಿಂದ 30 ವಯಸ್ಸು ತಾಯ್ತನಕ್ಕೆ ಸೂಕ್ತ ಸಮಯ: ಅಸ್ಸಾಂ ಸಿಎಂ

ಸಮಾಜದಲ್ಲಿ ತುಳಿತಕ್ಕೆ ಒಳಗಾದ ಪ್ರತಿ ವರ್ಗದ ಅಭಿವೃದ್ಧಿಗೆ ಬದ್ಧ: ಮೋದಿ

ಸಮಾಜದಲ್ಲಿ ತುಳಿತಕ್ಕೆ ಒಳಗಾದ ಪ್ರತಿ ವರ್ಗದ ಅಭಿವೃದ್ಧಿಗೆ ಬದ್ಧ: ಮೋದಿ

ಅಂಬೇಡ್ಕರ್‌ ಪ್ರತಿಮೆ ಭಗ್ನ: ಪೊಲೀಸರಿಂದ ವ್ಯಕ್ತಿ ಬಂಧನ

ಅಂಬೇಡ್ಕರ್‌ ಪ್ರತಿಮೆ ಭಗ್ನ: ಪೊಲೀಸರಿಂದ ವ್ಯಕ್ತಿ ಬಂಧನ

ಭಾರತೀಯರಿಗೆ ದಾಖಲೆ ವೀಸಾ ವಿತರಣೆಗೆ ಅಮೆರಿಕ ಸಜ್ಜು

ಭಾರತೀಯರಿಗೆ ದಾಖಲೆ ವೀಸಾ ವಿತರಣೆಗೆ ಅಮೆರಿಕ ಸಜ್ಜು

MUST WATCH

udayavani youtube

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

udayavani youtube

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

udayavani youtube

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

udayavani youtube

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan

udayavani youtube

ಯಾರು ಬೇಕಾದರೂ ಸುಲಭವಾಗಿ ನಂದಿ ಬಟ್ಟಲು ಹೂವಿನಿಂದ ಸುಂದರ ಹಾರ ತಯಾಸಬಹುದು

ಹೊಸ ಸೇರ್ಪಡೆ

ವೇಣೂರು: ಜಾನುವಾರು ಹಾಯ್ದು ಗಾಯಗೊಂಡಿದ್ದ ಮಹಿಳೆ ಸಾವು

ವೇಣೂರು: ಜಾನುವಾರು ಹಾಯ್ದು ಗಾಯಗೊಂಡಿದ್ದ ಮಹಿಳೆ ಸಾವು

ಎಂಐಸಿ ರಜತ ಮಹೋತ್ಸವ: ಬ್ರ್ಯಾಂಡ್‌ಗೆ ಧರ್ಮ, ರಾಜಕೀಯ ಬೆರೆಸದಿರಿ: ಹರೀಶ್‌ ಬಿಜೂರ್‌

ಎಂಐಸಿ ರಜತ ಮಹೋತ್ಸವ: ಬ್ರ್ಯಾಂಡ್‌ಗೆ ಧರ್ಮ, ರಾಜಕೀಯ ಬೆರೆಸದಿರಿ: ಹರೀಶ್‌ ಬಿಜೂರ್‌

ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌ : ಅರಿನಾ ಸಬಲೆಂಕಾ ಬಲ ಪ್ರದರ್ಶನ

ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌ : ಅರಿನಾ ಸಬಲೆಂಕಾ ಬಲ ಪ್ರದರ್ಶನ

ಶ್ರದ್ಧಾ ಭಕ್ತಿಯ ಮಂಗಳೂರು ರಥೋತ್ಸವ: ಸಹಸ್ರಾರು ಭಕ್ತರು ಭಾಗಿ

ಶ್ರದ್ಧಾ ಭಕ್ತಿಯ ಮಂಗಳೂರು ರಥೋತ್ಸವ: ಸಹಸ್ರಾರು ಭಕ್ತರು ಭಾಗಿ

ಫೆಬ್ರವರಿ 1ರಂದು ರವೀಂದ್ರ ಜಡೇಜಾಗೆ ಫಿಟ್‌ನೆಸ್ ಪರೀಕ್ಷೆ

ಫೆಬ್ರವರಿ 1ರಂದು ರವೀಂದ್ರ ಜಡೇಜಾಗೆ ಫಿಟ್‌ನೆಸ್ ಪರೀಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.