ಈ ವರ್ಷದಿಂದ ಹಜ್ ಯಾತ್ರಿಕರ ಸಬ್ಸಿಡಿ ರದ್ದು: ಕೇಂದ್ರ ಸರ್ಕಾರ

Team Udayavani, Jan 16, 2018, 4:09 PM IST

ನವದೆಹಲಿ: ಮುಸ್ಲಿಮರ ಪವಿತ್ರ ಸ್ಥಳ ಮೆಕ್ಕಾದಲ್ಲಿ ನಡೆಯುವ ಹಜ್ ಯಾತ್ರಿಕರಿಗೆ ಪ್ರಸ್ತುತ ವರ್ಷದಿಂದ ಸಬ್ಸಿಡಿಯನ್ನು ನಿಲ್ಲಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಮಂಗಳವಾರ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ಮಾಧ್ಯಮದ ವರದಿ ಹೇಳಿದೆ.

ಹಜ್ ಯಾತ್ರಿಕರಿಗೆ ಈ ಬಾರಿ ಸಬ್ಸಿಡಿ ನೀಡಲಾಗುವುದಿಲ್ಲ ಎಂದು ಹೇಳಿದ್ದಾರೆ. ಒಟ್ಟು 1.75 ಲಕ್ಷ ಹಜ್ ಯಾತ್ರಿಕರ ಸಬ್ಸಿಡಿ ರದ್ದು ಮಾಡುವುದಾಗಿ ಹೇಳಿದರು. ಹಜ್ ಸಬ್ಸಿಡಿ ಹಣವನ್ನು ಅಲ್ಪಸಂಖ್ಯಾತರ ಶ್ರೇಯೋಭಿವೃದ್ಧಿಗಾಗಿ ಬಳಸಲಾಗುವುದು ಎಂದು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.

2012ರಲ್ಲಿ ಸುಪ್ರೀಂಕೋರ್ಟ್ ನೀಡಿದ ಆದೇಶದ ಬಹುತೇಕ ಅಂಶಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹೊಸ ಕರಡು ನೀತಿಯನ್ನು ಸಿದ್ಧಪಡಿಸಿತ್ತು.

ಪವಿತ್ರ ಹಜ್ ಯಾತ್ರೆ ಕುರಿತ ಭಾರತದ ನೀತಿಯಲ್ಲಿ ಸುಧಾರಣೆಗಳನ್ನು ಮಾಡಲು ಹಾಗೂ ಕ್ರಮೇಣ ಹಜ್ ಯಾತ್ರೆಯ ಸಬ್ಸಿಡಿಯನ್ನು ಕಡಿಮೆಗೊಳಿಸುತ್ತಾ ಬಂದು, 2018ರೊಳಗೆ ಅದನ್ನು ಸಂಪೂರ್ಣವಾಗಿ ರದ್ದುಪಡಿಸುವಂತೆ ಸೂಚಿಸಿತ್ತು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ