
2019ರಲ್ಲಿ ಹರತಾಳಕ್ಕಿಲ್ಲ ಬೆಂಬಲ
Team Udayavani, Dec 22, 2018, 10:10 AM IST

ತಿರುವನಂತಪುರ: ಕೇರಳ ವ್ಯಾಪಾರಿಗಳ ಒಕ್ಕೂಟವು 2019ಅನ್ನು ಹರತಾಳ ವಿರೋಧಿ ವರ್ಷವನ್ನಾಗಿ ಆಚರಿಸಲು ನಿರ್ಧರಿಸಿದೆ. ಅದರಂತೆ, ಹೊಸವರ್ಷಕ್ಕೆ ಹರತಾಳ, ಬಂದ್‌ಗೆ ಬೆಂಬಲ ನೀಡುವುದಿಲ್ಲ ಎಂಬ ನಿರ್ಣಯವನ್ನು ವ್ಯಾಪಾರಿಗಳು ಕೈಗೊಂಡಿದ್ದಾರೆ.
2018ರಲ್ಲಿ ಇದುವರೆಗೆ ಒಟ್ಟು 97 ಬಂದ್, ಹರತಾಳಕ್ಕೆ ವಿವಿಧ ರಾಜಕೀಯ ಪಕ್ಷಗಳು ಕರೆ ನೀಡಿದ್ದವು. ಈ ಪೈಕಿ ಇತ್ತೀಚಿನ 2 ತಿಂಗಳಲ್ಲಿ 3 ಬಂದ್, ಹರತಾಳ ನಡೆದಿವೆ. ಇದರಿಂದಾಗಿ ವಿವಿಧ ಉದ್ದಿಮೆಗಳಿಗೆ ಕೋಟ್ಯಂತರ ರೂ. ನಷ್ಟ ಉಂಟಾಗಿದೆ. ಪ್ರವಾಸೋದ್ಯಮ ಕ್ಷೇತ್ರದಲ್ಲಿ ನಿರತವಾಗಿರುವ ಕೇರಳ ಟ್ರಾವೆಲ್ ಮಾರ್ಟ್ (ಕೆಟಿಎಂ) ಸಂಘಟನೆಯ ಅಧ್ಯಕ್ಷ ಬೇಬಿ ಮ್ಯಾಥ್ಯೂ ಮಾತನಾಡಿ ಜ.8, 9ಕ್ಕೆ ಕೇರಳದಲ್ಲಿ ನಡೆಯಲಿರುವ ಮುಷ್ಕರದಲ್ಲಿ ಸಂಘಟನೆ ಭಾಗವಹಿಸುವುದಿಲ್ಲ ಎಂದಿದ್ದಾರೆ. 1 ದಿನದ ಹರತಾಳ ಅಥವಾ ಬಂದ್‌ನಿಂದಾಗಿ 200 ಕೋಟಿ ರೂ. ನಷ್ಟ ಉಂಟಾಗುತ್ತದೆ ಎಂದಿದ್ದಾರೆ.
ಕೇರಳ ವ್ಯಾಪಾರಿ ವ್ಯವಸಾಯ ಏಕೋಪಾಸನ ಸಮಿತಿ ಅಧ್ಯಕ್ಷ ಟಿ.ನಾಸಿರುದ್ದೀನ್, ಮುಂದೆ ರಾಜಕೀಯ ಪಕ್ಷಗಳು ಮತ್ತು ಅವುಗಳ ಸಹವರ್ತಿ ಸಂಸ್ಥೆಗಳು ಕರೆ ನೀಡುವ ಬಂದ್ ಅಥವಾ ಹರತಾಳಕ್ಕೆ ಬೆಂಬಲ ಸೂಚಿಸುವುದಿಲ್ಲ ಎಂದಿದ್ದಾರೆ.
ಕೇರಳ ಹೊಟೇಲ್ ಮತ್ತು ರೆಸ್ಟಾರೆಂಟ್‌ಗಳ ಒಕ್ಕೂಟ ಅಧ್ಯಕ್ಷ ಮೊಯಿದೀನ್ ಕುಟ್ಟಿ ಹಾಜಿ ಯವರ ಪ್ರಕಾರ, 1 ಲಕ್ಷ ಪ್ರತಿನಿಧಿಗಳು ಹೊಟೇಲ್ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಹೆಚ್ಚಿನ ಸಂದರ್ಭಗಳಲ್ಲಿ ಹೊಟೇಲ್ ಅಥವಾ ಮಳಿಗೆಗಳು ತೆರೆದ ಬಳಿಕವೇ ಬಂದ್ ಮಾಹಿತಿ ಬರುತ್ತದೆ. ಹೀಗಾಗಿ ವ್ಯಾಪಕ ನಷ್ಟ ಉಂಟಾಗುತ್ತದೆ. ಹೀಗಾಗಿ ಎಲ್ಲಾ ರಾಜಕೀಯ ಪಕ್ಷಗಳಿಗೆ ಮತ್ತು ಸಹವರ್ತಿ ಸಂಘಟನೆಗಳಿಗೆ ಬಂದ್, ಹರತಾಳಕ್ಕೆ ಬೆಂಬಲ ನೀಡುವುದಿಲ್ಲ ಎಂಬ ನಿರ್ಣಯದ ಬಗ್ಗೆ ಮಾಹಿತಿ ನೀಡುವುದಾಗಿ ಸಂಘಟನೆಗಳು ತೀರ್ಮಾನಿಸಿವೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಸ ತೆರಿಗೆ ಪದ್ಧತಿ ಯಾರಿಗೆ, ಹೇಗೆ ಅನ್ವಯ?

ಕ್ರೀಡೆಗೆ 700 ಕೋಟಿ ರೂ. ಅಧಿಕ ಉತ್ತೇಜನ

ರಕ್ಷಣಾ ಕ್ಷೇತ್ರಕ್ಕೆ 5.94 ಲಕ್ಷ ಕೋಟಿ ರೂ.: ದೇಶೀಯವಾಗಿ ಶಸ್ತ್ರಾಸ್ತ್ರ ತಯಾರಿಕೆಗೆ ಒತ್ತು

‘ಮಿತ್ರ್ ಕಾಲ್’ ಬಜೆಟ್ ನಲ್ಲಿ ಭಾರತದ ಭವಿಷ್ಯವಿಲ್ಲ: ಪ್ರಧಾನಿಗೆ ರಾಹುಲ್ ಗಾಂಧಿ ಟಾಂಗ್

Union Budget 2023: 20 ಲಕ್ಷ ಕೋಟಿ ರೂಪಾಯಿ ಕೃಷಿ ಸಾಲದ ಗುರಿ-ಕೃಷಿ ಕ್ಷೇತ್ರಕ್ಕೆ ಡಿಜಿಟಲ್ ಸ್ಪರ್ಶ
MUST WATCH

ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ ಕೂಗು

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?
