ಕೇಂದ್ರದ ವಿರುದ್ಧ ಸುಪ್ರೀಂ ಕೆಂಡ
Team Udayavani, Jul 5, 2017, 3:45 AM IST
ನವದೆಹಲಿ: “ಸರ್ಕಾರವೇನು ಎಲ್ಲ ನ್ಯಾಯಾಧಿಕರಣಗಳನ್ನು ಇಲ್ಲವಾಗಿಸಲು ಹೊರಟಿದೆಯೇ’?
ಇಂತಹುದೊಂದು ಪ್ರಶ್ನೆ ಹಾಕಿದ್ದು ಸುಪ್ರೀಂ ಕೋರ್ಟ್. ನ್ಯಾಯಾಧಿಕರಣಗಳ ಸಂಖ್ಯೆಯನ್ನು ಇಳಿಸಲು ಹೊರಟಿರುವ ಕೇಂದ್ರ ಸರ್ಕಾರದ ಕ್ರಮದ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳನ್ನು ಉಲ್ಲೇಖೀಸಿ ಸುಪ್ರೀಂ ಈ ಪ್ರಶ್ನೆಯೆತ್ತಿದೆ. ಪ್ರಸ್ತುತ ಇರುವ 36 ನ್ಯಾಯಾಧಿಕರಣಗಳಿಗೆ ಕತ್ತರಿ ಹಾಕಿ 18ಕ್ಕೆ ಇಳಿಸುವ ಕುರಿತು ಕಾನೂನು ತರಲು ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಪ್ರಸ್ತಾಪ ಮಾಡಿತ್ತು. ತದನಂತರ ಮಹಾರಾಷ್ಟ್ರದಲ್ಲಿ 10 ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮುಖ್ಯಸ್ಥರಿಗೆ ಅಧಿಕಾರ ಸ್ವೀಕರಿಸಲು ರಾಷ್ಟ್ರೀಯ ಹಸಿರು ನ್ಯಾಯಾ ಧಿಕರಣ ತಡೆದಿತ್ತು. ಎನ್‌ಜಿಟಿ ಆದೇಶಕ್ಕೆ ತಡೆ ತರುವಂತೆ ಒತ್ತಾಯಿಸಿ ಮಹಾರಾಷ್ಟ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಪೀಠ ಇಂತಹುದೊಂದು ಪ್ರಶ್ನೆಯನ್ನು ಹಾಕಿದೆ. ಕೇಂದ್ರ ಸರ್ಕಾರ ಅರೆ ನ್ಯಾಯಿಕ ಸಮಿತಿಗಳನ್ನು ಇಲ್ಲವಾಗಿಸಲು ಹೊರಟಿದೆಯೇ ಎಂದು ಕೇಳಿದೆ.