ಸಿಹಿಸುದ್ದಿ: ಖಾದ್ಯ ತೈಲದ ಬೆಲೆಯಲ್ಲಿ 10-12 ರೂ. ಇಳಿಕೆ?
Team Udayavani, Aug 6, 2022, 7:55 AM IST
ಹೊಸದಿಲ್ಲಿ: ಬೆಲೆ ಏರಿಕೆಯ ಪೆಟ್ಟು ತಿಂದಿದ್ದ ಭಾರತೀಯರಿಗೆ ಖಾದ್ಯ ತೈಲ ಉತ್ಪಾದಕರು ಸಿಹಿ ಸುದ್ದಿ ನೀಡಲು ಸಿದ್ಧರಾಗಿದ್ದಾರೆ.
ಮುಂಬರುವ ದಿನಗಳಲ್ಲಿ ಖಾದ್ಯ ತೈಲದ ಬೆಲೆಯಲ್ಲಿ ಲೀಟರ್‌ಗೆ 10ರಿಂದ 12 ರೂ ಇಳಿಕೆ ಮಾಡಲು ಚರ್ಚೆ ನಡೆಸುತ್ತಿರುವುದಾಗಿ ಹೇಳಲಾಗಿದೆ.
ಆಹಾರ ಇಲಾಖೆಯ ಕಾರ್ಯ ದರ್ಶಿ ಸುಧಾಂಶು ಪಾಂಡೆ ಅವರು ಇತ್ತೀಚೆಗೆ ಖಾದ್ಯ ತೈಲ ಉತ್ಪಾದಕರ ಜತೆ ಸಭೆ ನಡೆಸಿದ್ದು, ಬೆಲೆ ಇಳಿಕೆ ಬಗ್ಗೆ ಚರ್ಚೆ ನಡೆಸಿದ್ದಾರೆ. ಜಾಗತಿಕವಾಗಿ ಖಾದ್ಯ ತೈಲ ಬೆಲೆ ಇಳಿಕೆಯನ್ನು ಜನರಿಗೆ ಮುಟ್ಟಿಸುವ ನಿಟ್ಟಿನಲ್ಲಿ ಈ ನಿರ್ಧಾರ ತೆಗೆದುಕೊಳ್ಳುತ್ತಿರುವುದಾಗಿ ಹೇಳಲಾಗಿದೆ.
ಜೂನ್ ತಿಂಗಳಲ್ಲಿ ಖಾದ್ಯ ತೈಲ ಉತ್ಪಾದಕರು ತಮ್ಮ ಖಾದ್ಯ ತೈಲಗಳ ಬೆಲೆಯಲ್ಲಿ ಲೀಟರ್‌ಗೆ 10-15 ರೂ. ಇಳಿಕೆ ಮಾಡಿದ್ದರು. ಅದಲ್ಲದೆ ಎಂ ಆರ್ ಪಿಯಲ್ಲೂ ಇಳಿಕೆ ಮಾಡಲಾಗಿತ್ತು. ಅದಾನಿ ವಿಲ್ಮರ್ ಅವರ ಫಾರ್ಚೂನ್ ತೈಲದ ಬೆಲೆಯಲ್ಲಿ 30 ರೂ.ವರೆಗೆ ಇಳಿಕೆ ಮಾಡಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಮತ್ತೆ ಕೋವಿಡ್ 19 ಸೋಂಕು, ಐಸೋಲೇಶನ್
ಜಮ್ಮು-ಕಾಶ್ಮೀರ ಸರ್ಕಾರದಿಂದ ಹಿಜ್ಬುಲ್ ಮುಖ್ಯಸ್ಥ ಸೈಯದ್ ಪುತ್ರ ಸೇರಿದಂತೆ 4 ಉದ್ಯೋಗಿಗಳ ವಜಾ
ಭಾರತದಲ್ಲಿ ಕಳೆದ 24ಗಂಟೆಯಲ್ಲಿ 15,815 ಕೋವಿಡ್ ಪ್ರಕರಣ ಪತ್ತೆ, 68 ಸಾವು
ಮನೆ ಮನೆಯಲ್ಲೂ ತ್ರಿವರ್ಣ: ರಾಷ್ಟ್ರಧ್ವಜ ಹಾರಿಸುವ ಮುನ್ನ ಈ ಅಂಶಗಳು ನೆನಪಿನಲ್ಲಿರಲಿ
ಮಲೇಷ್ಯಾ ವಾಯುಪಡೆ ಜತೆಗೆ ಐಎಎಫ್ ಸಮರಾಭ್ಯಾಸ