ತಾಜ್ಮಹಲ್ ಇಡೀ ದೇಶದ ಆಸ್ತಿ
Team Udayavani, Apr 17, 2018, 10:40 AM IST
ಆಗ್ರಾ: ಶಹಜಹಾನ್ ಸಹಿ ಮಾಡಿ ತಾಜ್ಮಹಲ್ ಅನ್ನು ನಿಮ್ಮ ಹೆಸರಿಗೆ ಬರೆದುಕೊಟ್ಟಿದ್ದಾನೆಯೇ ಎಂದು ಉತ್ತರಪ್ರದೇಶ ಸುನ್ನಿ ವಕ್ಫ್ ಮಂಡಳಿಗೆ ಸುಪ್ರೀಂ ಕೋರ್ಟ್ ಪ್ರಶ್ನೆ ಹಾಕಿದ ಬೆನ್ನಲ್ಲೇ ಇದೀಗ ಮೊಘಲ್ ಕೊನೆಯ ದೊರೆ ಬಹಾದುರ್ ಶಾ ಝಫರ್ ಮರಿಮೊಮ್ಮಗ ಮಾತನಾಡಿದ್ದು, ತಾಜ್ಮಹಲ್ ಭಾರತಕ್ಕೆ ಸೇರಿದ್ದು ಎಂದಿದ್ದಾರೆ.
ಸೋಮವಾರ ಈ ಬಗ್ಗೆ ಮಾತನಾಡಿರುವ ವೈ.ಎಚ್. ಟೂಸಿ, ತಾಜ್ಮಹಲ್ ಹಾಗೂ ಅಯೋಧ್ಯೆಯ ಬಾಬರಿ ಮಸೀದಿ ಮೇಲೆ ವಕ್ಫ್ ಮಂಡಳಿಗೆ ಯಾವುದೇ ಹಕ್ಕಿಲ್ಲ. ಶಹಜಹಾನ್ ಅದನ್ನು ಅವರಿಗೆ ಬರೆದುಕೊಟ್ಟೂ ಇಲ್ಲ. ಪ್ರೇಮಸೌಧವು ಇಡೀ ದೇಶದ ಆಸ್ತಿ ಎಂದಿದ್ದಾರೆ. ಸುನ್ನಿ ವಕ್ಫ್ ಮಂಡಳಿಯು ಭೂಮಿಯನ್ನು ಕಬಳಿಸುವಂಥ ಸಂಸ್ಥೆ. ನಾನು ಶಹಜಹಾನ್ ಉರೂಸ್ ಕಾರ್ಯಕ್ರಮಕ್ಕೆ ಹಿಂದೂ ಮಹಾಸಭಾ ಹಾಗೂ ಆರೆಸ್ಸೆಸ್ಗೂ ಆಹ್ವಾನ ನೀಡಿದ್ದೆ. ನಮಗೆ ಸೌಹಾರ್ದತೆ ಮುಖ್ಯ ಎಂದೂ ಟೂಸಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ