ಚುನಾವಣೆಗೆ ಸಿಕ್ಕಿತು ಮತ್ತಷ್ಟು ರಂಗು
Team Udayavani, Apr 8, 2019, 3:00 AM IST
ನವದೆಹಲಿ: ಎರಡು ಪ್ರಮುಖ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಈ ಬಾರಿಯ ಮಹಾ ಚುನಾವಣೆಗಾಗಿ ತಾವು ಅಳವಡಿಸಿಕೊಂಡಿರುವ ಧ್ಯೇಯವಾಕ್ಯಗಳನ್ನು ಪ್ರಕಟಿಸಿವೆ. ಕಾಂಗ್ರೆಸ್ಸಿಗಿಂತ ಒಂದು ಹೆಜ್ಜೆ ಮುಂದೆ ಹೋಗಿರುವ ಬಿಜೆಪಿ, ಧ್ಯೇಯವಾಕ್ಯದೊಂದಿಗೆ ಮೂರು ಥೀಮ್ ಹಾಡುಗಳನ್ನೂ ಬಿಡುಗಡೆ ಮಾಡಿದೆ.
ದೆಹಲಿಯಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ, “ಫಿರ್ ಏಕ್ ಬಾರ್, ಮೋದಿ ಸರ್ಕಾರ್’ ಎಂಬ ಉದ್ಘೋಷವನ್ನು ಬಿಡುಗಡೆ ಮಾಡಿದರು.
ಇದರ ಜತೆಗೆ, “ಕಾಮ್ ಕರನೇ ವಾಲಿ ಸರ್ಕಾರ್’ (ಕೆಲಸ ಮಾಡುವ ಸರ್ಕಾರ), “ಇಮಾನ್‌ದಾರ್ ಸರ್ಕಾರ್’ (ನಂಬಿಕೆಗೆ ಅರ್ಹವಾದ ಸರ್ಕಾರ) ಮತ್ತು “ಬಡಾ ಫೈಸಲೇ ಲೇನೇ ವಾಲಿ ಸರ್ಕಾರ್’ (ದೊಡ್ಡ ನಿರ್ಧಾರ ಕೈಗೊಳ್ಳಬಲ್ಲ ಸರ್ಕಾರ) ಎಂಬ ಮೂರು ಥೀಮ್ ಹಾಡುಗಳನ್ನು ಅನಾವರಣಗೊಳಿಸಿದರು.
“ಫಿರ್ ಏಕ್ ಬಾರ್ ಮೋದಿ ಸರ್ಕಾರ್’ ಎಂಬ ಮತ್ತೂಂದು ಹಾಡನ್ನೂ ಇದೇ ವೇಳೆ ಬಿಡುಗಡೆ ಮಾಡಿದ ಅವರು, ಪ್ರಚಾರದ ವೇಳೆ ಅದೇ ಮುಖ್ಯ ಹಾಡು ಆಗಿರುತ್ತದೆ ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!