ಹುಲಿ ಇನ್ನು “ನರಭಕ್ಷಕ’ನಲ್ಲ

Team Udayavani, Nov 16, 2019, 5:16 AM IST

ಹೊಸದಿಲ್ಲಿ: ಇನ್ನು ಮುಂದೆ ಅಡವಿಯಂಚಿನಲ್ಲಿರುವ ಗ್ರಾಮಗಳ ಮೇಲೆ ನುಗ್ಗಿ ಮಾನವರನ್ನು ಬೇಟೆಯಾಡುವ ಹುಲಿಗೆ “ನರಭಕ್ಷಕ ಹುಲಿ’ ಎಂದು ಹೇಳುವಂತಿಲ್ಲ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಪರಿಷ್ಕೃತ ನಿಗದಿಪಡಿಸಿದ ಕಾರ್ಯನಿರ್ವಹಣಾ ವಿಧಾನ (ಎಸ್‌ಒಪಿ)ದಲ್ಲಿ ಈ ಅಂಶವನ್ನು ಸ್ಪಷ್ಟಪಡಿಸಲಾಗಿದೆ.

ಇಂಥ ಹುಲಿಗಳನ್ನು “ಮಾನವನಿಗೆ ಅಪಾಯಕಾರಿ’ ಎಂದಷ್ಟೇ ಉಲ್ಲೇಖೀಸಬೇಕು. ಇಷ್ಟು ಮಾತ್ರವಲ್ಲದೆ ಖಾಸಗಿಯಾಗಿ ಕಾರ್ಯವೆಸಗುತ್ತಿರುವ ಶಾರ್ಪ್‌ ಶೂಟರ್‌ಗಳನ್ನು ಹುಲಿಗಳನ್ನು ಹಿಡಿಯುವ ಕಾರ್ಯಾಚರಣೆಯಲ್ಲಿ ಕೊಲ್ಲುವ ಅಥವಾ ಅರಿವಳಿಕೆ ಇಂಜೆಕ್ಷನ್‌ ಸಿಡಿಸುವುದಕ್ಕೂ ಬಳಕೆ ಮಾಡುವಂತಿಲ್ಲ ಎಂದೂ ಸೂಚಿಸಲಾಗಿದೆ. ಪರಿಸರ ಮತ್ತು ಹುಲಿ ಸಂರಕ್ಷಣೆ ಹೋರಾಟಗಾರರು ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ.

 


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ