ಲಾಲು ಅರ್ಜಿ 10ಕ್ಕೆ ವಿಚಾರಣೆ
Team Udayavani, Apr 6, 2019, 6:00 AM IST
ಹೊಸದಿಲ್ಲಿ: ಮೇವು ಹಗರಣದ 3 ಪ್ರಕರಣಗಳಲ್ಲಿ ಜಾಮೀನು ನೀಡಬೇಕೆಂದು ಬಿಹಾರದ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂಕೋರ್ಟ್ ವಿಚಾರಣೆಗೆ ಅಂಗೀಕರಿಸಿದೆ. ಏ.10ಕ್ಕೆ ಅದರ ವಿಚಾರಣೆ ನಡೆಯಲಿದೆ. ಸಿಜೆ ಐ ರಂಜನ್ ಗೊಗೋಯ್ ನೇತೃತ್ವದ ನ್ಯಾಯಪೀಠ ಸಿಬಿಐಗೆ ಲಾಲು ಯಾದವ್ ಸಲ್ಲಿಸಿರುವ ಅರ್ಜಿಗೆ ಆಕ್ಷೇಪವಿದ್ದರೆ ಏ.9ರ ಒಳಗಾಗಿ ಸಲ್ಲಿಸುವಂತೆಯೂ ಸೂಚನೆ ನೀಡಿದ್ದಾರೆ. ಕೇಂದ್ರದ ಮಾಜಿ ಸಚಿವ ಕಪಿಲ್ ಸಿಬಲ್ ಲಾಲು ಪ್ರಸಾದ್ ಯಾದವ್ ಪರವಾಗಿ ವಾದ ಮಂಡಿಸಿದ್ದಾರೆ.