ಮಣ್ಣಿನ ಗೋಡೆ ಕುಸಿದು ಮೂವರು ಸ್ಥಳದಲ್ಲೇ ದುರ್ಮರಣ; ಇನ್ನೋರ್ವ ಗಂಭೀರ ಜಖಂ

Team Udayavani, Jul 12, 2019, 3:18 PM IST

ನಾಗ್ಪುರ : ಇಲ್ಲಿಗೆ ಸಮೀಪದ ಕನ್ಹನ್‌ ನಲ್ಲಿ ಇಂದು ಶುಕ್ರವಾರ ಬೆಳಗ್ಗೆ ಮಣ್ಣಿನ ಗೋಡೆ ಕುಸಿದು ಮೂವರು ಮೃತಪಟ್ಟ ಘಟನೆ ವರದಿಯಾಗಿದೆ.

ಇಂದು ಬೆಳಗ್ಗೆ 9.30ರಿಂದ 10ರ ನಡುವೆ ಈ ದುರ್ಘ‌ಟನೆ ನಡೆದಿದೆ.

ಮಣ್ಣಿನ ಗೋಡೆ ಬಳಿ ನಾಲ್ಕು ಮಂದಿ ಕುಳಿತಿದ್ದರು. ಗೋಡೆ ಕುಸಿದಾಗ ಮೂವರು ಸ್ಥಳದಲ್ಲೇ ಮೃತಪಟ್ಟರು; ನಾಲ್ಕನೇ ವ್ಯಕ್ತಿ ಗಂಭೀರವಾಗಿ ಗಾಯಗೊಂಡರು. ಅವರನ್ನು ಒಡನೆಯೇ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕನ್ಹನ್‌ ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರ್‌ ಚಂದ್ರಕಾಂತ ಕಾಳೆ ತಿಳಿಸಿದರು.

ಪೊಲೀಸರು ಆಕಸ್ಮಿಕ ಸಾವಿನ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

 


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ