ದಿಲ್ಲಿ : ಹುಡುಗಿಯರ ಹಾಸ್ಟೆಲ್‌ ನಲ್ಲಿ ಬೆಂಕಿ, ತಪ್ಪಿದ ದುರಂತ, 50 ಮಂದಿ ಪಾರು

Team Udayavani, May 29, 2019, 12:31 PM IST

ಹೊಸದಿಲ್ಲಿ : ಪಶ್ಚಿಮ ದಿಲ್ಲಿಯ ಜನಕಪುರಿ ಮೆಟ್ರೋ ಸ್ಟೇಶನ್‌ ಸಮೀಪದ ಹುಡುಗಿಯರ ಹಾಸ್ಟೆಲ್‌ ನಲ್ಲಿ ಇಂದು ಬುಧವಾರ ನಸುಕಿನ 3 ಗಂಟೆಯ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿತು.

ಆದರೆ ಸಕಾಲದಲ್ಲಿ ಸುದ್ದಿ ತಿಳಿದು ಧಾವಿಸಿ ಬಂದ ಅಗ್ನಿ ಶಾಮಕ ದಳದವರು ಹಾಸ್ಟೆಲ್‌ ನಲ್ಲಿದ್ದ ಸುಮಾರು 50 ಹುಡುಗಿಯರನ್ನು ಬೆಂಕಿಯ ಜ್ವಾಲೆಯಿಂದ ರಕ್ಷಿಸಿ ಜೀವಸಹಿತ ಪಾರು ಮಾಡಿದರು.

ಕಟ್ಟಡದೊಳಗೆ ತುಂಬಿ ಕೊಂಡ ದಟ್ಟ ಹೊಗೆಯಿಂದಾಗಿ ಉಸಿರಾಟದ ತೊಂದರೆಗೆ ಗುರಿಯಾದ ಆರು ಹುಡುಗಿಯರನ್ನು ಸಮೀಪ ಆಸ್ಪತ್ರೆಗೆ ಸೇರಿಸಲಾಯಿತು. ಅವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅಗ್ನಿ ಶಾಮಕ ದಳದ ಮುಖ್ಯ ಅಧಿಕಾರಿ ಅತುಲ್‌ ಗರ್ಗ್‌ ತಿಳಿಸಿದ್ದಾರೆ.

ಹಾಸ್ಟೆಲ್‌ನ ಬೇಸ್‌ಮೆಂಟ್‌ ಎಂಟ್ರಿಯಲ್ಲಿದ್ದ ಇಲೆಕ್ಟ್ರಿಕಲ್‌ ಪ್ಯಾನಲ್‌ ನಲ್ಲಿ ನಸುಕಿನ 3ರ ವೇಳೆಗೆ ಬೆಂಕಿ ಕಾಣಿಸಿಕೊಂಡಿತು. 3.30ರ ಸುಮಾರಿಗೆ ಬೆಂಕಿಯನ್ನು ನಿಯಂತ್ರಿಸಲಾಯಿತು ಎಂದು ಗರ್ಗ್‌ ಹೇಳಿದ್ದಾರೆ.

ಗುಜರಾತ್‌ನ ಸೂರತ್‌ ನಲ್ಲಿ ಕೋಚಿಂಗ್‌ ಕ್ಲಾಸ್‌ ಕಟ್ಟಡದಲ್ಲಿ ಕೆಲ ದಿನಗಳ ಹಿಂದೆ ಸಂಭವಿಸಿದ್ದ ಅಗ್ನಿ ದುರಂತಕ್ಕೆ 20 ವಿದ್ಯಾರ್ಥಿನಿಯರು ಬಲಿಯಾದ ಘಟನೆ ಸೃಷ್ಟಿಸಿರುವ ಭೀತಿ ಜನಮನದಲ್ಲಿ ಇನ್ನೂ ಮಾಸಿಲ್ಲ. ಈ ನಡುವೆ ದಿಲ್ಲಿ ಹುಡುಗಿಯರ ಹಾಸ್ಟೆಲ್‌ ಬೆಂಕಿ ಅವಘಡ ಜನರಲ್ಲಿ ಮತ್ತೆ ಭೀತಿ ಉಂಟುಮಾಡಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ