ಮ್ಯಾಪ್ ವಿವಾದ: ಲಿಖಿತ ವಿವರಣೆ ನೀಡಲು ಟ್ವಿಟರ್‌ಗೆ ಸಮಿತಿ ಸೂಚನೆ
ಜಿಯೋ, ಏರ್‌ಟೆಲ್, ಕ್ಯಾಬ್ ಸೇವಾ ಸಂಸ್ಥೆಗಳ ಪ್ರತಿನಿಧಿಗಳಿಗೂ ಸಮನ್ಸ್
Team Udayavani, Oct 29, 2020, 5:30 AM IST
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಲೇಹ್ ಅನ್ನು ಚೀನದ ಭಾಗ ಎಂದು ತೋರಿಸಿದ ಟ್ವಿಟರ್ ಕ್ರಮಕ್ಕೆ ಮಾಹಿತಿ ಸಂರಕ್ಷಣಾ ವಿಧೇಯಕ ಪರಿಶೀಲನೆಗಾಗಿನ ಸಂಸತ್ ಸಮಿತಿ ಆಕ್ಷೇಪ ವ್ಯಕ್ತಪಡಿಸಿದೆ. ಜತೆಗೆ ಈ ಬಗ್ಗೆ ಲಿಖಿತವಾಗಿ ವಿವರಣೆ ನೀಡುವಂತೆ ಮೈಕ್ರೋಬ್ಲಾಗಿಂಗ್ ಜಾಲತಾಣಕ್ಕೆ ಸೂಚಿಸಲಾಗಿದೆ ಎಂದು ಸಮಿತಿಯ ಅಧ್ಯಕ್ಷೆ, ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ಬುಧವಾರ ತಿಳಿಸಿದ್ದಾರೆ. ಹಿರಿಯ ಅಧಿಕಾರಿಗಳ ಸಮಿತಿ ಮುಂದೆ ಹಾಜರಾಗುವ ಬದಲು ಕಿರಿಯ ದರ್ಜೆಯ ಅಧಿಕಾರಿಗಳನ್ನು ಸಮಿತಿ ಮುಂದೆ ಕಳುಹಿಸಿದ್ದಕ್ಕೆ ಸಂಸತ್ ಸಮಿತಿ ತನ್ನ ಅತೃಪ್ತಿ ವ್ಯಕ್ತಪಡಿಸಿದೆ.
ಲೇಹ್ ಭೂಪಟ ವಿವಾದ ಮಾತ್ರವಲ್ಲದೆ, ಅಪ್‌ಲೋಡ್ ಮಾಡುವ ಮಾಹಿತಿಗಳನ್ನು ಯಾವ ಆಧಾರದಲ್ಲಿ ಮ್ಯೂಟ್ ಮಾಡಲಾಗುತ್ತದೆ ಮತ್ತು ವೈಭವೀಕರಿಸಲಾಗುತ್ತದೆ ಎಂಬ ಬಗ್ಗೆ ಮಾಹಿತಿಯನ್ನೂ ಸಮಿತಿ ಪಡೆದುಕೊಂಡಿದೆ. ಭಾರತದ ಕಾನೂನುಗಳು ಮತ್ತು ಸೂಕ್ಷ್ಮ ವಿಚಾರಗಳ ಬಗೆಗಿನ ವ್ಯತ್ಯಾಸ ವನ್ನು ಟ್ವಿಟರ್ ಅರಿಯುವುದು ಸೂಕ್ತ ವೆಂದು ಸಮಿತಿ ಸದಸ್ಯರು ಜಾಲತಾಣದ ಅಧಿಕಾರಿಗಳಿಗೆ ವಿವರಿಸಿದ್ದಾರೆ.
ಮತ್ತೂಂದು ಬೆಳವಣಿಗೆಯಲ್ಲಿ ವೈಯಕ್ತಿಕ ಮಾಹಿತಿ ಕುರಿತಂತೆ ಸಂಸತ್‌ನ ಸಮಿತಿ ರಿಲಯನ್ಸ್ ಜಿಯೋ, ಏರ್‌ಟೆಲ್, ಕ್ಯಾಬ್ ಸೇವೆ ಪೂರೈಕೆ ಸಂಸ್ಥೆಗಳಾಗಿರುವ ಯೂಬರ್, ಒಲಾಗಳಿಗೆ ಸಮಿತಿ ಮುಂದೆ ಹಾಜರಾಗುವಂತೆ ಸಮನ್ಸ್ ನೀಡಲಾಗಿದೆ. ರಿಲಯನ್ಸ್ ಜಿಯೋ ಇನ್ಫೋಕಾಮ್ ಮತ್ತು ಜಿಯೋಗೆ ನ.4, ಓಲಾ ಮತ್ತು ಯೂಬರ್‌ಗೆ ನ.5, ನ.6ರಂದು ಏರ್‌ಟೆಲ್ ಮತ್ತು ಟ್ರೂ ಕಾಲರ್ ಸಂಸ್ಥೆಗಳಿಗೆ ಸಮಿತಿ ಮುಂದೆ ಹಾಜರಾಗುವಂತೆ ಸೂಚಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!
MUST WATCH
ಹೊಸ ಸೇರ್ಪಡೆ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು