ಎರೆಹುಳುವಿನ ಎರಡು ಹೊಸ ತಳಿ ಪಶ್ಚಿಮಘಟ್ಟದಲ್ಲಿ ಪತ್ತೆ
Team Udayavani, Aug 19, 2017, 11:12 AM IST
ತಿರುವನಂತಪುರ: ಪಶ್ಚಿಮ ಘಟ್ಟದ ಕೇರಳ ಭಾಗದಲ್ಲಿ ಎರೆಹುಳುಗಳ ಎರಡು ಹೊಸ ತಳಿಗಳು ಪತ್ತೆಯಾಗಿವೆ. ಈ ಹೊಸ ತಳಿಗಳಿಗೆ ದ್ರಾವಿಡ ಪಾಲಿಡೈವರ್ಟಿಕ್ಯುಲಾಟಾ ಮತ್ತು ದ್ರಾವಿಡ ಥೋಮಸಿ ಎಂದು ಹೆಸರಿಡಲಾಗಿದೆ. ಕೇರಳದ ಮಹಾತ್ಮ ಗಾಂಧಿ ವಿವಿ ಮತ್ತು ಹಿಮಾಚಲ ಪ್ರದೇಶದ ಶೂಲಿನಿ ವಿವಿಯ ಸಂಶೋಧಕರು ಈ ಎರೆಹುಳುಗಳನ್ನು ಶೋಧಿಸಿದ್ದಾರೆ. ಇವುಗಳಲ್ಲಿ ದ್ರಾವಿಡ ಪಾಲಿಡೈವರ್ಟಿಕ್ಯುಲಾಟಾದ ಅಂಗಾಂಗಗಳು ಮುಂಭಾಗದಲ್ಲಿದ್ದು ಅತಿ ವಿಶಿಷ್ಟವಾಗಿವೆ. ಇವುಗಳು ಮುನ್ನಾರ್ ಪ್ರದೇಶದ ಶೋಲಾ ಅರಣ್ಯ ಭಾಗದ ಎರವಿಕುಲಮ್ ರಾಷ್ಟ್ರೀಯ ಉದ್ಯಾನ ಪಂಪದುನ್ ಶೋಲಾ ರಾಷ್ಟ್ರೀಯ ಉದ್ಯಾನ ಮತ್ತು ಚಿನ್ನಾರ್ ರಾಷ್ಟ್ರೀಯ ಉದ್ಯಾನ ಭಾಗದಲ್ಲಿ ಪತ್ತೆಯಾಗಿವೆ.
ಎರಡನೇ ತಳಿಯನ್ನು ಕೋಯಿಕ್ಕಖೋಡ್ ಮತ್ತು ಮಲಪ್ಪುರಂನ ಕೋಝಿಪ್ಪರಾ ಜಲಪಾತದ ಪ್ರದೇಶದಲ್ಲಿ ಪತ್ತೆ ಹಚ್ಚಲಾಗಿದೆ. ಸಂಶೋಧಕರ ಪ್ರಕಾರ ಭಾರತದ ಉಪಖಂಡದಲ್ಲಿ ಸುಮಾರು 73 ದ್ರಾವಿಡ ತಳಿಯ ಎರೆಹುಳುಗಳನ್ನು ಪತ್ತೆ ಹಚ್ಚಲಾಗಿದೆ. ಇವುಗಳಲ್ಲಿ 43 ಜಾತಿಗಳು ಪಶ್ಚಿಮ ಘಟ್ಟ ಪ್ರದೇಶವೊಂದರಲ್ಲೇ ಪತ್ತೆಯಾಗಿವೆ. ಜಗತ್ತಿನಾದ್ಯಂತ ಪ್ರಸ್ತುತ 200ರಷ್ಟು ದ್ರಾವಿಡ ತಳಿಯ ಎರೆಹುಳಗಳಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ