Drugs: ಅಮಿತ್ ಶಾ ನೇತೃತ್ವದಲ್ಲಿ ಇಂದು 1.44 ಲಕ್ಷ ಕೆಜಿ ಡ್ರಗ್ಸ್ ನಾಶ
Team Udayavani, Jul 17, 2023, 7:34 AM IST
ನವದೆಹಲಿ: ದೇಶಾದ್ಯಂತ ಮಾದಕ ವಸ್ತು ನಿಯಂತ್ರಣ ಕಾರ್ಯಾಚರಣೆಯ ಭಾಗವಾಗಿ ವಶಪಡಿಸಿಕೊಂಡಿರುವ 1.44 ಲಕ್ಷ ಕೆಜಿ ಮಾದಕದ್ರವ್ಯವನ್ನು ಸೋಮವಾರ ಕೇಂದ್ರಗೃಹ ಸಚಿವ ಅಮಿತ್ ಶಾ ಅವರ ಸಮ್ಮುಖದಲ್ಲೇ ನಾಶಪಡಿಸಲು ಯೋಜಿಸಲಾಗಿದ್ದು, ಈ ಎಲ್ಲ ಡ್ರಗ್ಸ್ಗಳ ಒಟ್ಟು ಮೌಲ್ಯ 2,416 ಕೋಟಿ ರೂ.ಗಳಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಮಾದಕವಸ್ತು ಕಳ್ಳಸಾಗಣೆ ಹಾಗೂ ರಾಷ್ಟ್ರೀಯ ಭದ್ರತೆ ವಿಚಾರವಾಗಿ ಸಮ್ಮೇಳನವೊಂದನ್ನು ಆಯೋಜಿಸಲಾಗಿದೆ. ಅದರಲ್ಲಿ ಅಮಿತ್ ಶಾ ಕೂಡ ಭಾಗಿಯಾಗಲಿದ್ದಾರೆ. ಇದೇ ವೇಳೆ ದೇಶದ ವಿವಿಧ ನಗರಗಳಲ್ಲಿ ಮಾದಕವಸ್ತುಗಳ ನಾಶ ನಡೆಯಲಿದ್ದು, ಅದೆಲ್ಲವನ್ನೂ ವರ್ಚುವಲ್ ಮೂಲಕವೇ ಶಾ ವೀಕ್ಷಿಸಲಿದ್ದಾರೆ.
ನಾಶಪಡಿಸಲಿರುವ ಡ್ರಗ್ಸ್ ಪೈಕಿ 6,590 ಕೆಜಿ ಮಾದಕವಸ್ತುವನ್ನು ಹೈದರಾಬಾದ್ ಎನ್ಸಿಬಿ ವಶಪಡಿಸಿಕೊಂಡಿದ್ದರೆ, 822 ಕೆಜಿಯನ್ನು ಇಂದೋರ್ ಎನ್ಸಿಬಿ ಘಟಕ, 356 ಕೆಜಿಯನ್ನು ಜಮ್ಮು ಘಟಕ ಮುಟ್ಟುಗೋಲು ಹಾಕಿದೆ. ಜತೆಗೆ ಇನ್ನೂ ಹಲವು ರಾಜ್ಯ ಘಟಕಗಳು ವಶಪಡಿಸಿಕೊಂಡಿರುವ ಮಾದಕವಸ್ತುವನ್ನೂ ನಾಶಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
MUST WATCH
ಹೊಸ ಸೇರ್ಪಡೆ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ