ಪುಲ್ವಾಮಾ ದಾಳಿಗೆ 15 ದಿನ ಮೊದಲೇ ಅಮೆರಿಕ ಸುಳಿವು: ವರದಿ
Team Udayavani, Mar 1, 2019, 11:07 AM IST
ಹೊಸದಿಲ್ಲಿ : ಪುಲ್ವಾಮಾ ಉಗ್ರ ದಾಳಿಗೆ ಹದಿನೈದು ದಿನಗಳ ಮೊದಲೇ ಅಮೆರಿಕ ಗುಪ್ತಚರ ದಳ ಭಾರತದ ಮೇಲೆ ಪಾಕ್ ಮೂಲದ ಉಗ್ರರಿಂದ ದೊಡ್ಡ ಮಟ್ಟ ದಾಳಿ ನಡೆಯುವ ಸಂಭಾವ್ಯತೆ ಇದೆ ಎಂಬ ಮುನ್ನೆಚ್ಚರಿಕೆಯನ್ನು ನೀಡಿತ್ತು ಎಂಬ ವಿಷಯವನ್ನು ಮಾಧ್ಯಮ ವರದಿಗಳು ಈಗ ಬಹಿರಂಗಪಡಿಸಿವೆ.
ಪ್ರಧಾನಿ ಮೋದಿ ಸರಕಾರ ರಾಷ್ಟ್ರೀಯವಾದಿ ಯೋಜನೆಗಳಿಗೆ ಹೆಚ್ಚೆಚ್ಚು ಒತ್ತು ನೀಡ ತೊಡಗಿದಂತೆಯೇ ಲೋಕಸಭಾ ಚುನಾವಣೆಗಳ ಸಂದರ್ಭದಲ್ಲಿ ದೇಶದಲ್ಲಿ ಭಾರೀ ಕೋಮು ಹಿಂಸೆಗಳು ಭುಗಿಲೇಳುವ ಸಾಧ್ಯತೆಗಳು ಇವೆ ಎಂಬ ಮುನ್ನೆಚ್ಚರಿಕೆಯನ್ನು ಕೂಡ ಅಮೆರಿಕ ಗುಪ್ತಚರ ದಳದ ಅಧ್ಯಯನ ತಂಡ ನೀಡಿತ್ತು ಎಂದು ಇದೀಗ ಗೊತ್ತಾಗಿದೆ.
ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಆವಂತಿಪೋರಾದಲ್ಲಿ ಕಳೆದ ಫೆ.14ರಂದು ಪಾಕ್ ಮೂಲದ ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆಗೆ ಸೇರಿದ ಆತ್ಮಾಹುತಿ ಬಾಂಬ್ ದಾಳಿಕೋರ ಸಿಆರ್ಪಿಎಫ್ ಯೋಧರ ಬಸ್ಸಿಗೆ ಸ್ಫೋಟಕ ತುಂಬಿದ ವಾಹನವನ್ನು ಢಿಕ್ಕಿ ಹೊಡೆದು ಕನಿಷ್ಠ 40 ಯೋಧರನ್ನು ಬಲಿಪಡೆದಿದ್ದ.