ಐಸಿಐಸಿಐ ಬ್ಯಾಂಕ್ ಮಾಜಿ ಸಿಇಓ ಚಂದಾ ಕೊಚ್ಚಾರ್ ನಿವಾಸಕ್ಕೆ ED ದಾಳಿ
Team Udayavani, Mar 1, 2019, 10:24 AM IST
ಹೊಸದಿಲ್ಲಿ : ಐಸಿಐಸಿಐ ಬ್ಯಾಂಕ್ – ವಿಡಿಯೋಕಾನ್ ಸಾಲ ಹಗರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ ಇಂದು ಐಸಿಐಸಿಐ ಬ್ಯಾಂಕ್ ಮಾಜಿ ಸಿಇಓ ಚಂದಾ ಕೊಚ್ಚಾರ್ ಮತ್ತು ವಿಡಿಯೋಕಾನ್ ಪ್ರಮೋಟರ್ ವೇಣುಗೋಪಾಲ್ ಧೂತ್ ಅವರ ನಿವಾಸ ಮತ್ತು ಕಚೇರಿಗಳ ಮೇಲೆ ದಾಳಿ ಹಾಗೂ ಶೋಧ ಕಾರ್ಯಾಚರಣೆಯನ್ನು ನಡೆಸಿತು.
ಜಾರಿ ನಿರ್ದೇಶನಾಲಯ ಈ ತಿಂಗಳ ಆದಿಯಲ್ಲಿ ಚಂದಾ ಕೊಚ್ಚಾರ್, ಪತಿ ದೀಪಕ್ ಕೊಚ್ಚಾರ್, ಧೂತ್ ವಿರುದ್ಧ ಹಣ ಅಕ್ರಮ ತಡೆ ಕಾಯಿದೆ (ಪಿಎಂಎಲ್‌ಎ) ಯಡಿ ಕ್ರಿಮಿನಲ್ ಕೇಸ್ ದಾಖಲಿಸಿದೆ. ಐಸಿಐಸಿಐ ಬ್ಯಾಂಕ್ ಕಾರ್ಪೊರೇಟ್ ಸಮೂಹಕ್ಕೆ 1,875 ಕೋಟಿ ರೂ. ಸಾಲ ಮಂಜೂರು ಮಾಡುವಲ್ಲಿ ಅಕ್ರಮ ಹಾಗೂ ಭ್ರಷ್ಟಾಚಾರಗಳು ನಡೆದಿವೆ ಎಂದು ಇಡಿ ಹೇಳಿದೆ.
ಸಾಲ ಹಗರಣ ಕೇಸಿನ ಬಗ್ಗೆ ಹೆಚ್ಚಿನ ಸಾಕ್ಷ್ಯಗಳ ಸಂಗ್ರಹಣೆಗಾಗಿ ಇಂದು ಶುಕ್ರವಾರ ಬೆಳಗ್ಗಿನಿಂದಲೇ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕನಿಷ್ಠ ಐದು ತಾಣಗಳಲ್ಲಿನ ನಿವಾಸಗಳು ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ತಾಜ್ ಮಹಲ್ ಅಡಿಯಲ್ಲಿ ಪ್ರಧಾನಿಯ ಡಿಗ್ರಿ ಹುಡುಕುತ್ತಿದ್ದಾರೆ: ಓವೈಸಿ ವ್ಯಂಗ್ಯ
ಕೇದಾರನಾಥದ ಕಸದ ರಾಶಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಪ್ರಧಾನಿ ಮೋದಿ
ವಿಜ್ಞಾನ ವಿಸ್ಮಯ: 40 ದಿನದ ಮಗುವಿನ ಹೊಟ್ಟೆಯೊಳಗೆ ಭ್ರೂಣ ಬೆಳವಣಿಗೆ !!
ಪಾಕ್ ಗಡಿಯಲ್ಲಿ ಬಾಂಬ್, ಗ್ರೆನೇಡ್ಗಳಿದ್ದ ಡ್ರೋನ್ ಹೊಡೆದುರುಳಿಸಿದ ಸೇನೆ
ಮೋಜಿಗಾಗಿ ವಿದ್ವಂಸಕ ಕೃತ್ಯ: ಎಸಿ ಲೋಕಲ್ ರೈಲುಗಳಿಗೆ ಕಲ್ಲು ತೂರಾಟ!