ಶಬರಿಮಲೆಯಲ್ಲಿ ನಿಷೇಧಾಜ್ಞೆ ಏಕೆ ?

Team Udayavani, Nov 22, 2018, 6:00 AM IST

ತಿರುವನಂತಪುರಂ: ಶಬರಿಮಲೆ ದೇಗುಲ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಯಾಕೆ ನಿರ್ಬಂಧ ವಿಧಿಸಲಾಗಿದೆ ಎಂದು ಸರ್ಕಾರವನ್ನು ಕೇರಳ ಹೈಕೋರ್ಟ್‌ ಪ್ರಶ್ನಿಸಿದೆ. ಯಾಕೆ ಈ ಪ್ರದೇಶಗಳಲ್ಲಿ ನಾಲ್ಕಕ್ಕೂ ಹೆಚ್ಚು ಜನರು ಗುಂಪುಗೂಡ ದಂತೆ ಸೆಕ್ಷನ್‌ 144 ವಿಧಿಸಲಾಗಿದೆ ಎಂದು ವಿವರಿಸು ವಂತೆ ಪಟ್ಟಣಂತಿಟ್ಟ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ಕೋರ್ಟ್‌ ಸೂಚನೆ ನೀಡಿದೆ. ಎಲ್ಲ ವಯಸ್ಸಿನ ಮಹಿಳೆಯ ರಿಗೂ ಪ್ರವೇಶಾವ ಕಾಶ ನೀಡುವಂತೆ ಸುಪ್ರೀಂಕೋರ್ಟ್‌ ಆದೇಶ ನೀಡಿದ ನಂತರದಲ್ಲಿ ಉಂಟಾದ ಗಲಭೆ ಹಿನ್ನೆಲೆಯಲ್ಲಿ ಈ ನಿರ್ಬಂಧ ವಿಧಿಸಲಾಗಿತ್ತು. ಸನ್ನಿಧಾನಂ, ಪಂಪಾ, ನೀಲಕ್ಕಲ್‌ ಹಾಗೂ ಇತರ ಪ್ರದೇಶಗಳಲ್ಲಿ ಈ ನಿರ್ಬಂಧ ಜಾರಿಯಲ್ಲಿದೆ.

ಅಷ್ಟೇ ಅಲ್ಲ, ಅಯ್ಯಪ್ಪ ದೇಗುಲಕ್ಕೆ ಆಗಮಿಸುವವರು ಭಕ್ತರೇ ಅಥವಾ ಹೋರಾಟ ಗಾರರೇ ಎಂದು ಹೇಗೆ ಪ್ರತ್ಯೇಕಿಸುತ್ತೀರಿ ಎಂದೂ ಕೋರ್ಟ್‌ ಪ್ರಶ್ನಿಸಿದೆ. ಸ್ವಾಮಿಯೇ ಶರಣಂ ಅಯ್ಯಪ್ಪ ಎಂದು ಘೋಷಣೆ ಕೂಗುವುದರಲ್ಲಿ ಯಾವುದೇ ತಪ್ಪಿಲ್ಲ. ಗುಂಪು ಗುಂಪಾಗಿ ದೇಗುಲ ಪ್ರವೇಶಿಸಲು ಭಕ್ತರಿಗೆ ಅವಕಾಶ ಮಾಡಿ ಕೊಡಿ ಎಂದೂ ಕೋರ್ಟ್‌ ಸೂಚಿಸಿದೆ.

ಪೊಲೀಸರೊಂದಿಗೆ ಸಚಿವರ ವಾಗ್ವಾದ: ಶಬರಿಮಲೆ ದೇಗುಲಕ್ಕೆ ಬುಧವಾರ ತೆರಳಿದ್ದ ಕೇಂದ್ರ ಸಚಿವ ಪೊನ್‌ ರಾಧಾಕೃಷ್ಣ ಪಂಪಾದಲ್ಲಿ ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾರೆ. ಪಂಪಾಕ್ಕಿಂತಲೂ ಮುಂದೆ ಖಾಸಗಿ ವಾಹನಗಳು ತೆರಳಲು ಅನುಮತಿ ನೀಡದಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ರಾಧಾಕೃಷ್ಣ, ಎಲ್ಲ ವಾಹನಗಳಿಗೂ ತೆರಳಲು ಅವಕಾಶ ನೀಡಬೇಕು ಎಂದು ಆಗ್ರಹಿಸಿ ದರು. ಆದರೆ ಪೊಲೀಸರು ಇದಕ್ಕೆ ಅವಕಾಶ ನೀಡದ್ದರಿಂದ, ಸರ್ಕಾರಿ ಬಸ್‌ನಲ್ಲೇ ದೇಗುಲಕ್ಕೆ ಇತರ ಕಾರ್ಯಕರ್ತ ರೊಂದಿಗೆ ತೆರಳಿದರು.

ಉದ್ಯೋಗದಿಂದ ಅಮಾನತು: ಶಬರಿಮಲೆಯಲ್ಲಿ ಕಳೆದ ಭಾನುವಾರ ರಾತ್ರಿ ಪ್ರತಿಭಟನೆ ನಡೆಸಿದ್ದ ಆರೆಸ್ಸೆಸ್‌ ಮುಖಂಡ ಆರ್‌. ರಾಜೇಶ್‌ರನ್ನು ಆಯುರ್ವೇದ ಇಲಾಖೆ ಯಿಂದ ಅಮಾನತುಗೊಳಿಸಲಾಗಿದೆ. ಮಲಯತೂರ್‌ ಸರ್ಕಾರಿ ಆಯುರ್ವೇದ ಡಿಸ್ಪೆನ್ಸರಿಯಲ್ಲಿ ರಾಜೇಶ್‌ ಫಾರ್ಮಸಿಸ್ಟ್‌ ಆಗಿದ್ದರು. ಭಾನುವಾರ ರಾತ್ರಿ ಪ್ರತಿಭಟನೆ ನಡೆಸಿದ 60 ಜನರನ್ನು ಬಂಧಿಸಲಾಗಿದ್ದು, ಈ ಪೈಕಿ ರಾಜೇಶ್‌ ಕೂಡ ಒಬ್ಬರಾಗಿದ್ದಾರೆ.

ಸುರೇಂದ್ರನ್‌ಗೆ ಜಾಮೀನು: ನ.18 ರಂದು ಬಂಧನಕ್ಕೊಳಗಾಗಿದ್ದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೆ.ಸುರೇಂದ್ರನ್‌ ಸೇರಿ ದಂತೆ 72 ಜನರಿಗೆ ಬುಧ‌ವಾರ ಪಟ್ಟಣಂತಿಟ್ಟ ಕೋರ್ಟ್‌ ಜಾಮೀನು ನೀಡಿದೆ. ಮುಂದಿನ ಎರಡು ತಿಂಗಳುಗಳ ವರಗೆ ಶಬರಿಮಲೆ ದೇಗುಲವಿರುವ ರನ್ನಿ ತಾಲೂಕಿಗೆ ಪ್ರವೇಶಿಬಾರದು ಎಂದು ಸೂಚಿಸಲಾಗಿದೆ ಮತ್ತು ತಲಾ 20 ಸಾವಿರ ರೂ. ವೈಯಕ್ತಿಕ ಭದ್ರತೆ ಠೇವಣಿ ಇಡುವಂತೆ ನಿರ್ದೇಶಿಸಲಾಗಿದೆ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ