
ವಿಶ್ವಸಂಸ್ಥೆಯ ಸಂತೋಷ ಸೂಚ್ಯಂಕ ವರದಿ ಬಿಡುಗಡೆ
ಫಿನ್ ಲ್ಯಾಂಡ್ ಪ್ರಥಮ, ಭಾರತಕ್ಕೆ 126ನೇ ಸ್ಥಾನ
Team Udayavani, Mar 22, 2023, 11:15 AM IST

ಹೊಸದಿಲ್ಲಿ: ಕೋವಿಡ್-19 ವೈರಾಣು ವಿನ ದಾಳಿಗೆ ಕಳೆದ ಕೆಲವು ವರ್ಷಗಳಲ್ಲಿ ಇಡೀ ಪ್ರಪಂಚ ಸಾವು, ದುಃಖಗಳನ್ನು ಅನುಭವಿಸಿದೆ. ಇಷ್ಟೆಲ್ಲ ಸಾವು ನೋವಿನ ಮಧ್ಯೆಯೂ ಜನರು ತುಂಬಾ ಸಂತೋ ಷವಾಗಿದ್ದಾರೆ!
ಹೌದು, ವಿಶ್ವಸಂಸ್ಥೆಯ ಸುಸ್ಥಿರ ಅಭಿ ವೃದ್ಧಿ ಪರಿಹಾರಗಳ ಜಾಲ (ಸಸ್ಟೇ ಯೆನೆಬಲ್ ಡೆವಲಂಪ್‌ಮೆಂಟ್ ಸೊಲ್ಯು ಶನ್ ನೆಟವರ್ಕ್) ತನ್ನ 11ನೇ ಸಂತೋಷ ಸೂಚ್ಯಂಕದ ವರದಿಯಲ್ಲಿ ಮೊದಲಿನ ಸಮಯಕ್ಕೆ ಹೋಲಿಸಿದರೆ ಕೋವಿಡ್ ದಾಳಿಯ ಅನಂತರ ವಿಶ್ವದಲ್ಲಿ ಸಂತೋಷದಿಂದ ಬದುಕುತ್ತಿರುವವರ ಸಂಖ್ಯೆಯೂ ಹೆಚ್ಚಿದೆ ಎಂದು ಹೇಳಿದೆ.
ಸತತ 6ನೇ ಬಾರಿ ಫಿನ್ ಲ್ಯಾಂಡ್ ಪ್ರಥಮ
ಈ ಬಾರಿಯ ವರದಿಯಲ್ಲಿ ಯುರೋ ಪ್‌ನ ಫಿನ್ ಲ್ಯಾಂಡ್ ಅತೀ ಹೆಚ್ಚು ಸಂತೋಷದ ಜನರಿರುವ ದೇಶವಾಗಿದೆ. ಇದು ಸತತ ಆರನೇ ಬಾರಿಗೆ ಫಿನಲ್ಯಾಂಡ್ ಪ್ರಥಮ ಸ್ಥಾನಿ ಯಾಗಿರುವುದು. ಇಲ್ಲಿನ ಬಲವಾದ ಆಡಳಿತ, ಮಾನವ ಹಕ್ಕುಗಳ ಅನುಸರಣೆ ಫಿನ್ ಲ್ಯಾಂಡ್ ಮೊದಲ ಸ್ಥಾನ ಗಳಿಸಲು ಕಾರಣವಾಗಿದೆ. ಜತೆಗೆ ಇಲ್ಲಿ ಮಗು ಹುಟ್ಟಿದಾಗ ಒಂದು ವರ್ಷದವರೆಗೆ ಮಗುವಿನ ಬೆಳವಣಿಗೆಗೆ ಪೂರಕವಾಗುವ ಸೌಲಭ್ಯಗಳನ್ನು ನೀಡುತ್ತದೆ. ಅಲ್ಲದೇ ಪೋಷಕರಿಗೆ 10 ತಿಂಗಳ ಪೋಷಕ ರಜೆಯ ಸೌಲಭ್ಯ ಒದಗಿಸುವುದರಿಂದ ಮಗುವಿನೊಂದಿಗೆ ತಂದೆ-ತಾಯಿ ಸಮಯ ಕಳೆಯ ಬಹುದು. ಇದರ ಹೊರತಾಗಿಯೂ ಇಲ್ಲಿನ ನಾಗರಿಕರಿಗೆ ಉಚಿತ ಶಿಕ್ಷಣ ಹಾಗೂ ಆರೋಗ್ಯ ಸೇವೆಗಳನ್ನು ಅಲ್ಲಿನ ಸರಕಾರ ಒದಗಿಸುತ್ತಿದೆ, ಅದಲ್ಲದೇ ನಿರುದ್ಯೋ ಗಿಗಳಿಗೂ ನೆರವಾಗುವ ವ್ಯವಸ್ಥೆ ಫಿನ್ ಲ್ಯಾಂಡ್ ನ ಸತತ ಗೆಲುವಿಗೆ ಕಾರಣವಾಗಿದೆ.
ಡೆನ್‌ಮಾರ್ಕ್ 2ನೇ ಸ್ಥಾನ, ಐಸ್‌ಲ್ಯಾಂಡ್ 3ನೇ ಸ್ಥಾನ, ಇಸ್ರೇಲ್ ಹಾಗೂ ನೆದರ್‌ಲ್ಯಾಂಡ್ಸ್ ದೇಶಗಳು 4 ಮತ್ತು 5ನೇ ಸ್ಥಾನದಲ್ಲಿ. ಅಪಘಾನಿಸ್ಥಾನವು ಕೊನೆಯ ಅಂದರೆ 137ನೇ ಸ್ಥಾನಗಳಿಸಿದೆ.
ಭಾರತಕ್ಕೆ 126ನೇ ಸ್ಥಾನ
ಸಂತೋಷ ಸೂಚ್ಯಂಕದಲ್ಲಿ ಭಾರತ 126ನೇ ಸ್ಥಾನಗಳಿಸಿದೆ. ವಿಪರ್ಯಾ ಸವೆಂದರೆ ಭಾರತದ ನೆರೆ ರಾಷ್ಟ್ರಗಳು ಈ ಪಟ್ಟಿಯಲ್ಲಿ ಭಾರತವನ್ನು ಹಿಂದಿಕ್ಕಿವೆ. ನೆರೆ ರಾಷ್ಟ್ರ ನೇಪಾಲ 78, ಚೀನ 64, ಪಾಕಿಸ್ಥಾನ 108, ಶ್ರೀಲಂಕಾ 112 ಸ್ಥಾನದಲ್ಲಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Modi ಸರಕಾರದಲ್ಲಿ ಭಾರತದ ಸಾಲ 155 ಲಕ್ಷ ಕೋಟಿ ರೂ.ಗೆ ಏರಿದೆ: ಕಾಂಗ್ರೆಸ್

Opposition ಮೈತ್ರಿ ಕೂಟದಿಂದ ದೂರ ಉಳಿಯುವ ಸೂಚನೆ ನೀಡಿದ ಒಮರ್ ಅಬ್ದುಲ್ಲಾ

Manipur ಜನರ ಗಾಯಗಳಿಗೆ ಪ್ರಧಾನಿ ಮೋದಿ ಉಪ್ಪು ಸವರಿದ್ದಾರೆ: ಖರ್ಗೆ ಕಿಡಿ

ಹನುಮಂತ ಬುಡಕಟ್ಟು ಜನಾಂಗದವರು: ಕಾಂಗ್ರೆಸ್ ಶಾಸಕನ ವಿವಾದಾತ್ಮಕ ಹೇಳಿಕೆ

ರಾಮಚಂದ್ರನ್ ವಿಶ್ವನಾಥನ್ ದೇಶಭ್ರಷ್ಟ ಆರ್ಥಿಕ ಅಪರಾಧಿ; ಸಿಬಿಐ ವಿಶೇಷ ನ್ಯಾಯಾಲಯ
MUST WATCH

ಮನೆಯಲ್ಲಿಯೇ ಮಾಡಿ ರುಚಿಕರವಾದ ಎಗ್ ಘೀ ರೋಸ್ಟ್

ಪಾಕ್ ಆಕ್ರಮಿತ ಪ್ರದೇಶದಲ್ಲಿ ತಲೆಯೆತ್ತಿದ ಶಾರದಾ ಪೀಠ | ಏನಿದರ ಹಿನ್ನೆಲೆ ?

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ
ಹೊಸ ಸೇರ್ಪಡೆ

Modi ಸರಕಾರದಲ್ಲಿ ಭಾರತದ ಸಾಲ 155 ಲಕ್ಷ ಕೋಟಿ ರೂ.ಗೆ ಏರಿದೆ: ಕಾಂಗ್ರೆಸ್

ಬೊರಿವಲಿಯ ರೋಹಿತ್ ಪೂಜಾರಿ ಡಾನ್ಸ್ ಅಕಾಡೆಮಿ: ಮಂಥನ್-2023 ಸಂಭ್ರಮ

Opposition ಮೈತ್ರಿ ಕೂಟದಿಂದ ದೂರ ಉಳಿಯುವ ಸೂಚನೆ ನೀಡಿದ ಒಮರ್ ಅಬ್ದುಲ್ಲಾ

ಸಾಗರ ದಿನಾಚರಣೆ; ಕೊಳೆಯದ ವಸ್ತುಗಳ ಬಳಕೆ ಬೇಡ; ಜಿಲ್ಲಾಧಿಕಾರಿ

ಬೆಂಗಳೂರು ಕಾರ್ಯಕ್ರಮ ರದ್ದುಮಾಡಿ ಕುತ್ತಾರು ಕೊರಗಜ್ಜಕ್ಷೇತ್ರದಲ್ಲಿ ಮುಹೂರ್ತಮಾಡಿದ ಚಿತ್ರತಂಡ