ಅಲಹಾಬಾದ್‌ ಅಲ್ಲ, ಪ್ರಯಾಗ್‌ರಾಜ್‌

Team Udayavani, May 25, 2018, 6:00 AM IST

ಅಲಹಾಬಾದ್‌: ಮುಂದಿನ ವರ್ಷ ನಡೆಯಲಿರುವ ಕುಂಭಮೇಳದ ವೇಳೆಗೆಲ್ಲ “ಅಲಹಾಬಾದ್‌’ಗೆ ಮರುನಾಮಕರಣ ಮಾಡುವ ಸಿದ್ಧತೆ ನಡೆದಿದೆ. 
“ಪ್ರಯಾಗ್‌ರಾಜ್‌’ ಎಂದು ಹೆಸರಿಡಲು ಯೋಗಿ ಆದಿತ್ಯನಾಥ್‌ ನೇತೃತ್ವದ ಉತ್ತರ ಪ್ರದೇಶ ಸರಕಾರ ನಿರ್ಧರಿಸಿದೆ.

ಅಷ್ಟಕ್ಕೂ “ಪ್ರಯಾಗ್‌ರಾಜ್‌’ ಎಂದು ಹೆಸರಿಡಲು ನಿರ್ಧರಿಸಿದ್ದಕ್ಕೂ ಬಲವಾದ ಕಾರಣ ಇದೆ ಎಂದು ಸರಕಾರ ಸಮರ್ಥಿಸಿಕೊಂಡಿದೆ. ಪ್ರಯಾಗ್‌ ಎನ್ನುವುದು ಕುಂಭಮೇಳ ನಡೆಯುವ ಪವಿತ್ರ ಪ್ರದೇಶವಾಗಿದೆ. ಇದು ಗಂಗೆ, ಯಮುನೆ ಮತ್ತು ಸರಸ್ವತಿ ನದಿಗಳ ಸಂಗಮಸ್ಥಳ. ಈ  ಕಾರಣಕ್ಕಾಗಿ ಅಲಹಾಬಾದ್‌ ಅನ್ನು “ಪ್ರಯಾಗ್‌ರಾಜ್‌’ ಎಂದು ನಾಮ ಕರಣ ಮಾಡಬೇಕೆನ್ನುವುದು ಸರಕಾರದ ಉದ್ದೇಶ. ಈಗಾಗಲೇ ಕುಂಭ ಮೇಳದ ಬ್ಯಾನ ರ್‌ಗಳಲ್ಲಿ ಅಲಹಾಬಾದ್‌ ಎಂಬ ಹೆಸರನ್ನು ಪ್ರಯಾಗ್‌ರಾಜ್‌ ಆಕ್ರಮಿಸಿಕೊಂಡಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ