Udayavni Special

ಅಂಧೇರಿ ಶ್ರೀ ಮದ್ಭಾರತ ಮಂಡಳಿ: 142ನೇ ವಾರ್ಷಿಕ ಮಹಾಸಭೆ

Team Udayavani, Apr 15, 2021, 12:08 PM IST

142nd Annual General Meeting

ಮುಂಬಯಿ: ನಗರದ ಹಿರಿಯ ಧಾರ್ಮಿಕ ಸಂಸ್ಥೆ ಶ್ರೀ ಮದ್ಭಾರತ ಮಂಡಳಿಯ 142ನೇ ವಾರ್ಷಿಕ ಮಹಾಸಭೆ ಮಾ. 21ರಂದು ಪೂರ್ವಾಹ್ನ 11ರಿಂದ ಮಂಡಳಿಯ ಅಧ್ಯಕ್ಷ ಜಗನ್ನಾಥ ಪುತ್ರನ್‌ ಅಧ್ಯಕ್ಷತೆಯಲ್ಲಿ ಮಂಡಳಿಯ ಶ್ರೀ ಲಕ್ಷ್ಮೀನಾರಾಯಣ ಮಂದಿರದ ಪ್ರವಚನ ಸಭಾಗೃಹದಲ್ಲಿ ಜರಗಿತು.

ಜತೆ ಕಾರ್ಯದರ್ಶಿ ಲೋಕನಾಥ್‌ ಪಿ. ಕಾಂಚನ್‌ ವಾರ್ಷಿಕ ವರದಿ ವಾಚಿಸಿದರು. ಅಧ್ಯಕ್ಷ ಜಗನ್ನಾಥ ಪಿ. ಪುತ್ರನ್‌ ಅವರು ಮಂಡಳಿಯ ಆರಾಧ್ಯ ದೇವರಾದ ಶ್ರೀ ಲಕ್ಷ್ಮೀನಾರಾಯಣ ದೇವರನ್ನು ಪ್ರಾರ್ಥಿಸಿದರು.
ಗತ ಮಹಾಮಹಾಸಭೆಯ ಟಿಪ್ಪಣಿಯನ್ನು ಜತೆ ಕಾರ್ಯದರ್ಶಿ ಹರಿಶ್ಚಂದ್ರ ಸಿ. ಕಾಂಚನ್‌ ಮಂಡಿಸಿದರು. 2019-2020ನೇ ಸಾಲಿನ ವಾರ್ಷಿಕ ಆಯವ್ಯಯ ಪಟ್ಟಿಯನ್ನು ಪ್ರಧಾನ ಕೋಶಾಧಿಕಾರಿ ಕೇಶವ ಆರ್‌. ಪುತ್ರನ್‌ ಮಂಡಿಸಿದರು. 2021-2022ನೇ ಸಾಲಿಗೆ ಲೆಕ್ಕ ಪರಿಶೋಧಕರನ್ನಾಗಿ ಪಿ. ಸಿಂಗಾನಿಯ ಕಂಪೆನಿಯನ್ನು ನೇಮಿಸಲಾಯಿತು. ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಜೀರ್ಣೋದ್ಧಾರಕ್ಕೆ ದೇಣಿಗೆ ನೀಡಿದ ಬಗ್ಗೆ ಪ್ರಧಾನ ಕೋಶಾಧಿಕಾರಿ ಕೇಶವ ಪುತ್ರನ್‌ ಅವರು ಮಾಹಿತಿ ನೀಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಾರ್ವಜನಿಕ ಚಾರಿಟಿ ಟ್ರಸ್ಟಿಗೆ ಪೂರ್ವ ಸಿದ್ಧತೆ ಮಾಡಿಕೊಂಡಿದ್ದ ಹಣದ ಬಗ್ಗೆ ಪ್ರಧಾನ ಕೋಶಾಧಿಕಾರಿ ಕೇಶವ ಪುತ್ರನ್‌ ವಿವರಿಸಿ, ಸಭೆಯಲ್ಲಿ ಇದರ ಬಗ್ಗೆ ಅನುಮತಿ ಪಡೆದುಕೊಂಡರು. ಈ ಸಂದರ್ಭ ಚಂದ್ರಶೇಖರ್‌ ಆರ್‌. ಸಾಲ್ಯಾನ್‌ ಅವರ ಪತ್ನಿ ಡಾ| ಜಯಶ್ರೀ ಸಿ. ಸಾಲ್ಯಾನ್‌ ತಮ್ಮ ಕುಟುಂಬದ ಪರವಾಗಿ ಮಂದಿರದ ಜೀರ್ಣೋದ್ಧಾರಕ್ಕೆ ಒಂದು ಲಕ್ಷ ರೂ. ದೇಣಿಗೆ ನೀಡಿದರು. ಅವರಿಗೆ ಈ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸಿ ಅವರ ಕುಟುಂಬ ಪರಿವಾರಕ್ಕೆ ದೇವರ ಆಶೀರ್ವಾದ ಇರಲಿ ಎಂದು ಪ್ರಾರ್ಥಿಸಲಾಯಿತು.

ಅಧ್ಯಕ್ಷ ಜಗನ್ನಾಥ ಪಿ. ಪುತ್ರನ್‌ ಮಾತನಾಡಿ, ಮಂದಿರದ ಜೀರ್ಣೋದ್ಧಾರ ಕಾರ್ಯದ ಬಗ್ಗೆ ಮುಂಬಯಿ ಮನಪಾ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇವೆ. ಶೀಘ್ರದಲ್ಲೇ ಅದರ ಫಲಿತಾಂಶ ಬರಬಹುದು. ಕೋವಿಡ್‌ ಮಹಾಮಾರಿಯಿಂದ ಈಗಲೂ ಜನಸಾಮಾನ್ಯರು ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. ಸರ್ವರು ಜಾಗ್ರತೆ ವಹಿಸಬೇಕಾದ ಅನಿವಾರ್ಯ ಇದೆ ಎಂದರು.

ಮಂದಿರದ ಮಹಿಳಾ ಭಕ್ತ ಮಂಡಳಿಯವರು ಮಂಡಳಿಗೆ ಕೊಡುಗೆಯಾಗಿ ನೀಡಿದ ಧ್ವನಿವರ್ಧಕವನ್ನು ಮಹಾಸಭೆಯಲ್ಲಿ ಮಂಡಳಿಗೆ ಹಸ್ತಾಂತರಿಸಲಾಯಿತು. ಜಗನ್ನಾಥ ಪಿ. ಪುತ್ರನ್‌, ಸಂಜೀವ ವಿ. ಚಂದನ್‌, ವಿ. ಕೆ. ಸುವರ್ಣ, ಲೋಕನಾಥ ಕಾಂಚನ್‌, ಹರಿಶ್ಚಂದ್ರ ಸಿ. ಕಾಂಚನ್‌, ಗೋವಿಂದ ಎನ್‌. ಪುತ್ರನ್‌, ಶ್ಯಾಮ ಪುತ್ರನ್‌, ಕೇಶವ ಪುತ್ರನ್‌, ಅಶೋಕ್‌ ಸುವರ್ಣ ಉಪಸ್ಥಿತರಿದ್ದರು. ಜತೆ ಕಾರ್ಯದರ್ಶಿ ಲೋಕನಾಥ ಪಿ. ಕಾಂಚನ್‌ ವಂದಿಸಿದರು. ಕೊರೊನಾ ಮಾರ್ಗಸೂಚಿಗಳಿಗೆ ಅನುಗುಣವಾಗಿ ಮಹಾಸಭೆ ನಡೆಯಿತು.

ಟಾಪ್ ನ್ಯೂಸ್

ಉತ್ತರ ಕನ್ನಡ ಜಿಲ್ಲಾಧಿಕಾರಿಗೆ ಕೊರೋನಾ ಪಾಜಿಟಿವ್

ಉತ್ತರ ಕನ್ನಡ ಜಿಲ್ಲಾಧಿಕಾರಿಗೆ ಕೋವಿಡ್ ಪಾಸಿಟಿವ್

ಜ್ವೆರೇವ್‌ ಮ್ಯಾಡ್ರಿಡ್‌ ಮಾಸ್ಟರ್‌ : ಬೆರೆಟಿನಿ ವಿರುದ್ಧ 6-7 (8-10), 6-4, 6-3 ಗೆಲುವು

ಜ್ವೆರೇವ್‌ ಮ್ಯಾಡ್ರಿಡ್‌ ಮಾಸ್ಟರ್‌ : ಬೆರೆಟಿನಿ ವಿರುದ್ಧ 6-7 (8-10), 6-4, 6-3 ಗೆಲುವು

ಲಾಕ್ ಡೌನ್ ನಲ್ಲಿ ನಕಲಿ ಐಡಿ ತಯಾರಿಸುತ್ತಿದ್ದ ಅಂಗಡಿ ಮೇಲೆ ದಾಳಿ: ಇಬ್ಬರ ಸೆರೆ

ಲಾಕ್ ಡೌನ್ ನಲ್ಲಿ ನಕಲಿ ಐಡಿ ತಯಾರಿಸುತ್ತಿದ್ದ ಅಂಗಡಿ ಮೇಲೆ ದಾಳಿ: ಇಬ್ಬರ ಸೆರೆ

ಟೆಸ್ಟ್‌ ಸರಣಿ : ಜಿಂಬಾಬ್ವೆ ಎದುರು ಪಾಕ್‌ ಕ್ಲೀನ್‌ಸ್ವೀಪ್ ಸಾಧನೆ

ಟೆಸ್ಟ್‌ ಸರಣಿ : ಜಿಂಬಾಬ್ವೆ ಎದುರು ಪಾಕ್‌ ಕ್ಲೀನ್‌ಸ್ವೀಪ್ ಸಾಧನೆ

ಇಂಗ್ಲೆಂಡ್‌ ವಿರುದ್ಧ ಭಾರತ 3-2 ಸರಣಿ ಗೆಲುವು ಸಾಧಿಸಲಿದೆ: ದ್ರಾವಿಡ್‌ ಭವಿಷ್ಯ

ಇಂಗ್ಲೆಂಡ್‌ ವಿರುದ್ಧ ಭಾರತ 3-2 ಸರಣಿ ಗೆಲುವು ಸಾಧಿಸಲಿದೆ: ದ್ರಾವಿಡ್‌ ಭವಿಷ್ಯ

10-18

ಸಾಂತರಸರ ಕಾಲದ ವೀರಗಲ್ಲು ಪತ್ತೆ

auto

ವಾಹನ ತಪಾಸಣೆ ವೇಳೆ ಕಾನ್ಸ್‌ಟೇಬಲ್‌ ಸಮೇತ ಆಟೋ ಚಾಲಕ ಎಸ್ಕೇಪ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Food distribution in covid hospitals

ಡಬ್ಟಾವಾಲಾರಿಂದ ಕೋವಿಡ್‌ ಆಸ್ಪತ್ರೆಗಳಲ್ಲಿ ಆಹಾರ ವಿತರಣೆ

Sample service from covid Care Center

ಮಹರ್ಷಿ ಕಾರ್ವೆ ಸ್ತ್ರೀ ಶಿಕ್ಷಣ ಸಂಸ್ಥೆಯ ಕೋವಿಡ್‌ ಕೇರ್‌ ಸೆಂಟರ್‌ನಿಂದ ಮಾದರಿ ಸೇವೆ

Bhairappa

“ಭೈರಪ್ಪನವರು ತಮ್ಮದೇ ಆದ ಒಂದು ಶೈಲಿಯನ್ನು ಹೊಂದಿದ್ದಾರೆ”

“Saves Many Lives from Blood Donation”

“ರಕ್ತದಾನದಿಂದ ಹಲವು ಜೀವಗಳ ರಕ್ಷಣೆ”

covid Lockdown

ಕೋವಿಡ್ ಲಾಕ್‌ಡೌನ್‌: ಸಂಕಷ್ಟದಲ್ಲಿ ಚೆಂಡು ಹೂ ಬೆಳೆಗಾರರು

MUST WATCH

udayavani youtube

ನವಮಂಗಳೂರು ಬಂದರಿಗೆ ಆಗಮಿಸಿದ ಮೆಡಿಕಲ್ ಆಕ್ಸಿಜನ್ ಹೊತ್ತ ಕುವೈತ್ ಹಡಗು

udayavani youtube

ಕರುನಾಡಿಗೆ ಯಾಕೆ ಈ ಪರಿಸ್ಥಿತಿ ಬಂತು?

udayavani youtube

ವೈದ್ಯರ ಏಪ್ರಾನ್ ಧರಿಸಿ ತರಕಾರಿ ಖರೀದಿಗೆ ಬಂದಿದ್ದ ಯುವಕ

udayavani youtube

ಲಾಠಿ ಏಟಿನ ಭೀತಿ : ತಲೆಗೆ ಹೆಲ್ಮೆಟ್‌, ಬೆನ್ನಿಗೆ ತಗಡಿನ ಶೀಟ್‌ ಕಟ್ಟಿಕೊಂಡ ಸೈಕಲ್‌ ಸವಾರ

udayavani youtube

ಸರ್ಕಾರ ತನ್ನ ಕೆಲಸ ನಿರ್ವಹಿಸಿದ್ದರೆ, ಈ ಸ್ಥಿತಿ ಬರುತ್ತಿರಲಿಲ್ಲ

ಹೊಸ ಸೇರ್ಪಡೆ

ಉತ್ತರ ಕನ್ನಡ ಜಿಲ್ಲಾಧಿಕಾರಿಗೆ ಕೊರೋನಾ ಪಾಜಿಟಿವ್

ಉತ್ತರ ಕನ್ನಡ ಜಿಲ್ಲಾಧಿಕಾರಿಗೆ ಕೋವಿಡ್ ಪಾಸಿಟಿವ್

ಜ್ವೆರೇವ್‌ ಮ್ಯಾಡ್ರಿಡ್‌ ಮಾಸ್ಟರ್‌ : ಬೆರೆಟಿನಿ ವಿರುದ್ಧ 6-7 (8-10), 6-4, 6-3 ಗೆಲುವು

ಜ್ವೆರೇವ್‌ ಮ್ಯಾಡ್ರಿಡ್‌ ಮಾಸ್ಟರ್‌ : ಬೆರೆಟಿನಿ ವಿರುದ್ಧ 6-7 (8-10), 6-4, 6-3 ಗೆಲುವು

ಲಾಕ್ ಡೌನ್ ನಲ್ಲಿ ನಕಲಿ ಐಡಿ ತಯಾರಿಸುತ್ತಿದ್ದ ಅಂಗಡಿ ಮೇಲೆ ದಾಳಿ: ಇಬ್ಬರ ಸೆರೆ

ಲಾಕ್ ಡೌನ್ ನಲ್ಲಿ ನಕಲಿ ಐಡಿ ತಯಾರಿಸುತ್ತಿದ್ದ ಅಂಗಡಿ ಮೇಲೆ ದಾಳಿ: ಇಬ್ಬರ ಸೆರೆ

ಟೆಸ್ಟ್‌ ಸರಣಿ : ಜಿಂಬಾಬ್ವೆ ಎದುರು ಪಾಕ್‌ ಕ್ಲೀನ್‌ಸ್ವೀಪ್ ಸಾಧನೆ

ಟೆಸ್ಟ್‌ ಸರಣಿ : ಜಿಂಬಾಬ್ವೆ ಎದುರು ಪಾಕ್‌ ಕ್ಲೀನ್‌ಸ್ವೀಪ್ ಸಾಧನೆ

10-20

ಅನಗತ್ಯವಾಗಿ ಓಡಾಡಿದವರಿಗೆ ಪೊಲೀಸರಿಂದ ಲಾಠಿ ಬಿಸಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.