ನ್ಯಾಯಾಲಯದಲ್ಲಿ 5 ಸಾವಿರ ರೆಮ್‌ಡಿಸಿವಿರ್
Team Udayavani, Apr 26, 2021, 11:59 AM IST
ಮುಂಬಯಿ: ಕೊರೊನಾ ಸೋಂಕಿತರ ಚಿಕಿತ್ಸೆಗೆ ಬಳಸಲಾಗುವ ರೆಮ್‌ಡಿಸಿವಿರ್ ಔಷಧ ಯನ್ನು ಪೂರೈಸುವ ಬಗ್ಗೆ ಮಹಾರಾಷ್ಟ್ರ ಸರಕಾರವು ಕೇಂದ್ರದೊಂದಿಗೆ ಜಗಳವಾಡುತ್ತಿರುವ ಮಧ್ಯೆ ರಾಜ್ಯ ಏಜೆನ್ಸಿಗಳು ವಶಪಡಿಸಿಕೊಂಡ ಸುಮಾರು 5,000 ರೆಮ್‌ಡಿಸಿವಿರ್ ಬಾಟಲಿಗಳು ನ್ಯಾಯಾಲಯದ ಅನುಮತಿಯಿಲ್ಲದೆ ಬಾಕಿ ಉಳಿದಿವೆ.
ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಮಹಾರಾಷ್ಟ್ರದ ವಿವಿಧ ಭಾಗಗಳಲ್ಲಿ ಆಹಾರ ಮತ್ತು ಔಷಧ ಆಡಳಿತ (ಎಫ್‌ಡಿಎ) ಮತ್ತು ಪೊಲೀಸ್ ಇಲಾಖೆ ನಡೆಸಿದ ದಾಳಿ ವೇಳೆ ಈ ಬಾಟಲುಗಳನ್ನು ವಶಪಡಿಸಿಕೊಳ್ಳಲಾಗಿದೆ. ದಾಳಿಯ ಸಮಯದಲ್ಲಿ ಸುಮಾರು 5,000 ರೆಮ್‌ಡಿಸಿವಿರ್ ಬಾಟಲುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದನ್ನು ಬಳಸಲು ನ್ಯಾಯಾಲಯವು ಆದಷ್ಟು ಬೇಗ ಅನುಮತಿ ನೀಡಬೇಕು ಎಂದು ಎಫ್‌ಡಿಎ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ವಶಪಡಿಸಿಕೊಂಡ ಬಳಿಕ ನಾವು ಸಾಕ್ಷ್ಯಗಳನ್ನು ಸಂಗ್ರಹಿಸಬೇಕು, ವಶಪಡಿಸಿಕೊಂಡ ಔಷಧಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು. ಪ್ರಕರಣವನ್ನು ಗೆಲ್ಲಲು ಸಾಕ್ಷ್ಯಗಳು ತುಂಬಾ ಬಲವಾಗಿರಬೇಕು. ಆಗ ಮಾತ್ರ ಈ ಬಾಟಲುಗಳನ್ನು ಕೋವಿಡ್ ರೋಗಿಗಳಿಗೆ ಬಳಸಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಸೋಂಕಿನ ನಿರ್ದಿಷ್ಟ ಅವಧಿಯಲ್ಲಿ ರೆಮ್‌ಡಿಸಿವಿರ್ ಅನ್ನು ಬಳಸಬೇಕಾಗುತ್ತದೆ. ಸಾಮಾನ್ಯವಾಗಿ ಕನಿಷ್ಠ ಆರು ದಿನಗಳ ಸೋಂಕನ್ನು ಪೂರ್ಣಗೊಳಿಸಿದ ರೋಗಿಗಳ ಮೇಲೆ ಬಳಿಸಿದಾಗ ಇದು ಕಾರ್ಯನಿರ್ವಹಿಸುವುದಿಲ್ಲ.
ತಡವಾಗಿ ಸೇವಿಸಿದರೆ ಔಷಧ ರೋಗಿಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ವಶಪಡಿಸಿಕೊಂಡ ಬಾಟಲುಗಳ ಈ ಸಂಗ್ರಹವನ್ನು ನಾವು ಬಳಸದಿದ್ದರೆ, ಕೆಲವು ಕೋವಿಡ್ ರೋಗಿಗಳ ಸ್ಥಿತಿ ಹದಗೆಡುವುದನ್ನು ನಾವು ತಡೆಯಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸನಾತನ ಧರ್ಮದ ನೆಮ್ಮದಿ ವಿದೇಶಿ ಸಂಸ್ಕೃತಿಯಲ್ಲಿಲ್ಲ: ವಿದ್ಯಾಪ್ರಸನ್ನ ಸ್ವಾಮೀಜಿ
ಬಂಟರು ಸಹೃದಯಿ ದಾನಿಗಳಾಗಲಿ: ಎಸ್.ಎಂ. ಶೆಟ್ಟಿ
ಭವಾನಿ ಫೌಂಡೇಶನ್ ಆರ್ಥಿಕವಾಗಿ ಹಿಂದುಳಿದವರ ಆಶಾಕಿರಣ: ಡಾ| ಶಿಶಿರ್ ಶೆಟ್ಟಿ
ಸಂಘದಿಂದ ಸಮಾಜ ಬಾಂಧವರಿಗೆ ನೆರವಾಗುವ ಯೋಜನೆ ಜಾರಿ: ಸಂತೋಷ್ ಶೆಟ್ಟಿ
ಜೂ. 12: ಶ್ರೀ ಭುವನೇಶ್ವರಿ ಮಾತೆಯ ಮೂರ್ತಿ ಪ್ರತಿಷ್ಠೆ ಉತ್ಸವ, ಧಾರ್ಮಿಕ ಕಾರ್ಯಕ್ರಮ