ಮನಪಾ ಚುನಾವಣೆ: ಚಿತ್ರನಟಿ ನಿಶಾ ಬಂಗೇರ ಬಿಜೆಪಿಯಿಂದ ಸ್ಪರ್ಧೆ

Team Udayavani, Feb 9, 2017, 4:16 PM IST

ಮುಂಬಯಿ: ಪ್ರಸ್ತುತ ಮಹಾನಗರ ಪಾಲಿಕಾ ಚುನಾವಣೆಯಲ್ಲಿ ಖ್ಯಾತ ಮರಾಠಿ ನಟಿ ನಿಶಾ ಸುರೇಶ್‌ ಬಂಗೇರ ಅವರು ಕಾಂದಿವಲಿ ಪೂರ್ವ ಠಾಕೂರ್‌ ವಿಲೇಜ್‌ನಿಂದ ವಾರ್ಡ್‌ ಕ್ರಮಾಂಕ – 25ರಿಂದ ಬಿಜೆಪಿ ಪಕ್ಷದಿಂದ ಸ್ಪರ್ಧಿಸುತ್ತಿದ್ದಾರೆ. ಕಳೆದ ಸುಮಾರು 18 ವರ್ಷಗಳಿಂದ ಮರಾಠಿ ಕಿರುತೆರೆ ಹಾಗೂ ಚಲನಚಿತ್ರಗಳಲ್ಲಿ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸುತ್ತಾ ಅಭಿಮಾನಿಗಳ ಮೆಚ್ಚುಗೆ ಪಡೆದ ಇವರು ಮರಾಠಿ ಅಭಿಮಾನಿಗಳಿಗೆ ನಿಶಾ ಪರುಳೇಕರ್‌ ಎಂದೇ ಪರಿಚಿತರು.

ಮಂಜೇಶ್ವರ ಮೂಲದ ಕಾಂದಿವಲಿಯ ಉದ್ಯಮಿ ಸುರೇಶ್‌ ಬಂಗೇರ ಅವರ ಪತ್ನಿಯಾಗಿರುವ  ನಿಶಾ ಇವರು ತೀಯಾ ಸಮಾಜ ಮುಂಬಯಿ ಸಂಸ್ಥೆಯ ಸದಸ್ಯೆಯಾಗಿದ್ದಾರೆ.  ಹಿಂದಿ ಹಾಗೂ ಮರಾಠಿ ಭಾಷೆಗಳ  ಹಲವಾರು ಚಿತ್ರಗಳಲ್ಲಿ ಹಾಗೂ ಧಾರವಾಹಿಗಳಲ್ಲಿ ಅಭಿನಯಿಸಿದ ಇವರು ಇತ್ತೀಚೆಗೆ  ಬಿಡುಗಡೆಗೊಂಡ ರಮಾಬಾಯಿ ಅಂಬೇ ಡ್ಕರ್‌ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿ ದ್ದಾರೆ. ತಾನು ಸ್ಪರ್ಧಿಸುತ್ತಿ ರುವ ಹಿಂದುಳಿದ ಪ್ರದೇಶದ ಜನರಿಗೆ ಉತ್ತಮ ಸೇವೆ ನೀಡುವುದರೊಂದಿಗೆ ಆ ಪ್ರದೇಶದ ಅಭಿವೃದ್ದಿಯ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುದರ ಮೂಲಕ ಜನ ಸಾಮಾನ್ಯರ ಸೇವೆ ಮಾಡುವುದಾಗಿ ನಿಶಾ ಬಂಗೇರ ತಿಳಿಸಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ