ಫೋರಂ ಆಫ್‌ ಬಂಟ್ಸ್‌ ಚಾರ್ಟರ್ಡ್‌ ಅಕೌಂಟೆಂಟ್ಸ್‌ನಿಂದ ಕೇಂದ್ರ ಬಜೆಟ್‌-2019 ವಿಶ್ಲೇಷಣೆ

ದೇಶದ ಹಿತದೃಷ್ಟಿಯಿಂದ ಉತ್ತಮ ಬಜೆಟ್‌: ಸಿಎ ರಮೇಶ್‌ ಶೆಟ್ಟಿ

Team Udayavani, Jul 9, 2019, 5:03 PM IST

ಮುಂಬಯಿ: ಸಮಾಜದ ಪ್ರತಿಯೊಬ್ಬರಿಗೂ ಸಮಾನ ಅವಕಾಶವನ್ನು ನೀಡುವಂಥ ಬಜೆಟ್‌ನ್ನು ಈ ಬಾರಿ ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರಕಾರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮ್‌ ಅವರು ಮಂಡಿಸಿರುವುದು ದೇಶದ ಭವಿಷ್ಯದ ಆರ್ಥಿಕ ಬೆಳವಣಿಗೆಗೆ ಪೂರಕವಾಗಿದ್ದು, ದೇಶದ ಹಿತದೃಷ್ಟಿಯಿಂದ ಉತ್ತಮ ಬಜೆಟ್‌ ಇದಾಗಿದೆ ಎಂದು ಫೋರಂ ಆಫ್‌ ಮುಂಬಯಿ ಬಂಟ್ಸ್‌ ಚಾಟೇìಡ್‌ ಅಕೌಂಟೆಂಟ್ಸ್‌ನ ಕಾರ್ಯಾಧ್ಯಕ್ಷ ಸಿಎ ರಮೇಶ್‌ ಎ. ಶೆಟ್ಟಿ ಅವರು ನುಡಿದರು.
ಜು. 6ರಂದು ಕುರ್ಲಾ ಪೂರ್ವದ ಬಂಟರ ಭವನದಲ್ಲಿ ಫೋರಂ ಆಫ್‌ ಬಂಟ್ಸ್‌ ಚಾರ್ಟೆಡ್‌ ಅಕೌಂಟೆಂಟ್ಸ್‌ ಆಯೋಜಿಸಿದ ಯೂನಿಯನ್‌ ಬಜೆಟ್‌-2019 ವಿಶ್ಲೇಷಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೇಂದ್ರ ಬಜೆಟ್‌ ವಿಶ್ಲೇಷಣಾ ಕಾರ್ಯಕ್ರಮವನ್ನು ಫೋರಂ ಆಫ್‌ ಮುಂಬಯಿ ಬಂಟ್ಸ್‌ ಚಾರ್ಟೆಡ್‌ ಅಕೌಂಟೆಂಟ್ಸ್‌ನ ಹಲವು ವರ್ಷಗಳಿಂದ ಆಯೋಜಿಸುತ್ತಾ ಬರುತ್ತಿದ್ದು, ಇದಕ್ಕೆ ನಮಗೆ ಬಂಟರ ಸಂಘ ಮುಂಬಯಿ, ಆಹಾರ್‌ ಮುಂಬಯಿ ಹಾಗೂ ಇಂಡಿಯನ್‌ ಬಂಟ್ಸ್‌ ಛೇಂಬರ್‌ ಆಫ್‌ ಕಾಮರ್ಸ್‌ ಆ್ಯಂಡ್‌ ಇಂಡಸ್ಟಿÅà ಸಂಸ್ಥೆಗಳ ಸಂಪೂರ್ಣ ಸಹಕಾರ ನೀಡುತ್ತಾ ಬಂದಿವೆ. ದೇಶದ ಅರ್ಥವ್ಯವಸ್ಥೆಯ ಹಿಂಜರಿತದಿಂದ ಕಾಪಾಡಿಕೊಳ್ಳಲು ಇದು ಉತ್ತಮ ಬಜೆಟ್‌ ಆಗಿದ್ದು, ನಿರುದ್ಯೋಗ, ಬರಗಾಲ, ಕೃಷಿ ಇನ್ನಿತರ ಕ್ಷೇತ್ರಗಳಿಗೆ ಭರವಸೆಯನ್ನು ಹುಟ್ಟಿಸಲಾಗಿದೆ. ಪ್ರತೀ ವರ್ಷ ಬಜೆಟ್‌ ವಿಶ್ಲೇಷಣ ಕಾರ್ಯಕ್ರಮಕ್ಕೆ ಆರ್ಥಿಕ
ತಜ್ಞರನ್ನು ಆಹ್ವಾನಿಸಿ ಅರ್ಥಪೂರ್ಣ ಉಪನ್ಯಾಸವನ್ನು ನೀಡಿ ಎಲ್ಲರಿಗೂ ಸಹಕರಿಸಲಾಗುತ್ತಿದೆ. ನಮ್ಮ ಇಂತಹ ಸಮಾಜಪರ ಕಾರ್ಯಗಳಿಗೆ ಎಲ್ಲರ ಸಹಕಾರ ಸದಾಯಿರಲಿ ಎಂದು ನುಡಿದರು.

ಪ್ರಾರಂಭದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಂಟರ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ ಅವರು ಮಾತನಾಡಿ, ಫೋರಂ ಆಫ್‌ ಬಂಟ್ಸ್‌ ಚಾರ್ಟರ್ಡ್‌ ಅಕೌಂಟೆಂಟ್ಸ್‌ ಸಂಸ್ಥೆಯು ಆಯೋಜಿಸಿದ ಈ ಬಜೆಟ್‌ ವಿಶ್ಲೇಷಣೆ ಕಾರ್ಯಕ್ರಮವು ಸಮಾಜದ ಉದ್ಯಮಿಗಳಿಗೆ ಹಾಗೂ ಹೊಟೇಲಿಗರಿಗೆ ಅನುಕೂಲವಾಗಿದೆ. ಇಂತಹ ಕಾರ್ಯಕ್ರಮಗಳಿಂದ ಬಜೆಟ್‌ ಬಗ್ಗೆ ನಮ್ಮಲ್ಲಿರುವ ಹಲವಾರು ಗೊಂದಲಗಳನ್ನು ನಿವಾ ರಿಸಲು ಸಾಧ್ಯವಾಗುತ್ತದೆ. ಇಂತಹ ಸಮಾಜಪರ ಕಾರ್ಯಕ್ರಮಗಳಿಗೆ ಬಂಟರ ಸಂಘದ ಪ್ರೋತ್ಸಾಹ, ಸಹಕಾರ ಸದಾಯಿದೆ ಎಂದು ಹೇಳಿ ಶುಭಹಾ ರೈಸಿದರು.

ಕಾರ್ಯಕ್ರಮದ ವೇದಿಕೆ ಯಲ್ಲಿ ಇಂಡಿಯನ್‌ ಬಂಟ್ಸ್‌ ಛೇಂಬರ್‌ ಆಫ್‌ ಕಾಮರ್ಸ್‌ ಆ್ಯಂಡ್‌ ಇಂಡಸ್ಟಿÕàಸ್‌ ಅಧ್ಯಕ್ಷ ಕೆ. ಸಿ. ಶೆಟ್ಟಿ ಹಾಗೂ ಎಸ್‌. ಬಿ. ಶೆಟ್ಟಿ, ಆಹಾರ್‌ನ ಅಧ್ಯಕ್ಷ ಸಂತೋಷ್‌ ಶೆಟ್ಟಿ, ಫೋರಂ ಆಫ್‌ ಬಂಟ್ಸ್‌ ಚಾರ್ಟೆಡ್‌ ಅಕೌಂಟೆಂಟ್‌ ಉಪ ಕಾರ್ಯಾಧ್ಯಕ್ಷ ಸಿಎ ಹರೀಶ್‌ ಹೆಗ್ಡೆ, ಗೌರವ ಕಾರ್ಯದರ್ಶಿ ಸಿಎ ವಿಶ್ವನಾಥ ಎನ್‌. ಶೆಟ್ಟಿ, ಕೋಶಾಧಿಕಾರಿ ಸಿಎ ಕೆ. ರಮನಾಥ್‌ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸಿಎ ರಾಜೇಶ್‌ ಸಾಂಘಿÌ ಅವರು ಡೈರೆಕ್ಟ್ ಟ್ಯಾಕ್ಸಸ್‌, ನ್ಯಾಯವಾದಿ ಪ್ರಕಾಶ್‌ ಕೆ. ಶೆಟ್ಟಿ ಅವರು ಇನ್‌ಡೈರೆಕ್ಟ್ ಟ್ಯಾಕ್ಸಸ್‌ ಆ್ಯಂಡ್‌ ಜಿಎಸ್‌ಟಿ ಎಂಬ ವಿಷಯದ ಮೇಲೆ ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ಸಭಿಕರ ಹಲವಾರು ಪ್ರಶ್ನೆಗಳು, ಗೊಂದಲಗಳಿಗೆ ಉಪನ್ಯಾಸಕರು ಸಮರ್ಪಕವಾಗಿ ಉತ್ತರಿಸಿದರು. ಉಪನ್ಯಾಸಕರನ್ನು ಸಂಸ್ಥೆಯ ಪದಾಧಿಕಾರಿಗಳು ಶಾಲು ಹೊದೆಸಿ, ಪುಷ್ಪಗುತ್ಛವನ್ನಿತ್ತು ಗೌರವಿಸಿದರು.

ಪ್ರಾರಂಭದಲ್ಲಿ ಫೋರಂ ಆಫ್‌ ಬಂಟ್ಸ್‌ ಚಾರ್ಟೆಡ್‌ ಅಕೌಂಟೆಂಟ್ಸ್‌ ವಾರ್ಷಿಕ ಮಹಾಸಭೆಯನ್ನು ಆಯೋಜಿಸಲಾಗಿತ್ತು. ನೂತನ ಕಾರ್ಯಾಧ್ಯಕ್ಷರಾಗಿ ಸಿಎ ಹರೀಶ್‌ ಹೆಗ್ಡೆ, ಉಪ ಕಾರ್ಯಾಧ್ಯಕ್ಷರಾಗಿ ಸಿಎ ವಿಶ್ವನಾಥ ಎನ್‌. ಶೆಟ್ಟಿ, ಗೌರವ ಕಾರ್ಯದರ್ಶಿಯಾಗಿ ಅಶೋಕ್‌ ಆರ್‌. ಶೆಟ್ಟಿ, ಗೌರವ ಕೋಶಾಧಿಕಾರಿಯಾಗಿ ಸಿಎ ಸುದೇಶ್‌ ಶೆಟ್ಟಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಬಂಟರ ಸಂಘ ಮುಂಬಯಿ, ಆಹಾರ್‌ ಹಾಗೂ ಇಂಡಿಯನ್‌ ಬಂಟ್ಸ್‌ ಛೇಂಬರ್‌ ಆಫ್‌ ಕಾಮರ್ಸ್‌ ಆ್ಯಂಡ್‌ ಇಂಡಸ್ಟ್ರಿಸ್‌ ಜಂಟಿ ಆಯೋಜನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಂಟಿ ಸಂಸ್ಥೆಗಳ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಸಮಾಜ ಬಾಂಧವರು, ತುಳು-ಕನ್ನಡಿಗರು ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ಚಿತ್ರ-ವರದಿ:ಸುಭಾಶ್‌ ಶಿರಿಯಾ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ