ಜಿಎಸ್‌ಬಿ ಸೇವಾ ಮಂಡಲ: ಕಿಂಗ್‌ ಸರ್ಕಲ್‌ ಗಣೇಶೋತ್ಸವದ ಪೂರ್ವಭಾವಿ ಸಭೆ

Team Udayavani, Sep 9, 2021, 2:35 PM IST

ಜಿಎಸ್‌ಬಿ ಸೇವಾ ಮಂಡಲ: ಕಿಂಗ್‌ ಸರ್ಕಲ್‌ ಗಣೇಶೋತ್ಸವದ ಪೂರ್ವಭಾವಿ ಸಭೆ

ಸಯಾನ್‌: ಜಿಎಸ್‌ಬಿ ಸೇವಾ ಮಂಡಲ ಮುಂಬಯಿ ಇದರ ಶ್ರೀಮಂತ ಗಣಪತಿ ಎಂದೇ ಪ್ರಸಿದ್ಧಿ ಪಡೆದ ಕಿಂಗ್‌ ಸರ್ಕಲ್‌ನ 67ನೇ ವಾರ್ಷಿಕ ಗಣೇಶೋತ್ಸವವು ಸೆ. 10ರಿಂದ 14ರ ವರೆಗೆ ಶ್ರೀ ಸುಕೃತೀಂದ್ರ ನಗರ ಕಿಂಗ್‌ ಸರ್ಕಲ್‌ನಲ್ಲಿ ಜರಗಲಿದ್ದು, ಇದರ ಐದನೇ ಪೂರ್ವಭಾವಿ ಸಭೆ ಸೆ. 4ರಂದು ಸಯಾನ್‌ ಪೂರ್ವದ ಮಂಡಲದ ಶ್ರೀ ಗುರುಗಣೇಶ ಪ್ರಸಾದ್‌ ಸಭಾಗೃಹದಲ್ಲಿ ಜರಗಿತು.

ಗಣೇಶೋತ್ಸವವು ಶ್ರೀ ಕಾಶೀ ಮಠಾಧೀಶ ವೃಂದಾವನಸ್ಥ ಶ್ರೀಮದ್‌ ಸುಧೀಂದ್ರ ತೀರ್ಥ ಸ್ವಾಮೀಜಿ ಹಾಗೂ ಶ್ರೀಮದ್‌ ಸಂಯಮೀಂದ್ರ ತೀರ್ಥ ಸ್ವಾಮೀಜಿ ಅವರ ಅನುಗ್ರಹ ಮತ್ತು ಮಾರ್ಗದರ್ಶನದಲ್ಲಿ ನಡೆಯಲಿದ್ದು, ಪೂರ್ವ ಭಾವಿ ಸಭೆಯ ಪ್ರಾರಂಭದಲ್ಲಿ ಪ್ರಧಾನ ವೈಧಿಕರಾದ ವಿಜಯ ಭಟ್‌ ಪ್ರಾರ್ಥನೆಗೈದರು. ಗಣೇಶೋತ್ಸವ ಆಯೋಜನ ಸಮಿತಿಯ ಸಂಚಾಲಕ ಡಾ| ಭುಜಂಗ ಪೈ ಅಧ್ಯಕ್ಷತೆ ವಹಿಸಿ ಸ್ವಾಗತಿಸಿ, ಈ ವರ್ಷದ ಗಣೇಶೋತ್ಸವಕ್ಕೆ ಭಕ್ತರು ಈ ವರೆಗೆ ಸಲ್ಲಿಸಿದ ಪೂಜಾ ಸೇವೆಯ ವಿವರ ನೀಡಿ, ಧನ ಸಂಗ್ರಹದ ಬಗ್ಗೆ ವಿವರಿಸಿದರು.

ವಿಜಯ ಭಟ್‌ ಮಾತನಾಡಿ, ನಾವು ಪ್ರತೀ ವರ್ಷ ಗಣೇಶೋತ್ಸವದ ಧನ ಸಂಗ್ರಹದ ಪ್ರಾರಂ ಭದಲ್ಲಿ ಪೂಜ್ಯ ಗುರುವರ್ಯ ವೃಂದಾವನಸ್ಥ ಮಾಧವೇಂದ್ರ ತೀರ್ಥ ಸ್ವಾಮೀಜಿ ವಾಲ್ಕೇಶ್ವರ ಶ್ರೀ ಕಾಶೀ ಮಠದಲ್ಲಿ ಪ್ರಾರ್ಥನೆ ಸಲ್ಲಿಸಿ ಬಳಿಕ ಕಾರ್ಯಪ್ರವೃತ್ತರಾಗುತ್ತಿದ್ದೇವೆ ಎಂದು ತಿಳಿಸಿದರು.

ಇದನ್ನೂ ಓದಿ:ವಿಜಯಪುರ ಪೊಲೀಸರಿಂದ ಏಳು ಅಂತಾರಾಜ್ಯ ಕಳ್ಳರ ಬಂಧನ

ಜಿ. ಜಿ. ಪ್ರಭು ಮಾತನಾಡಿ, ಜಿಎಸ್‌ಬಿ ಯುವ ವಿಭಾಗದವರಿಂದ ಹಲವು ಉತ್ತಮ ಕಾರ್ಯಗಳ ಬಗ್ಗೆ ಉಲ್ಲೇಖೀಸಿ ಸಮಾಜಕ್ಕೆ ಅವರಿಂದ ಇನ್ನೂ ಹೆಚ್ಚಿನ ಸೇವೆ ಸಲ್ಲಲಿ ಎಂದು ಆಶಿಸಿದರು. ಜತೆ ಕಾರ್ಯದರ್ಶಿ ಪ್ರಶಾಂತ್‌ ಪುರಾಣಿಕ್‌ ಶುಭ ಹಾರೈಸಿದರು. ಜತೆ ಸಂಚಾಲಕ ಜಿ. ಡಿ. ರಾವ್‌ ಅವರು, ಧನ ಸಂಗ್ರಹವನ್ನು ಇನ್ನಷ್ಟು ವೃದ್ಧಿಸುವಂತೆ ಸ್ವಯಂಸೇವಕರಲ್ಲಿ ವಿನಂತಿಸಿದರು. ಮಂಡಲದ ಅಧ್ಯಕ್ಷ ರಮೇಶ್‌ ಭಂಡರ್ಕಾರ್‌ ಅವರು, ಸೇವಾದಾರರನ್ನು ಬೇಗ ಸಂಪರ್ಕಿಸುವಂತೆ ಹೇಳಿದರು. ಆರ್‌. ಜಿ. ಭಟ್‌ ಶುಭ ಹಾರೈಸಿದರು.

ಐದು ದಿನಗಳ ಕಾಲ ನಡೆಯಲಿರುವ ಗಣೇಶೋತ್ಸವದಲ್ಲಿ ಏಕೋತ್ತರ ಸಹಸ್ರ ಮಹಾಗಣಪತಿಯಾಗ, ಉದಯಾಸ್ತಮಾನ ಮಹಾ ಭೋಗ ಸೇವೆ, ಅತಿ ವಿಶೇಷ ಸೇವೆ, ಮಹಾ ಮೂಡುಗಣಪತಿ ಪೂಜೆ, ಸಹಸ್ರ ಮೋದಕ ಹವನ, ಪೂರ್ಣ ದಿನದ ಸೇವೆ, ಬ್ರಾಹ್ಮಣ ಸುಹಾಸಿನಿ ಸಂತರ್ಪಣೆ, ಮಧ್ಯಾಹ್ನ ಪೂಜೆ, ಭಾಗೀರಥಿ ಅಭಿಷೇಕ, ರಾತ್ರಿಪೂಜೆ, ಮೂಡುಗಣಪತಿ ಪೂಜೆ, ಕ್ಷೀರಾಭಿಷೇಕ, ಪೂರ್ಣ ದಿನದ ಹೂವಿನ ಪೂಜೆ, ಪಾನಕ ಸೇವೆ, 1001 ಮೋದಕ ನೈವೇದ್ಯ, ರಂಗಪೂಜೆ, ಉಷಾಪೂಜೆ, ಗಣಪತಿಹೋಮ, ಮೋದಕ ನೈವೇದ್ಯ, ಪ್ರಸಾದ ವಿತರಣೆ ಸೇವೆ ಸಲ್ಲಿಸಬಹುದು ಎಂದು ಸಭೆಯಲ್ಲಿ ತಿಳಿಸಲಾಯಿತು. ಸರಕಾರಿ ಮಾರ್ಗಸೂಚಿಗಳಿಗೆ ಅನುಗುಣವಾಗಿ ಗಣೇಶೋತ್ಸವ ಆಚರಣೆ ಜರಗುವುದರಿಂದ ಭಕ್ತರು ಪೂಜೆ, ಸೇವೆಯನ್ನು ವಿವಿಧ ಪ್ರಸಾರ ಮಾಧ್ಯಮದ ಮೂಲಕ ವೀಕ್ಷಿಸಬಹುದು. ಹೆಚ್ಚಿನ ವಿವರಗಳಿಗಾಗಿ ಸೇವಾ ಮಂಡಲದ (022-24078147, 022-24078 226) ಕಚೇರಿಯನ್ನು ಸಂಪರ್ಕಿಸಬಹುದು.

ಟಾಪ್ ನ್ಯೂಸ್

ಸಿ.ಟಿ ರವಿ ವಿರುದ್ಧ ಸ್ಪರ್ಧಿಸಿದರೆ ಅಡಿಕೆ ತೋಟ ಮಾರಿ 1 ಕೋಟಿ ರೂ ಕೊಡುತ್ತೇನೆ: ಸಿದ್ದರಾಮಯ್ಯಗೆ ಆಹ್ವಾನ

ಸಿ.ಟಿ ರವಿ ವಿರುದ್ಧ ಸ್ಪರ್ಧಿಸಿದರೆ ಅಡಿಕೆ ತೋಟ ಮಾರಿ 1 ಕೋಟಿ ರೂ ಕೊಡುತ್ತೇನೆ: ಸಿದ್ದರಾಮಯ್ಯಗೆ ಆಹ್ವಾನ

Suryakumar Yadav

ಎರಡು ಅದ್ಭುತ ಕ್ಯಾಚ್ ಗಳಿಂದ ಬೆರಗು ಮೂಡಿಸಿದ ಸೂರ್ಯಕುಮಾರ್; ವಿಡಿಯೋ ನೋಡಿ

ಲೋಕಸಭೆ ಕಲಾಪದಲ್ಲಿ ಅದಾನಿ ಗ್ರೂಪ್ ವಿರುದ್ಧದ ಆರೋಪದ ಬಗ್ಗೆ ಚರ್ಚೆಗೆ ವಿಪಕ್ಷಗಳ ಪಟ್ಟು

ಲೋಕಸಭೆ ಕಲಾಪದಲ್ಲಿ ಅದಾನಿ ಗ್ರೂಪ್ ವಿರುದ್ಧದ ಆರೋಪದ ಬಗ್ಗೆ ಚರ್ಚೆಗೆ ವಿಪಕ್ಷಗಳ ಪಟ್ಟು

3–mangaluru

ಮಂಗಳೂರು: ಪಾಲಿಕೆ ಆಯುಕ್ತ ವರ್ಗಾವಣೆ; ನೂತನ ಆಯುಕ್ತರಾಗಿ ಚನ್ನಬಸಪ್ಪ ಕೆ. ನೇಮಕ

thumb-3

ಎರಡು ವರ್ಷಗಳ ಬಳಿಕ ಜೈಲಿನಿಂದ ಹೊರಬಂದ ಕೇರಳದ ಪತ್ರಕರ್ತ ಸಿದ್ದಿಕ್ ಕಪ್ಪನ್

2–kushtagi

15 ದಿನಗಳ ಅಂತರ; ಸಾವಿನಲ್ಲಿ ಒಂದಾದ ರೈತ ಸಂಘದ ಸ್ನೇಹಿತರು

‘ವಿದ್ಯಾರ್ಥಿ ಭವನ್’ ವೈಟರ್ ಸಾಹಸಕ್ಕೆ ಆನಂದ್ ಮಹೀಂದ್ರ ಫುಲ್ ಖುಷ್; ಇಲ್ಲಿದೆ ವಿಡಿಯೋ

‘ವಿದ್ಯಾರ್ಥಿ ಭವನ್’ ವೈಟರ್ ಸಾಹಸಕ್ಕೆ ಆನಂದ್ ಮಹೀಂದ್ರ ಫುಲ್ ಖುಷ್; ಇಲ್ಲಿದೆ ವಿಡಿಯೋಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sadadadd

ಬದುಕನ್ನು ಕನ್ನಡಕ್ಕಾಗಿ ಮೀಸಲಿಟ್ಟಿದ್ದೇನೆ: ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ

1-sadsadsa

ಕರವೇ ಗೋವಾ ಕನ್ನಡಿಗರ ಪರವಾಗಿ ನಿಲ್ಲಲು ಸದಾ ಸಿದ್ಧ: ಪ್ರವೀಣ್‍ಕುಮಾರ್  ಶೆಟ್ಟಿ

ಮಹಿಳೆಯರಿರುವ ಸಂಸ್ಥೆಯಲ್ಲಿ ಹೆಚ್ಚು ಸಂಸ್ಕಾರ, ಸಂಸ್ಕೃತಿ ಇರುತ್ತದೆ: ಚಂದ್ರಹಾಸ್‌ ಶೆಟ್ಟಿ

ಮಹಿಳೆಯರಿರುವ ಸಂಸ್ಥೆಯಲ್ಲಿ ಹೆಚ್ಚು ಸಂಸ್ಕಾರ, ಸಂಸ್ಕೃತಿ ಇರುತ್ತದೆ: ಚಂದ್ರಹಾಸ್‌ ಶೆಟ್ಟಿ

tdy-1

ಮಕ್ಕಳು ಸಂಸ್ಕೃತಿ-ಸಂಸ್ಕಾರ ಗೌರವಿಸುವ ಗುಣ ಬೆಳೆಸಿಕೊಳ್ಳಲಿ: ಎಲ್‌. ವಿ. ಅಮೀನ್‌

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ನಿಯೋಗದಿಂದ ಸಂಸದ ಗೋಪಾಲ್‌ ಶೆಟ್ಟಿ  ಅವರಿಗೆ ಮನವಿ 

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ನಿಯೋಗದಿಂದ ಸಂಸದ ಗೋಪಾಲ್‌ ಶೆಟ್ಟಿ  ಅವರಿಗೆ ಮನವಿ 

MUST WATCH

udayavani youtube

ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ‌ ಕೂಗು

udayavani youtube

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

udayavani youtube

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

udayavani youtube

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

udayavani youtube

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan

ಹೊಸ ಸೇರ್ಪಡೆ

ಸಿ.ಟಿ ರವಿ ವಿರುದ್ಧ ಸ್ಪರ್ಧಿಸಿದರೆ ಅಡಿಕೆ ತೋಟ ಮಾರಿ 1 ಕೋಟಿ ರೂ ಕೊಡುತ್ತೇನೆ: ಸಿದ್ದರಾಮಯ್ಯಗೆ ಆಹ್ವಾನ

ಸಿ.ಟಿ ರವಿ ವಿರುದ್ಧ ಸ್ಪರ್ಧಿಸಿದರೆ ಅಡಿಕೆ ತೋಟ ಮಾರಿ 1 ಕೋಟಿ ರೂ ಕೊಡುತ್ತೇನೆ: ಸಿದ್ದರಾಮಯ್ಯಗೆ ಆಹ್ವಾನ

‘ಟಿಪ್ಪು ನಿಜ ಕನಸು’ ನಾಟಕದ ವಿರುದ್ದದ ದೂರು ಹಿಂಪಡೆದ ಅರ್ಜಿದಾರ: ಅಡ್ಡಂಡ ಸಂತಸ

‘ಟಿಪ್ಪು ನಿಜ ಕನಸು’ ನಾಟಕದ ವಿರುದ್ದದ ದೂರು ಹಿಂಪಡೆದ ಅರ್ಜಿದಾರ: ಅಡ್ಡಂಡ ಸಂತಸ

‘ನಟ ಭಯಂಕರ’ನಿಗೆ ತಲೆಬಿಸಿ ತಂದ ರಾಸಲೀಲೆ ಸಿಡಿ..!

‘ನಟ ಭಯಂಕರ’ನಿಗೆ ತಲೆಬಿಸಿ ತಂದ ರಾಸಲೀಲೆ ಸಿಡಿ..!

ಪ್ರತಿಭಾವಂತ ಕ್ರಿಕೆಟ್‌ ಪಟುಗಳ ತವರು ಕರ್ನಾಟಕ: ಕೆ.ವೈ.ವೆಂಕಟೇಶ್

ಪ್ರತಿಭಾವಂತ ಕ್ರಿಕೆಟ್‌ ಪಟುಗಳ ತವರು ಕರ್ನಾಟಕ: ಕೆ.ವೈ.ವೆಂಕಟೇಶ್

Suryakumar Yadav

ಎರಡು ಅದ್ಭುತ ಕ್ಯಾಚ್ ಗಳಿಂದ ಬೆರಗು ಮೂಡಿಸಿದ ಸೂರ್ಯಕುಮಾರ್; ವಿಡಿಯೋ ನೋಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.