ಹನುಮಾನ್ ಜಯಂತಿ ಆಚರಣೆ
Team Udayavani, Apr 30, 2021, 12:41 PM IST
ಮುಂಬಯಿ: ಮೀರಾರೋಡ್ ಶ್ರೀ ಶನೀಶ್ವರ ಮಂದಿರದಲ್ಲಿ ಶ್ರೀ ಹನುಮಾನ್ ಜಯಂತಿ ಆಚರಣೆಯು ಇತ್ತೀಚೆಗೆ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಹನುಮಾನ್ ಜಯಂತಿಯ ಪ್ರಯುಕ್ತ ಮಂದಿರದ ಪ್ರಧಾನ ಅರ್ಚಕ ನಿರಾವ್ ಭಟ್ ಅವರ ಮುಂದಾಳತ್ವದಲ್ಲಿ ಕ್ಷೇತ್ರದ ಎಲ್ಲ ದೇವರಿಗೆ ಅಭಿಷೇಕ ನಡೆಯಿತು. ಬಳಿಕ ಭಕ್ತರಿಂದ ಹನುಮಾನ್ ಚಾಲಿಸ್ ಪಠಣ ಜರಗಿತು. ಇದೇ ಸಂದರ್ಭದಲ್ಲಿ ಶ್ರೀ ಸತ್ಯನಾರಾಯಣ ಮಹಾಪೂಜೆ, ಮಹಾಮಂಗಳಾರತಿ, ಸಂಜೆ ಶ್ರೀರಾಮ ನಾಮ ಜಪ ಪಾರಾಯಣ ಮತ್ತು ಹೋಮ ಇನ್ನಿತರ ಪೂಜಾ ಕೈಂಕರ್ಯಗಳು ನೆರವೇರಿದವು. ಸಂಜೆ 6ರಿಂದ ಮಹಾಮಂಗಳಾರತಿ ಮತ್ತು ಪ್ರಸಾದ ವಿತರಣೆ ನಡೆಯಿತು.
ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಮಂದಿರ ಸಮಿತಿಯ ಗೌರವಾಧ್ಯಕ್ಷರಾದ ವಿನೋದ್ ವಾಘಸಿಯಾ, ಅಧ್ಯಕ್ಷೆ ವಿದ್ಯಾ ಅಶೋಕ್ ಕರ್ಕೇರ, ಉಪಾಧ್ಯಕ್ಷ ಗುಣಕಾಂತ ಶೆಟ್ಟಿ, ದಿನೇಶ್ ಶೆಟ್ಟಿಗಾರ್, ಶುಶಿಲ್ ಮಿಶ್ರ. ಸದಾನಂದ್ ಪೂಜಾರಿ ಕಾರ್ಕಳ ಮತ್ತಿತರರು ಕಾರ್ಯಕ್ರಮ ಯಶಸ್ಸಿಗೆ ಸಹಕರಿಸಿದರು.
ಕೊರೊನಾ ಮಾರ್ಗಸೂಚಿಗಳಿಗೆ ಅನುಗುಣವಾಗಿ ಸರಳ ರೀತಿಯಲ್ಲಿ ಧಾರ್ಮಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.