ನನ್ನ ಕುಟುಂಬ-ನನ್ನ ಜವಾಬಾರಿ ಅಭಿಯಾನ: ಸೆ. 15ರಿಂದ ಚಾಲನೆ

Team Udayavani, Sep 14, 2020, 6:45 PM IST

ನನ್ನ ಕುಟುಂಬ-ನನ್ನ ಜವಾಬಾರಿ ಅಭಿಯಾನ: ಸೆ. 15ರಿಂದ ಚಾಲನೆ

ಮುಂಬಯಿ, ಸೆ. 13: ಹೆಚ್ಚಿನ ಲಾಕ್‌ ಡೌನ್‌ ನಿರ್ಬಂಧಗಳನ್ನು ಸಡಿಲಿಸಲಾಗಿದ್ದು, ಕೋವಿಡ್ ಸೋಂಕು ಹರಡುವುದನ್ನು ನಿಯಂತ್ರಿಸುವ ಉದ್ದೇಶದಿಂದಮಹಾರಾಷ್ಟ್ರ ಸರಕಾರ ರಾಜ್ಯವ್ಯಾಪಿ ನನ್ನ ಕುಟುಂಬ-ನನ್ನ ಜವಾಬ್ದಾರಿ ಅಭಿಯಾನಕ್ಕೆ ಸೆ. 15ರಿಂದ ಚಾಲನೆ ನೀಡಲಿದೆ.

ಹರಡುವಿಕೆ ಮೊಟಕುಗೊಳಿಸುವ ಉದ್ದೇಶ :  ಈ ಅಭಿಯಾನದ ಅಡಿಯಲ್ಲಿ ವಸತಿ ಕಟ್ಟಡಗಳು, ವಸಾಹತುಗಳು, ಶಾಪಿಂಗ್‌ ಮಾಲ್‌ಗ‌ಳು ಮತ್ತು ಮಾರುಕಟ್ಟೆಗಳು, ಕೆಲಸದ ಸ್ಥಳಗಳಲ್ಲಿ ಮತ್ತು ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುವಾಗ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆಸಲಹೆ ಸೂಚನೆಗಳನ್ನು ನೀಡಲಾಗುವುದು ಎಂದು ಮುಂಬಯಿ ಮಹಾನಗರ ಪಾಲಿಕೆಯ ಆಯುಕ್ತ ಐ. ಎಸ್‌. ಚಾಹಲ್‌ ತಿಳಿಸಿದ್ದಾರೆ. ಈ ಅಭಿಯಾನದ ಮುಖ್ಯ ಉದ್ದೇಶ ಕೋವಿಡ್‌ ನಿಯಂತ್ರಣಕ್ಕಾಗಿ ಪರಿಣಾಮಕಾರಿ ಆರೋಗ್ಯ ಶಿಕ್ಷಣವನ್ನು ನೀಡುವುದಾಗಿದೆ. ಸೋಂಕು ಹರಡುವಿಕೆಯನ್ನು ಪರಿಣಾಮಕಾರಿಯಾಗಿ ಮೊಟಕುಗೊಳಿಸಲು,ಕುಟುಂಬದ ಎಲ್ಲ ಸದಸ್ಯರು ಅಗತ್ಯ ಕಾಳಜಿ ವಹಿಸುವುದು ಮತ್ತು ಅಜಾಗರೂಕ ತಪ್ಪುಗಳನ್ನು ತಪ್ಪಿಸಲು ಜಾಗರೂಕರಾಗಿರುವುದು ಕಡ್ಡಾಯವಾಗಿದೆ ಎಂದು ಹೇಳಿದ್ದಾರೆ.

2.25 ಕೋಟಿ ಕುಟುಂಬಗಳ ಸಮೀಕ್ಷೆ : ಈ ಅಭಿಯಾನಕ್ಕಾಗಿ ಸಾರ್ವಜನಿಕ ಪ್ರತಿನಿ ಗಳು ಮತ್ತು ಎನ್‌ಜಿಒ ಸ್ವಯಂಸೇವಕರನ್ನುನೇಮಿಸಲಾಗುವುದು. ಅಭಿಯಾನದ ಭಾಗವಾಗಿ, ಸ್ವಯಂಸೇವಕರು ಮನೆ ಮನೆಗೆ ತೆರಳಿ ಜ್ವರ ಮತ್ತು ಕಡಿಮೆ ಆಮ್ಲಜನಕದ ಮಟ್ಟವನ್ನು ಪರಿಶೀಲಿಸಿ ಕೋವಿಡ್‌ ರೋಗಲಕ್ಷಣಗಳನ್ನು ಹೊಂದಿರುವವರನ್ನು ಹುಡುಕುತ್ತಾರೆ. ಮಧುಮೇಹ, ಹೃದಯ ಮತ್ತು ಮೂತ್ರಪಿಂಡ ಕಾಯಿಲೆ, ಬೊಜ್ಜಿನಂತಹ ಕಾಯಿಲೆಗಳನ್ನು ಹೊಂದಿರುವವರನ್ನು ಚಿಕಿತ್ಸೆಗೆ ಉಲ್ಲೇಖೀಸಲಾಗುತ್ತದೆ. ಆರೋಗ್ಯ ಕಾರ್ಯಕರ್ತ ಮತ್ತು ಇತರ ಇಬ್ಬರು ಒಳಗೊಂಡ ತಂಡವು ಪ್ರತಿಯೊಬ್ಬ ವ್ಯಕ್ತಿಯನ್ನು ಸಮೀಕ್ಷೆ ಮಾಡಿ ಪರಿಶೀಲಿಸಿ ಸೋಂಕಿತರಿಗೆ ಲಭ್ಯವಿರುವ ಸೇವೆಗಳನ್ನು ಸೂಚಿಸುತ್ತದೆ.ಐದು ತಂಡಗಳಿಗೆ ಒಬ್ಬ ವೈದ್ಯರನ್ನು ರಾಜ್ಯ ಲಭ್ಯವಾಗಿಸುತ್ತದೆ. ಕೋವಿಡ್‌ರೋಗಲಕ್ಷಣಗಳನ್ನು ಹೊಂದಿರುವವರಿಗೆ ಸ್ವ್ಯಾಬ್‌ ಪರೀಕ್ಷೆಯನ್ನು ಶಿಫಾರಸು ಮಾಡಲಾಗುತ್ತದೆ. ಸಮೀಕ್ಷೆಯ ಸಮಯದಲ್ಲಿ ರಾಜ್ಯವು ತಿಂಗಳಿಗೆ ಎರಡು ಬಾರಿ 2.25 ಕೋಟಿ ಕುಟುಂಬಗಳನ್ನು ಸಮೀಕ್ಷೆ ಮಾಡುವ ಗುರಿಯನ್ನು ಹೊಂದಲಾಗಿದೆ ಎಂದು ಚಾಹಲ್‌ ತಿಳಿಸಿದ್ದಾರೆ.

ಮಾರ್ಗಸೂಚಿಗಳ ಬಗ್ಗೆ ಮಾಹಿತಿ :  ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಮುಖಗವಸುಗಳನ್ನು ಬಳಸುವುದು ಮುಂತಾದ ಮುನ್ನೆಚ್ಚರಿಕೆಗಳ ಹೊರತಾಗಿ, ಮುಂಬಯಿ ಮಹಾನಗರ ಪಾಲಿಕೆ ಕಾರ್ಪೊರೇಟ್‌ ಕಚೇರಿಗಳು, ವಸತಿ ಸಂಘಗಳು ಮತ್ತು ಖರೀದಿ ಕೇಂದ್ರಗಳಿಗೆ ಇನ್ನೂ ಹಲವಾರು ನಿಯಮಗಳನ್ನು ರೂಪಿಸಿದೆ. ದೇಹದ ಉಷ್ಣತೆಯನ್ನು ಪರೀಕ್ಷಿಸಲು, ಸ್ಯಾನಿಟೈಸರ್‌ ಅನ್ನು ಇರಿಸಲು ಮತ್ತು ಒಂದು ಸಮಯದಲ್ಲಿ ಸೀಮಿತ ಸಂಖ್ಯೆಯ ಗ್ರಾಹಕರನ್ನು ಅನುಮತಿಸಲು ವ್ಯವಸ್ಥೆಗಳನ್ನು ಖಚಿತಪಡಿಸಿಕೊಳ್ಳಲು ಅಂಗಡಿ ಮಾಲೀಕರಿಗೆ ತಿಳಿಸಲಾಗಿದೆ. ಕನಿಷ್ಠ ಸಿಬಂದಿಯನ್ನು ಖಚಿತಪಡಿಸಿಕೊಳ್ಳಲು ಮತ್ತು ಆನ್‌ ಲೈನ್‌ ವಹಿವಾಟಿನ ವಿಧಾನಗಳನ್ನು ಅಳವಡಿಸಿಕೊಳ್ಳಲು ಸಹ ಅವರಿಗೆ ತಿಳಿಸಲಾಗಿದೆ ಎಂದು ಬಿಎಂಸಿ ಹೇಳಿದೆ.

ಉದ್ಯೋಗಿಗಳ ಆರೋಗ್ಯದೆಡೆಗೆ ಮೊದಲ ಆಧ್ಯತೆ : ಖಾಸಗಿ ಕಚೇರಿಗಳಿಗೆ, ನೌಕರರ ಕೆಲಸದ ಸಮಯವು ಸ್ಥಗಿತಗೊಳ್ಳಲಿದ್ದು, ನೌಕರರನ್ನು ಪರ್ಯಾಯ ದಿನಗಳಲ್ಲಿ ಕೆಲಸ ಮಾಡಲು ಕರೆಯಬೇಕು. ಸಾಧ್ಯವಾದಷ್ಟು ಮನೆಯಿಂದ ಕೆಲಸ ಮಾಡಬೇಕು. ಮಾನವ ಸಂಪರ್ಕವನ್ನು ತಪ್ಪಿಸಲು ಡಿಜಿಟಲ್‌ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು, ಸಭೆಗಳನ್ನು ನಡೆಸಲು ವೀಡಿಯೋ ಕಾನ ರೆನ್ಸಿಂಗ್‌ ವ್ಯವಸ್ಥೆಗಳನ್ನು ಬಳಸಿ ಎಲ್ಲ ಉದ್ಯೋಗಿಗಳ ಆರೋಗ್ಯಕ್ಕೆ ಆದ್ಯತೆ ನೀಡಬೇಕು ಎಂದು ಬಿಎಂಸಿ ಹೇಳಿದೆ.ಅಂತೆಯೇ ಸಾರ್ವಜನಿಕ ಮತ್ತು ಖಾಸಗಿ ಸಾರಿಗೆಯ ಮೂಲಕ ಪ್ರಯಾಣಿಸುವವರಿಗೆ ಮುಖದ ಗುರಾಣಿ ಮತ್ತು ಮುಖಗವಸುಗಳನ್ನು ಶಿಫಾರಸು ಮಾಡಲಾಗಿದೆ. ಜನರು ಕಿಕ್ಕಿರಿದ ವಾಹನಗಳಲ್ಲಿ ಪ್ರಯಾಣಿಸುವುದನ್ನು ತಪ್ಪಿಸಬೇಕು. ಬಾಗಿಲು ಮತ್ತು ವಾಹನಗಳ ಹ್ಯಾಂಡಲ್‌ಗ‌ಳನ್ನು ಮುಟ್ಟಬಾರದು ಮತ್ತು ಖಾಸಗಿ ವಾಹನಗಳನ್ನು ಸಾಧ್ಯವಾದಷ್ಟು ಪ್ರಯಾಣಿಸಲು ಬಳಸಬೇಕು ಎಂದು ಅಭಿಯಾನದಲ್ಲಿ ತಿಳಿಸಲಾಗುವುದು ಎಂದು ಬಿಎಂಸಿಯ ಅಧಿಕಾರಿಗಳು ಹೇಳಿದ್ದಾರೆ.

ಟಾಪ್ ನ್ಯೂಸ್

Madhavi Latha

BJP ‘ನಾನು ಮಹಿಳೆಯಲ್ಲ’ ಎಂಬ ಮಾಧವಿ ವೈರಲ್‌ ವೀಡಿಯೋ ತಿರುಚಿದ್ದು!

16-summer-palace-1

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ

ಗ್ಯಾರಂಟಿಗಳಿಂದ ಜನ ಭ್ರಷ್ಟರಾಗುತ್ತಾರೆ ಎನ್ನಲಾಗದು: ಹೈಕೋರ್ಟ್‌ ತೀರ್ಪು

ಗ್ಯಾರಂಟಿಗಳಿಂದ ಜನ ಭ್ರಷ್ಟರಾಗುತ್ತಾರೆ ಎನ್ನಲಾಗದು: ಹೈಕೋರ್ಟ್‌ ತೀರ್ಪು

Lok Sabha Elections: ರಾಜ್ಯಕ್ಕೆ ಮೋದಿ ಆಗಮನ: ಇಂದು ನಾಲ್ಕು ಕಡೆ ಪ್ರಚಾರ

Lok Sabha Elections: ರಾಜ್ಯಕ್ಕೆ ಮೋದಿ ಆಗಮನ: ಇಂದು ನಾಲ್ಕು ಕಡೆ ಪ್ರಚಾರ

1-wewewqe

Beauty; ಈ 60ರ ಚೆಲುವೆ ಬ್ಯೂನಸ್‌ ಐರಿಸ್‌ ಮಿಸ್‌ ಯುನಿವರ್ಸ್‌!

ಅಂತೂ ಬಂತು ಬರ ಪರಿಹಾರ: ರಾಜ್ಯಕ್ಕೆ 3,454 ಕೋ.ರೂ. ಬರ ಪರಿಹಾರ ಬಿಡುಗಡೆ

ಅಂತೂ ಬಂತು ಬರ ಪರಿಹಾರ: ರಾಜ್ಯಕ್ಕೆ 3,454 ಕೋ.ರೂ. ಬರ ಪರಿಹಾರ ಬಿಡುಗಡೆ

Hassan ವೀಡಿಯೋ ಪ್ರಕರಣ ಎಸ್‌ಐಟಿ ತನಿಖೆಗೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Madhavi Latha

BJP ‘ನಾನು ಮಹಿಳೆಯಲ್ಲ’ ಎಂಬ ಮಾಧವಿ ವೈರಲ್‌ ವೀಡಿಯೋ ತಿರುಚಿದ್ದು!

16-summer-palace-1

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ

ಗ್ಯಾರಂಟಿಗಳಿಂದ ಜನ ಭ್ರಷ್ಟರಾಗುತ್ತಾರೆ ಎನ್ನಲಾಗದು: ಹೈಕೋರ್ಟ್‌ ತೀರ್ಪು

ಗ್ಯಾರಂಟಿಗಳಿಂದ ಜನ ಭ್ರಷ್ಟರಾಗುತ್ತಾರೆ ಎನ್ನಲಾಗದು: ಹೈಕೋರ್ಟ್‌ ತೀರ್ಪು

Lok Sabha Elections: ರಾಜ್ಯಕ್ಕೆ ಮೋದಿ ಆಗಮನ: ಇಂದು ನಾಲ್ಕು ಕಡೆ ಪ್ರಚಾರ

Lok Sabha Elections: ರಾಜ್ಯಕ್ಕೆ ಮೋದಿ ಆಗಮನ: ಇಂದು ನಾಲ್ಕು ಕಡೆ ಪ್ರಚಾರ

1-wewewqe

Beauty; ಈ 60ರ ಚೆಲುವೆ ಬ್ಯೂನಸ್‌ ಐರಿಸ್‌ ಮಿಸ್‌ ಯುನಿವರ್ಸ್‌!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.