Udayavni Special

ರವಿ ಕಾಣದ್ದನ್ನು ರಿಲಯನ್ಸ್‌ ಕಂಡ ಕಥೆ


Team Udayavani, Sep 14, 2020, 6:57 PM IST

ರವಿ ಕಾಣದ್ದನ್ನು ರಿಲಯನ್ಸ್‌ ಕಂಡ ಕಥೆ

ರಿಲಯನ್ಸ್‌ ಇಂಡಸ್ಟ್ರೀಸ್‌ ಹೆಸರು ಕೇಳದವರು ಯಾರು? ಇದು ಕೆಲವು ವರ್ಷಗಳ ಹಿಂದೆ ಭಾರತೀಯ ಕಂಪನಿಗಳೊಂದಿಗೆ ಸೆಣಸುತ್ತಿತ್ತು. ಈಗ ವಿಶ್ವದ ಬಲಿಷ್ಠ ಕಂಪನಿಗಳ ಎದುರು ತೊಡೆತಟ್ಟಿ ನಿಂತಿದೆ. ಸದ್ಯ ಒಂದಲ್ಲ ಒಂದು ರೀತಿಯಲ್ಲಿ ಭಾರತೀಯ ಮಾರುಕಟ್ಟೆಯನ್ನು ಆಕ್ರಮಿಸಿಕೊಂಡಿರುವ ರಿಲಯನ್ಸ್‌, ಹೀಗೆಯೇ ಮುಂದುವರಿದರೆ ವಿಶ್ವ ಮಾರುಕಟ್ಟೆಯಲ್ಲಿ ಮೈಕ್ರೋಸಾಫ್ಟ್, ಅಮೆಜಾನ್‌, ಫೇಸ್‌ಬುಕ್‌, ಗೂಗಲ್‌ನಂತಹ ಕಂಪನಿಗಳನ್ನು ಹಿಂದಕ್ಕೆ ಒಗೆಯುವುದರಲ್ಲಿ ಸಂಶಯವೇ ಇಲ್ಲ. ಒಂದುಕಡೆ ಈ ಕಂಪನಿಗಿರುವ ಅಗಾಧ ಭಾರತೀಯ ಮಾರುಕಟ್ಟೆ, ಇನ್ನೊಂದು ಕಡೆ ಸ್ವದೇಶಿ ಕಂಪನಿಯಾದ ಕಾರಣ ಸರ್ಕಾರದ ಸಂಪೂರ್ಣ ನೆರವು. ಇದನ್ನು ಪೂರ್ಣವಾಗಿ ಬಳಸಿಕೊಂಡಿರುವ ಮುಖೇಶ್‌ ಅಂಬಾನಿ ಮಾಲಿಕತ್ವದ ರಿಲಯನ್ಸ್‌ ಇಂಡಸ್ಟ್ರೀಸ್‌ ದಾಪುಗಾಲಿಕ್ಕುತ್ತ ಮುಂದೆ ನುಗ್ಗಿದೆ. ಇದು ವಿಶ್ವದ ದೈತ್ಯಕಂಪನಿಗಳಿಗೆ ಅಪಾಯದ ಮುನ್ಸೂಚನೆ ನೀಡಿದೆ. ಅವು ಸರ್ವಪ್ರಯತ್ನ ಮಾಡುತ್ತ, ರಿಲಯನ್ಸ್‌ಗೆ ಪೈಪೋಟಿ ನೀಡುತ್ತಿವೆ.

ರಿಲಯನ್ಸ್‌ ಸಂಸ್ಥೆ 1960ರಲ್ಲಿ ರಿಲಯನ್ಸ್‌ ಕಮರ್ಷಿಯಲ್‌ ಕಾರ್ಪೋರೇಷನ್‌ ಎಂಬ ಹೆಸರಿನಿಂದ ಶುರುವಾಯಿತು. 1973ರಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್‌ ಎಂದು ಬದಲಾಯಿತು. ಧೀರುಭಾಯ್‌ ಅಂಬಾನಿಯೆಂಬ ಸಾಮಾನ್ಯ ವ್ಯಕ್ತಿ ಅಸಾಮಾನ್ಯವನ್ನು ಸಾಧಿಸಿದ ಕಥೆ ಇದರ ಹಿಂದಿದೆ. ಈ ವಿಷಯ ಹಲವು ಪುಸ್ತಕಗಳಿಗಾಗುವ ಸರಕು. ಆದರೆ ಈಗ ಹೇಳ ಹೊರಟಿರುವುದು ಹಳೆಯ ಕಥೆಯನ್ನಲ್ಲ, ವರ್ತಮಾನದಲ್ಲಿ ಯಾವ್ಯಾವ ಮಗ್ಗುಲಿನಲ್ಲಿ ರಿಲಯನ್ಸ್‌ ಬೆಳೆಯುತ್ತಿದೆ ಎಂಬ ಅಚ್ಚರಿಯನ್ನು. ಮುಖೇಶ್‌ ಅಂಬಾನಿ ನೇತೃತ್ವದಲ್ಲಿ ರಿಲಯನ್ಸ್‌ ಕೈ ಹಾಕದ ಕ್ಷೇತ್ರಗಳೇ ಇಲ್ಲವೆಂದರೂ ತಪ್ಪಲ್ಲ. ಭಾರತೀಯ ಕಂಪನಿಗಳು ಏನೇನೆಲ್ಲ ಸಾಧಿಸಬಹುದು, ಭಾರತೀಯ ಕಂಪನಿಗಳಿಗಿರುವ ಸೌಕರ್ಯ, ಸಾಧ್ಯತೆಗಳನ್ನೂ ತೆರೆದಿಟ್ಟಿದ್ದು ರಿಲಯನ್ಸ್‌ ಹೆಗ್ಗಳಿಕೆ. ಭಾರತ ಎಲ್ಲ ರೀತಿಯಿಂದಲೂ ಬೆಳೆಯುತ್ತಿದೆ. ಇಲ್ಲಿ ಅಗಾಧ ಮಾರುಕಟ್ಟೆಯಿದೆ, ಎಲ್ಲಕ್ಕಿಂತ ಹೆಚ್ಚಾಗಿ ಭಾರತ ಸ್ವಾವಲಂಬಿ  ಯಾಗಬೇಕು ಎಂಬ ಕೂಗು ಜೋರಾಗಿದೆ. ಯಾವ್ಯಾವ ಕ್ಷೇತ್ರದಲ್ಲಿ ಸ್ವಾವಲಂಬಿಯಾಗಬೇಕೆಂಬ ಕೂಗು ಕೇಳಿಬಂದಿ  ದೆಯೋ ಅಲ್ಲೆಲ್ಲ ರಿಲಯನ್ಸ್‌ ಅದನ್ನು ತುಂಬುವ ಪ್ರಯತ್ನ ಮಾಡಿದೆ.

ಜಿಯೋಮಾರ್ಟ್‌ :  ಭಾರತದಲ್ಲಿ ಫ್ಲಿಪ್‌ಕಾರ್ಟ್‌ ಹುಟ್ಟಿಕೊಂಡು, ಯಶಸ್ವಿಯಾಗಿ ನೆಲೆಯೂರಿದಾಗ ಇಂತಹದೊಂದು ಅಂತರ್ಜಾಲ ಮಾರುಕಟ್ಟೆ ಉದ್ಯಮವನ್ನು ಭಾರತೀಯರೂ ನಿಭಾಯಿಸಬಲ್ಲರು ಎಂಬ ವಿಶ್ವಾಸ ಎಲ್ಲರಿಗೂ ಬಲಿಯಿತು. ಈಗ ರಿಲಯನ್ಸ್‌ನ ಜಿಯೋಮಾರ್ಟ್‌ ಭಾರತೀಯ ಕಿರಾಣಿ ವ್ಯಾಪಾರಿಗಳನ್ನು ಕೇಂದ್ರೀಕರಿಸಿಕೊಂಡು ಅಂತರ್ಜಾಲ ಮಾರುಕಟ್ಟೆ ಪ್ರವೇಶಿಸಿದೆ. ಜಿಯೋಮಾರ್ಟ್‌ ಮೂಲಕ ನೀವು ಅಕ್ಕಪಕ್ಕದ ಅಂಗಡಿಗಳ ಸಾಮಾನನ್ನು ಅಂತರ್ಜಾಲದಲ್ಲಿ ಖರೀದಿಸಲು ಸಾಧ್ಯ. ಇದು ತೀರಾ ಭಾರತದ ಅರ್ಥವ್ಯವಸ್ಥೆಯ ಬೇರಿನೊಂದಿಗೆ ಬಂಧ ಹೊಂದುವ ಯೋಚನೆ. ಈಗಾಗಲೇ ಬಲಿಷ್ಠವಾಗಿ ಬೆಳೆಯುತ್ತಿದೆ. ಮತ್ತೂಂದು ಕಡೆ ಹಾಲು, ಔಷಧ, ಪೀಠೊಪಕರಣ, ಜವಳಿ, ಆಭರಣಗಳನ್ನು ಅಂತರ್ಜಾಲದಲ್ಲಿಯೇ ಮಾರುವ ವ್ಯವಸ್ಥೆಗೆ ರಿಲಯನ್ಸ್‌ ಕೈಹಾಕಿದೆ.

ಜಿಯೋಮೀಟ್ : ಕೋವಿಡ್ ಭಾರತದಲ್ಲಿ ಶುರುವಾದಾಗ ದೃಶ್ಯಕರೆ ಆ್ಯಪ್‌ ಗಳಿಗೆ (ವಿಡಿಯೋ ಆ್ಯಪ್‌ಗಳಿಗೆ ) ಬೇಡಿಕೆ ಶುರುವಾಯಿತು. ಅಂತರ್ಜಾಲದ ಮೂಲಕವೇ ದೊಡ್ಡದೊಡ್ಡ ಸಭೆ ನಡೆಸುವುದು, ತರಗತಿಗಳನ್ನು ಹಮ್ಮಿಕೊಳ್ಳುವುದು ಅನಿವಾರ್ಯವಾಯಿತು. ಆಗ ಅಮೆರಿಕದ ಝೂಮ್‌ ಭಾರೀ ಜನಪ್ರಿಯತೆ ಗಳಿಸಿತು. ಏಕಕಾಲ ದಲ್ಲಿ 100 ಜನ ಝೂಮ್‌ ಮೂಲಕ ಸಭೆ ನಡೆಸಲು ಸಾಧ್ಯ. ಇದನ್ನು ಅನುಸರಿಸಿ ಗೂಗಲ್‌ ತನ್ನ ಮೀಟ್‌ ಅನ್ನು ಉಚಿತಗೊಳಿಸಿತು. ಹಾಗಾದರೆ ಭಾರತೀಯವಾದ ಒಂದು ಆ್ಯಪ್‌ ಸಾಧ್ಯವಿಲ್ಲವೇ ಎಂದು ಜನ ಯೋಚಿಸುತ್ತಿದ್ದಾಗ ಜಿಯೋಮೀಟ್‌ ಅನ್ನು ರಿಲಯನ್ಸ್‌, ಗೂಗಲ್‌ ಪ್ಲೇಸ್ಟೋರ್‌ನಲ್ಲಿ ಬಿಡುಗಡೆ ಮಾಡಿತು. ಈಗದು ಅತ್ಯುತ್ತಮ ಗುಣಮಟ್ಟದೊಂದಿಗೆ ಝೂಮ್‌, ಗೂಗಲ್‌ ಮೀಟ್‌ಗೆ ಸರಿಸಮನಾಗಿ ನಿಂತಿದೆ. ಭಾರತೀಯ ತಂತ್ರಾಂಶವೊಂದು ಪೈಪೋಟಿಯಲ್ಲಿ ಗೆದ್ದ ಕಥೆಯಿದು.

ಜಿಯೋ ದೂರಸಂಪರ್ಕ :  2016ರಲ್ಲಿ ಉಚಿತವಾಗಿ ಜಿಯೋ ಸಿಮ್‌ ಬಿಡುಗಡೆ ಮಾಡಿ, ಉಚಿತವಾಗಿ ಡೇಟಾವನ್ನೂ ನೀಡಿದಾಗ ಯಾರೂ, ಜಿಯೋ ಈ ಪ್ರಮಾಣದಲ್ಲಿ ಬೆಳೆಯುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ಈಗ ಜಾದೂ ನಡೆದಿದೆ. ಭಾರತದ ಬೃಹತ್‌ ದೂರಸಂಪರ್ಕ ಕಂಪನಿ ಎಂಬ ಹೆಗ್ಗಳಿಕೆ ಹೊಂದಿದೆ. ಇದರ ಚಂದಾದಾರರ ಸಂಖ್ಯೆ 38.75 ಕೋಟಿ. ದೇಶದ ಮೂಲೆಮೂಲೆಯಲ್ಲಿ ನೆಟ್‌ವರ್ಕ್‌ ನೀಡುವ ಸಂಸ್ಥೆ ಎಂಬ ಭರವಸೆ ಹುಟ್ಟಿಸಿದೆ.

5ಜಿಯತ್ತ :  ಜಗತ್ತು 5ನೇ ಆವೃತ್ತಿಯ ತರಂಗಾಂತರದತ್ತ ಹೊರಳಿಕೊಂಡಿದೆ. ಕೆಲವು ದೇಶಗಳು ಅದಕ್ಕೆ ಬದಲಾಗಿಯಾಗಿದೆ. ಭಾರತವಿನ್ನೂ ಆ ಪ್ರಕ್ರಿಯೆಯ ಮೊದಲ ಹಂತದಲ್ಲಿದೆ. ದೇಶವನ್ನು 5ಜಿ ಸೇವೆಗೆ ಸಿದ್ಧಗೊಳಿಸಲು ಚೀನಾದ ದೂರಸಂಪರ್ಕ ಕಂಪನಿ ಹ್ವಾವೆಯ ನೆರವನ್ನು ಕೇಂದ್ರ ಕೇಳಿತ್ತು. ಇದೀಗ ಹ್ವಾವೆಯೊಂದಿಗಿನ ಒಪ್ಪಂದ ರದ್ದಾಗಿದೆ. ಈ ವೇಳೆ ಸಿಕ್ಕ ಸಂತಸದ ಸುದ್ದಿಯೆಂದರೆ ರಿಲಯನ್ಸ್‌ ತಾನೇ 5ಜಿ ತರಂಗಾಂತರ ಸಿದ್ಧಪಡಿಸು ತ್ತಿದೆ. ಬಹುಶಃ ಮುಂದಿನ ವರ್ಷ ಸರ್ಕಾರ ಅನುಮತಿಸಿದರೆ ಅದರ ಪ್ರಯೋಗವನ್ನೂ ಶುರು ಮಾಡಲಿದೆ!­

 

– ನಿರೂಪ

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಉರುಳಿ ಬಿದ್ದ ಮದುವೆ ಮನೆಯಿಂದ ಬರುತ್ತಿದ್ದ ವ್ಯಾನ್: ಐವರು ಸಾವು, ಹಲವರಿಗೆ ಗಾಯ

ಪಲ್ಟಿಯಾದ ಮದುವೆ ಮನೆಯಿಂದ ಬರುತ್ತಿದ್ದ ವ್ಯಾನ್: ಆರು ಮಂದಿ ಸಾವು, ಹಲವರಿಗೆ ಗಾಯ

ಗುರಿ ಸಾಧಿಸಿಯೇ ಸಿದ್ಧ ; 5 ಲಕ್ಷ ಕೋಟಿ ಡಾಲರ್‌ ಆರ್ಥಿಕತೆ: ಮೋದಿ ಖಚಿತ ನುಡಿ

ಗುರಿ ಸಾಧಿಸಿಯೇ ಸಿದ್ಧ ; 5 ಲಕ್ಷ ಕೋಟಿ ಡಾಲರ್‌ ಆರ್ಥಿಕತೆ: ಮೋದಿ ಖಚಿತ ನುಡಿ

Interview: There is no goal to profit from the loss of others

ಸಂದರ್ಶನ: ಅನ್ಯರ ನಷ್ಟದಿಂದ ಲಾಭ ಗಳಿಸುವ ಗುರಿಯಿಲ್ಲ

ಸ್ವಂತ ಉನ್ನತಿಯ ಮಹತ್ವಾಕಾಂಕ್ಷೆ ; ಎಲ್ಲರ ಸೌಖ್ಯದ ದರ್ಶನ

ಸ್ವಂತ ಉನ್ನತಿಯ ಮಹತ್ವಾಕಾಂಕ್ಷೆ ; ಎಲ್ಲರ ಸೌಖ್ಯದ ದರ್ಶನ

ಅಮೆರಿಕ ಚುನಾವಣೆ ವೆಚ್ಚ 1.4 ಲ.ಕೋ. ರೂ?

ಅಮೆರಿಕ ಚುನಾವಣೆ ವೆಚ್ಚ 1.4 ಲ.ಕೋ. ರೂ?

ಕರಾವಳಿಯಲ್ಲಿ ಸ್ಥಾಪನೆಯಾಗಲಿವೆ 26 ಸೈರನ್‌ ಟವರ್‌ಗಳು

ಕರಾವಳಿಯಲ್ಲಿ ಸ್ಥಾಪನೆಯಾಗಲಿವೆ 26 ಸೈರನ್‌ ಟವರ್‌ಗಳು

ಆಂಧ್ರದಲ್ಲಿ ನ.2ರಿಂದ ಶಾಲೆ ಪುನಾರಂಭ ; ಅರ್ಧ ದಿನ ಮಾತ್ರ ಕ್ಲಾಸ್‌ ನಡೆಸಲು ಸೂಚನೆ

ಆಂಧ್ರದಲ್ಲಿ ನ.2ರಿಂದ ಶಾಲೆ ಪುನಾರಂಭ ; ಅರ್ಧ ದಿನ ಮಾತ್ರ ಕ್ಲಾಸ್‌ ನಡೆಸಲು ಸೂಚನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

isiri-tdy-3

ಬಾಳು ಜೇನು! ಖರ್ಚು ಕಡಿಮೆ, ಲಾಭ ಜಾಸ್ತಿ…

isiri-tdy-2

ಭೂಮಿಗೆ ಸಿಗುತ್ತದೆ ಬಂಗಾರದ ಬೆಲೆ…

isiri-tdy-1

ಲೈಫ್ ಈಸ್‌ ಬುಟ್ಟಿ ಫ‌ುಲ್‌

isiri-tdy-5

ಕೀ ಬೋರ್ಡ್‌ ಮೇಲೆ ಸಿಟ್ಟಾಗಿ ಕುಟ್ಟಬೇಡಿ ಮಾರಾಯ್ರೇ.

ಆನ್‌ಲೈನ್ ‌ಕ್ಲಾಸಿಗೆ ಲ್ಯಾಪಿ

ಆನ್‌ಲೈನ್ ‌ಕ್ಲಾಸಿಗೆ ಲ್ಯಾಪಿ

MUST WATCH

udayavani youtube

ಅಪಾಯಕಾರಿ ತಿರುವು; ಎಚ್ಚರ ತಪ್ಪಿದರೆ ಅಪಘಾತ ಖಚಿತ!

udayavani youtube

Peoples take on reopening of schools | ಶಾಲೆ ಯಾಕೆ ಬೇಕು? ಯಾಕೆ ಬೇಡ ? | Udayavani

udayavani youtube

ಭಕ್ತಿ-ಸಂಭ್ರಮದ ಮಂಗಳೂರು ದಸರಾ -2020 ಸಂಪನ್ನ

udayavani youtube

ರಸ್ತೆಯಲ್ಲಿ ಉಂಟಾದ ಕೃತಕ ನೆರೆಯಲ್ಲೇ ಈಜಾಡಿದ ಯುವಕ

udayavani youtube

ಕೊರೋನಾ: ಶೋಚನೀಯವಾದ ತಿರುಗುವ ತೊಟ್ಟಿಲು ತಿರುಗಿಸುವ ಕೈಗಳ ಕಥೆ!

ಹೊಸ ಸೇರ್ಪಡೆ

ಉರುಳಿ ಬಿದ್ದ ಮದುವೆ ಮನೆಯಿಂದ ಬರುತ್ತಿದ್ದ ವ್ಯಾನ್: ಐವರು ಸಾವು, ಹಲವರಿಗೆ ಗಾಯ

ಪಲ್ಟಿಯಾದ ಮದುವೆ ಮನೆಯಿಂದ ಬರುತ್ತಿದ್ದ ವ್ಯಾನ್: ಆರು ಮಂದಿ ಸಾವು, ಹಲವರಿಗೆ ಗಾಯ

ಗುರಿ ಸಾಧಿಸಿಯೇ ಸಿದ್ಧ ; 5 ಲಕ್ಷ ಕೋಟಿ ಡಾಲರ್‌ ಆರ್ಥಿಕತೆ: ಮೋದಿ ಖಚಿತ ನುಡಿ

ಗುರಿ ಸಾಧಿಸಿಯೇ ಸಿದ್ಧ ; 5 ಲಕ್ಷ ಕೋಟಿ ಡಾಲರ್‌ ಆರ್ಥಿಕತೆ: ಮೋದಿ ಖಚಿತ ನುಡಿ

Interview: There is no goal to profit from the loss of others

ಸಂದರ್ಶನ: ಅನ್ಯರ ನಷ್ಟದಿಂದ ಲಾಭ ಗಳಿಸುವ ಗುರಿಯಿಲ್ಲ

ಸ್ವಂತ ಉನ್ನತಿಯ ಮಹತ್ವಾಕಾಂಕ್ಷೆ ; ಎಲ್ಲರ ಸೌಖ್ಯದ ದರ್ಶನ

ಸ್ವಂತ ಉನ್ನತಿಯ ಮಹತ್ವಾಕಾಂಕ್ಷೆ ; ಎಲ್ಲರ ಸೌಖ್ಯದ ದರ್ಶನ

ಉಗ್ರವಾದಕ್ಕೆ ತತ್ತರಿಸಿದ ಫ್ರಾನ್ಸ್‌; ವಿಶ್ವಸಮುದಾಯ ಸಕ್ರಿಯವಾಗಲಿ

ಉಗ್ರವಾದಕ್ಕೆ ತತ್ತರಿಸಿದ ಫ್ರಾನ್ಸ್‌; ವಿಶ್ವಸಮುದಾಯ ಸಕ್ರಿಯವಾಗಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.