ಮುಂಬಯಿ; ಸುಭದ್ರ ರಾಷ್ಟ್ರ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಕೊಡುಗೆ ಅಪಾರ


Team Udayavani, May 31, 2023, 6:11 PM IST

ಮುಂಬಯಿ; ಸುಭದ್ರ ರಾಷ್ಟ್ರ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಕೊಡುಗೆ ಅಪಾರ

ಮುಂಬಯಿ: ಉಪನಗರ ಪಾಲ್ಘರ್‌ ಜಿಲ್ಲೆಯಲ್ಲಿ ಉಡುಪಿ ಮೂಲದ ಆಲ್ಬರ್ಟ್‌ ಡಬ್ಲ್ಯು. ಡಿ’ಸೋಜಾ ಪಾಂಗಾಳ ಆಡಳಿತ್ವದ ಅಲ್ಡೇಲ್‌ ಎಜುಕೇಶನ್‌ ಟ್ರಸ್ಟ್‌ನ ಸಮೂಹದ ಸೈಂಟ್‌ ಜೋನ್‌ ಟೆಕ್ನಿಕಲ್‌ ಆ್ಯಂಡ್‌ ಎಜುಕೇಶನಲ್‌ ವಿದ್ಯಾಲಯದ 11ನೇ ವಾರ್ಷಿಕ ಘಟಿಕೋತ್ಸವವು ಮೇ 27 ರಂದು ಕಾಲೇಜಿನ ಕ್ಯಾಂಪಸ್‌ನಲ್ಲಿರುವ ಸೈಂಟ್‌ ಜೋನ್‌ ಮಹಾವಿದ್ಯಾಲಯದ ಸಭಾ ಗೃಹದಲ್ಲಿ ನೆರವೇರಿತು.

ಸೈಂಟ್‌ ಜೋನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಫಾರ್ಮಸಿ, ಸೈಂಟ್‌ ಜೋನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮಾನವಿಕ ಮತ್ತು ವಿಜ್ಞಾನ (ಹ್ಯೂಮ್ಯಾ ನಿಟಿಸ್‌ ಆ್ಯಂಡ್‌ ಸೈನ್ಸ್‌) ಹಾಗೂ ಸೈಂಟ್‌ ಜೋನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಎಂಜಿನಿಯರಿಂಗ್‌ ಆ್ಯಂಡ್‌ ಎಂಎಂಎಸ್‌ ವಿಭಾಗದ ಘಟಿಕೋತ್ಸವ ನೆರವೇರಿ, ಬಾಟು ಲೋನೆರ್‌ ಮತ್ತು ಎನ್‌ ಪಿಸಿಐಎಲ್‌ ಲಿ. ಮುಂಬಯಿ ಪ್ರಪ್ರಥಮ ಮಾಜಿ ಉಪಕುಲಪತಿ ಡಾ| ಜಿ. ವಿ ಗೈಕಾರ್‌ ಅತಿಥಿಯಾಗಿ ಆಗಮಿಸಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನಗೈದರು.

ಆಲ್ಡೇಲ್‌ ಎಜುಕೇಶನ್‌ ಟ್ರಸ್ಟ್‌ನ ಕಾರ್ಯಾಧ್ಯಕ್ಷ ಆಲ್ಬರ್ಟ್‌ ಡಬ್ಲ್ಯು.ಡಿ’ಸೋಜಾ ಮಾತನಾಡಿ, ಸುಭದ್ರ ರಾಷ್ಟ್ರ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ತರವಾಗಿದೆ. ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಸದ್ಗುಣಗಳನ್ನು ಅಳವಡಿಸಿ ಕೊಂಡು ಜೀವನದಲ್ಲಿ ಸುಸಂಸ್ಕೃತರಾಗಿ ಬೆಳೆ ಯಬೇಕು. ಜೀವನದ ವಿವಿಧ ಹಂತಗಳಲ್ಲಿ ವಿಭಿನ್ನ ಪ್ರಮಾಣದಲ್ಲಿ ಬರುವ ಸಮಯ, ಶಕ್ತಿ ಮತ್ತು ಹಣವನ್ನು ಉತ್ತಮವಾಗಿ ಬಳಸಿ ಕೊಳ್ಳಬೇಕು. ಶಿಕ್ಷಣ ಎಂಬುವುದು ಅಂಕಗಳಿಕೆಗೆ ಸೀಮಿತವಾಗಿಲ್ಲ. ಜೀವನದಲ್ಲಿ ಹಿರಿಯರಿಗೆ
ಗೌರವ ನೀಡಿ, ತಾನು ಕಲಿತ ಶಿಕ್ಷಣ ಸಂಸ್ಥೆ, ಗುರುಗಳನ್ನು ಹಾಗೂ ತಂದೆ-ತಾಯಿಗಳನ್ನು ಎಂದಿಗೂ ಮರೆಯಬಾರದು ಎಂದರು.

ಡಾ| ಜಿ. ವಿ. ಗೈಕರ್‌ ಅವರು ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಯಶಸ್ವಿ ಯಾಗಲು ಅಗತ್ಯವಾದ ಸುಸಂಸ್ಕೃತ ಕಲಿಕೆ
ಯಂತಹ ಅಂಶಗಳ ಮೇಲೆ ಮಾಹಿತಿ ನೀಡಿದರು. ಭವಿಷ್ಯದ ವಿವಿಧ ಪ್ರಯತ್ನ ಗಳಲ್ಲಿ ಯಶಸ್ವಿಯಾಗಲು ಧೈರ್ಯ ಮತ್ತು
ಸಹಯೋಗ ಮತ್ತು ಪರಿಣತಿಯನ್ನು ಹಂಚಿಕೊಳ್ಳುವ ಅಗತ್ಯ ತಿಳಿಸಿದ ಅವರು, ವಿದ್ಯಾರ್ಥಿಗಳು ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ
ನೀಡಬೇಕು ಎಂದರು.

ಸೈಂಟ್‌ ಜೋನ್‌ ಇಂಟರ್‌ನ್ಯಾಶನಲ್‌ ಸಿಬಿಎಸ್‌ಇ ಶಾಲಾ ವಿದ್ಯಾರ್ಥಿಗಳ ಸ್ಕೂಲ್‌ ಬ್ಯಾಂಡ್‌ನ‌ ನೀನಾದದೊಂದಿಗೆ ಪದವೀಧರ
ವಿದ್ಯಾರ್ಥಿಗಳು ಮತ್ತು ಗಣ್ಯರನ್ನು ಸಭಾಂಗಣಕ್ಕೆ ಕರೆತರಲಾಯಿತು. ಜಾಗತಿಕ ಶಾಂತಿ ನೆಮ್ಮದಿಗಾಗಿ ಸಾರ್ವತ್ರಿಕ ಪ್ರಾರ್ಥನೆ ನಡೆಸಿ
ಸರ್ವಶಕ್ತ ದೇವರಿಗೆ ಪ್ರಾರ್ಥಿಸಿ ಸರಸ್ವತಿ ವಂದನೆಯೊಂದಿಗೆ ದೀಪ ಬೆಳಗಿಸಿ ಸಮಾರಂಭಕ್ಕೆ ಚಾಲನೆ ನೀಡಲಾಯಿತು. ಆಲ್ಬರ್ಟ್‌
ಡಬ್ಲ್ಯು. ಡಿ’ಸೋಜಾ ಸ್ವಾಗತಿಸಿ, ಪ್ರಸ್ತಾವಿಸಿದರು.

ಎಐಸಿಟಿಇಯ ಗೌರವಾನ್ವಿತ ಅಧ್ಯಕ್ಷ ಪ್ರೊ| ಅನಿಲ್‌ ಡಿ. ಸಹಸ್ತ್ರಬುದ್ಧೆ ಮತ್ತು ಮುಂಬಯಿ ವಿಶ್ವವಿದ್ಯಾನಿಲಯದ ಗೌರವಾನ್ವಿತ ಉಪಕುಲಪತಿ ಪ್ರೊ| ಡಿ. ಟಿ. ಶಿರ್ಕೆ ಅವರ ವೀಡಿಯೋ ಭಾಷಣವನ್ನು ಬಿತ್ತರಿಸಲಾಯಿತು.

ಎಸ್‌ಜೆಸಿ ಫಾರ್ಮಸಿಯ 76 ವಿದ್ಯಾರ್ಥಿಗಳು, ಎಸ್‌ಜೆಸಿ ಹ್ಯೂಮ್ಯಾನಿಟಿಸ್‌ ಆ್ಯಂಡ್‌ ಸಾಯನ್ಸ್‌ ವಿಭಾಗದ 239 ವಿದ್ಯಾರ್ಥಿಗಳು
ಹಾಗೂ ಎಸ್‌ಜೆಸಿ ಎಂಜಿನಿಯರಿಂಗ್‌ ಮತ್ತು ಎಂಎಂಎಸ್‌ ವಿಭಾಗದ 415 ವಿದ್ಯಾರ್ಥಿ ಗಳು ಪದವಿ ಪ್ರಮಾಣಪತ್ರ ಸ್ವೀಕರಿಸಿದರು.
ಆಯಾಯ ಕಾಲೇಜುಗಳ ಪ್ರಾಂಶುಪಾಲರು ವಿಭಾಗದ ಕಾರ್ಯವೈಖರಿಯನ್ನು ವಿವರಿಸಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿ
ದರು. ವಿಭಾಗವಾರು ಫೋಟೋ ಸೆಷನ್‌ ನಡೆಸಿ ವಿದ್ಯಾರ್ಥಿಗಳಿಗೆ ಜೀವಮಾನದ ಪ್ರಮಾಣಪತ್ರ ಮತ್ತು ಸ್ಮರಣಿಗಳನ್ನಿತ್ತು
ಗೌರವಿಸಲಾಯಿತು.

ಆಲ್ಢೇಲ್‌ ಎಜುಕೇಶನ್‌ ಟ್ರಸ್ಟ್‌ನ ಕಾರ್ಯದರ್ಶಿ ಎಲ್ವಿನಾ ಎ. ಡಿ’ಸೋಜಾ, ಕೋಶಾಧಿಕಾರಿ ಎಲೈನ್‌ ಆರ್‌. ಬುಥೆಲ್ಲೋ, ಸದಸ್ಯ ಆಲ್ಡಿ†ಜ್‌ ಎ. ಡಿ’ಸೋಜಾ, ಉಪ ಕ್ಯಾಂಪಸ್‌ ನಿರ್ದೇಶಕಿ ಮತ್ತು ಎಸ್‌ಜೆಸಿಎಫ್‌ ಆರ್‌ ಪ್ರಾಂಶುಪಾಲೆ ಡಾ| ಸವಿತಾ ತೌರೊ,
ಎಸ್‌ಜೆಸಿಇಎಂ ಪ್ರಾಂಶುಪಾಲ ಡಾ| ಜಿ. ವಿ. ಮುಳಗುಂದ, ಸೈಂಟ್‌ ಜೋನ್‌ ಮಾನವಿಕ ಮತ್ತು ವಿಜ್ಞಾನ ಕಾಲೇಜಿನ ಮುಖ್ಯಸ್ಥ ಡಾ| ಬೃಜಬಂಧು ದಾಸ್‌ ಉಪಸ್ಥಿತರಿದ್ದರು. ಕ್ಯಾಂಪಸ್‌ನ ಜನರಲ್‌ ಮ್ಯಾನೇಜರ್‌ ಸತೀಶ್‌ ಶೆಟ್ಟಿ, ಮಾನವ ಸಂಪನ್ಮೂಲ ವ್ಯವಸ್ಥಾಪಕ ಸುಧೀರ್‌ ಬಾಬು ಭಾಗವಹಿಸಿದ್ದರು.

ವೃಶಾಲಿ ಗೋಖಲೆ, ಡಾ| ಪಂಢರೀನಾಥ ಘೋಂಗೆ ಮತ್ತು ಶ್ರೀಶೈಲಾ ಹೆಗ್ಗೊಂಡ ನಿರೂಪಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕ
ರಿಸಿದರು. ಸಹಾಯಕ ಪ್ರೊ| ಏಕ್ತಾ ಠಾಕೂರ್‌ ಮತ್ತು ಬೀಟ್ರಿಸ್‌ ಲೋಬೋ ಸಭಾ ಕಾರ್ಯ ಕ್ರಮವನ್ನು ನಿರ್ವಹಿಸಿದರು. ಡಾ| ಜಿ. ವಿ. ಮುಳಗುಂದ ಮತ್ತು ಡಾ| ಸವಿತಾ ತೌರೊ ವಂದಿಸಿದರು. ಸಂಸ್ಥೆಯ ಶಿಕ್ಷಕ ವೃಂದದವರು, ಶಿಕ್ಷಕೇತರ ಸಿಬಂದಿ, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಚಿತ್ರ – ವರದಿ: ರೊನಿಡಾ ಮುಂಬಯಿ

ಟಾಪ್ ನ್ಯೂಸ್

2-fusion-dog

UV Fusion: ನಂಬಿಕೆಗಿಂತ ದೊಡ್ಡದು ಬೇರೇನಿಲ್ಲ

1-Tuesday

Daily Horoscope: ಸಜ್ಜನರ ಸೋಗುಹಾಕಿದ ವಂಚಕರ ಬಗ್ಗೆ ಎಚ್ಚರ, ಉದ್ಯೋಗಸ್ಥರಿಗೆ ಕೈತುಂಬಾ ಕೆಲಸ

Govt-b

KSRTC Bus: ಬಾಗಿಲಿದ್ದರೂ ಮುಚ್ಚುವವರಿಲ್ಲ! ಪ್ರಾಣಕ್ಕೆ ಎರವಾಗುತ್ತಿದೆ ಅಜಾಗರೂಕತೆ

Mullugudde ಕೊರಗಜ್ಜ ಪಾವಡ; ನಾಪತ್ತೆ ಯುವಕ ಅಜ್ಜನ ಸನ್ನಿಧಾನದಲ್ಲಿ ಪ್ರಾಥ೯ನೆ

Mullugudde ಕೊರಗಜ್ಜನ ಪವಾಡ; ನಾಪತ್ತೆ ಯುವಕ ಅಜ್ಜನ ಸನ್ನಿಧಾನದಲ್ಲಿ ಪ್ರಾರ್ಥನೆ

ಹಿಂದೂ ಸಂಘಟನೆಗಳ ಆಕ್ಷೇಪ; ಗೊಂದಲವಿಲ್ಲ: ಸಂಘ

Mangaluru ಹಿಂದೂ ಸಂಘಟನೆಗಳ ಆಕ್ಷೇಪ; ಗೊಂದಲವಿಲ್ಲ: ಸಂಘ

Robbery case: ಕೇರಳದಲ್ಲಿ ಓರ್ವನ ಬಂಧನ?

Robbery case: ಕೇರಳದಲ್ಲಿ ಓರ್ವನ ಬಂಧನ?

Ullal ರೈಲಿಗೆ ತಲೆ ಕೊಟ್ಟು ಅವಿವಾಹಿತ ಆತ್ಮಹತ್ಯೆ

Ullal ರೈಲಿಗೆ ತಲೆ ಕೊಟ್ಟು ಅವಿವಾಹಿತ ಆತ್ಮಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-asdsad

Kannada in UK ; ಲಂಡನ್ ನಲ್ಲಿ ಮೊಳಗಲಿರುವ ಕನ್ನಡ ಬಳಗದ ಡಿಂಡಿಮ

1—adsad

Goa; ಮಾಪ್ಸಾದಲ್ಲಿ ಕನ್ನಡ ಸಂಘದ ಕನ್ನಡ ಗಣಪನ ಪ್ರತಿಷ್ಠಾಪನೆ

ಆನ್‌ಲೈನ್‌ ಗಣೇಶನ ಆರಾಧನೆ….!

ಆನ್‌ಲೈನ್‌ ಗಣೇಶನ ಆರಾಧನೆ….!

Desi Swara: ಕರಿಮಾಯಿ ಎಂಬ ಅದ್ಭುತ ರಸಾನುಭವ! ಭಾವಕೋಶದಲ್ಲಿ ಅಳಿಯದ ನೆನಪನ್ನಿತ್ತ ಕ್ಷಣ

Desi Swara: ಕರಿಮಾಯಿ ಎಂಬ ಅದ್ಭುತ ರಸಾನುಭವ! ಭಾವಕೋಶದಲ್ಲಿ ಅಳಿಯದ ನೆನಪನ್ನಿತ್ತ ಕ್ಷಣ

Head phone; ಬಿಡುವಿಲ್ಲದ ಕಿವಿಗಳಿಗೆ ಗುಟ್ಟೊಂದ ಹೇಳಬೇಕು…!

Head phone; ಬಿಡುವಿಲ್ಲದ ಕಿವಿಗಳಿಗೆ ಗುಟ್ಟೊಂದ ಹೇಳಬೇಕು…!

MUST WATCH

udayavani youtube

ಕಾಪುವಿಗೆ ಬಂದವರು ಈ ಹೋಟೆಲ್ ಗೊಮ್ಮೆ ಮಿಸ್ ಮಾಡದೆ ಭೇಟಿ ನೀಡಿ

udayavani youtube

Asian Games: ಸೀರೆ,ಕುರ್ತಾದಲ್ಲಿ ಮಿಂಚಿದ ಭಾರತದ ಕ್ರೀಡಾಳುಗಳು

udayavani youtube

ಮೈಸೂರಿನ ಕೃಷ್ಣಧಾಮಕ್ಕೆ ವಿಧಾನಸಭೆ ಸ್ಪೀಕರ್ ಯು ಟಿ ಖಾದರ್ ಭೇಟಿ

udayavani youtube

ಓಡಿಸ್ಸಾದ ಮರಳಿನಲ್ಲಿ ಅರಳಿದ ಸ್ಟೀಲ್ ಗಣಪ

udayavani youtube

ಯಾಕಾಗಿ ಗಣೇಶ ಹಲವು ಕೈಗಳನ್ನು ಹೊಂದಿದ್ದಾನೆ ?

ಹೊಸ ಸೇರ್ಪಡೆ

2-fusion-dog

UV Fusion: ನಂಬಿಕೆಗಿಂತ ದೊಡ್ಡದು ಬೇರೇನಿಲ್ಲ

1-Tuesday

Daily Horoscope: ಸಜ್ಜನರ ಸೋಗುಹಾಕಿದ ವಂಚಕರ ಬಗ್ಗೆ ಎಚ್ಚರ, ಉದ್ಯೋಗಸ್ಥರಿಗೆ ಕೈತುಂಬಾ ಕೆಲಸ

Govt-b

KSRTC Bus: ಬಾಗಿಲಿದ್ದರೂ ಮುಚ್ಚುವವರಿಲ್ಲ! ಪ್ರಾಣಕ್ಕೆ ಎರವಾಗುತ್ತಿದೆ ಅಜಾಗರೂಕತೆ

Mullugudde ಕೊರಗಜ್ಜ ಪಾವಡ; ನಾಪತ್ತೆ ಯುವಕ ಅಜ್ಜನ ಸನ್ನಿಧಾನದಲ್ಲಿ ಪ್ರಾಥ೯ನೆ

Mullugudde ಕೊರಗಜ್ಜನ ಪವಾಡ; ನಾಪತ್ತೆ ಯುವಕ ಅಜ್ಜನ ಸನ್ನಿಧಾನದಲ್ಲಿ ಪ್ರಾರ್ಥನೆ

ಹಿಂದೂ ಸಂಘಟನೆಗಳ ಆಕ್ಷೇಪ; ಗೊಂದಲವಿಲ್ಲ: ಸಂಘ

Mangaluru ಹಿಂದೂ ಸಂಘಟನೆಗಳ ಆಕ್ಷೇಪ; ಗೊಂದಲವಿಲ್ಲ: ಸಂಘ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.