Udayavni Special

ಶ್ರೀ ಕ್ಷೇತ್ರ ಒಡಿಯೂರು ಯುವ ಸೇವಾ ಬಳಗ: ನೇತ್ರದಾನ ಜಾಗೃತಿ 


Team Udayavani, Aug 9, 2018, 3:41 PM IST

0808mum07a.jpg

ಮುಂಬಯಿ: ಶ್ರೀ ಕ್ಷೇತ್ರ ಒಡಿಯೂರಿನ ಶ್ರೀ ಗುರುದೇವ ಸೇವಾ ಬಳಗ ಮುಂಬಯಿ ಇದರ ವಾರ್ಷಿಕೋತ್ಸವ  ಹಾಗೂ ಗುರುವಂದನೆ ಸಮಾರಂಭವು ಆ. 5 ರಂದು ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ವಿವಿಧ ಸಾಂಸ್ಕೃತಿಕ, ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ಜರಗಿತು.

ಇದೇ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಒಡಿಯೂರು ಯುವ ಸೇವಾ ಬಳಗ ಮುಂಬಯಿ ಸದಸ್ಯರು ಜೀವನದಲ್ಲಿ ಕತ್ತಲಿನಲ್ಲಿರುವವರಿಗೆ ನೇತ್ರದಾನ ಮಹಾಯೋಜನೆಯ ಮುಖಾಂತರ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸಕ್ಕೆ ಚಾಲನೆ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಯುವ ವಿಭಾಗದ ಡಾ| ಆದಿತ್ಯ ಕೃಷ್ಣ ಶೆಟ್ಟಿ ಮತ್ತು ಡಾ| ಜಾನಕಿ ಕೋಡ್ಕಣ್‌ ಅವರು ನೇತ್ರದಾನದ ಮಹತ್ವದ ಬಗ್ಗೆ ಹಾಗೂ ಅದರ ಅಗತ್ಯತೆಯ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಈ ಕಾರ್ಯಕ್ರಮವನ್ನು ಬೆಂಬಲಿಸುವುದರೊಂದಿಗೆ ಗುರುದೇವ ಸೇವಾ ಬಳಗದ 20 ಕ್ಕಿಂತಲೂ ಅಧಿಕ ಕಾರ್ಯಕರ್ತರು, ಗುರುಭಕ್ತರು ತಮ್ಮ ನೇತ್ರದಾನ ಮಾಡುವುದಾಗಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀ ಜಿಗಳಿಂದ ದೃಢೀಕರಣ ಪತ್ರ ಸ್ವೀಕರಿಸಿದರು. ಅಲ್ಲದೆ ಆರ್ಥಿಕವಾಗಿ ಹಿಂದುಳಿದ 25 ಕ್ಕಿಂತಲೂ ಅಧಿಕ ಕಣ್ಣಿನಪೊರೆಯಿಂದ ಬಳಲುತ್ತಿವವರಿಗೆ ಸಹಾಯವಾಗುವ ಪತ್ರವನ್ನು ಶ್ರೀಗಳು ವಿತರಿಸಿ ಶುಭಹಾರೈಸಿದರು.ಯುವ ವಿಭಾಗದ ಸಮಾಜಪರ ಕಾರ್ಯಗಳ ಬಗ್ಗೆ ಶ್ರೀಗಳು ಶ್ಲಾಘಿಸಿ ಮಾತನಾಡಿ, ಇದು ಸಮಾಜದ ಕಣ್ಣು ತೆರೆಯುವ ಕಾರ್ಯವಾಗಿದೆ. ಯುವ ವಿಭಾಗದ ಈ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸಬೇಕು. ಇನ್ನೊಬ್ಬರ ಬಾಳಿಗೆ ಬೆಳಕನ್ನು ನೀಡುವ ಕಾರ್ಯಕ್ಕೆ ಭಗವಂತ ಕೃಪೆ ಸದಾಯಿರುತ್ತದೆ ಎಂದರು.

ಸಾಧ್ವಿ ಮಾತಾನಂದಮಮಯಿ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಯುವ ವಿಭಾಗದ ನ್ಯಾಯವಾದಿ ಕವಿತಾ ಧೀರಾಜ್‌ ಶೆಟ್ಟಿ ಅವರು ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಗುರುದೇವ ಸೇವಾ ಬಳಗದ ಅಧ್ಯಕ್ಷ ನ್ಯಾಯವಾದಿ ಕೃಷ್ಣ ಶೆಟ್ಟಿ, ಅತಿಥಿಗಳಾಗಿ ಬಂಟರ ಸಂಘದ ಮಾಜಿ ಅಧ್ಯಕ್ಷ ಬಿ. ವಿವೇಕ್‌ ಶೆಟ್ಟಿ, ಬಂಟರ ಸಂಘದ ಮಾಜಿ ಕಾರ್ಯದರ್ಶಿ ಸಿಎ ಸದಾಶಿವ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಸುಧಾಕರ ಹೆಗ್ಡೆ, ಗುರುದೇವಾ ಸೇವಾ ಬಳಗದ ಉಪಾಧ್ಯಕ್ಷ ಬೊಳ್ನಾಡುಗುತ್ತು ಚಂದ್ರಹಾಸ ರೈ, ದಾಮೋದರ ಶೆಟ್ಟಿ, ಪೇಟೆಮನೆ ಪ್ರಕಾಶ್‌ ಶೆಟ್ಟಿ, ಪುಣೆ ಗುರುದೇವ ಸೇವಾ ಬಳಗದ ಸದಾನಂದ ಶೆಟ್ಟಿ, ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ರೇವತಿ ವಾಮಯ್ಯ ಶೆಟ್ಟಿ, ಉದ್ಯಮಿ ವಾಮಯ್ಯ ಶೆಟ್ಟಿ ಹಾಗೂ ಇತರ ಪದಾಧಿಕಾರಿಗಳು, ಸದಸ್ಯರು, ಗುರುಭಕ್ತರು ಉಪಸ್ಥಿತರಿದ್ದರು. 

ಚಿತ್ರ-ವರದಿ:ಸುಭಾಷ್‌ ಶಿರಿಯಾ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಮಣಿಪಾಲ : ಕುಸಿಯುವ ಭೀತಿಯಲ್ಲಿದೆ ಎಂಟು ಅಂತಸ್ತಿನ ಕಟ್ಟಡ!

ಮಣಿಪಾಲ : ಕುಸಿಯುವ ಭೀತಿಯಲ್ಲಿದೆ ಎಂಟು ಅಂತಸ್ತಿನ ಕಟ್ಟಡ! ಸ್ಥಳಕ್ಕೆ ಅಧಿಕಾರಿಗಳ ದೌಡು

ಐತಿಹಾಸಿಕ ನಡೆ: ನೌಕಾಪಡೆಯ ಯುದ್ಧ ಹಡಗಿಗೆ ಇಬ್ಬರು ಮಹಿಳಾ ಅಧಿಕಾರಿಗಳ ನೇಮಕ ಸಾಧ್ಯತೆ

ಐತಿಹಾಸಿಕ ನಡೆ: ನೌಕಾಪಡೆಯ ಯುದ್ಧ ಹಡಗಿಗೆ ಇಬ್ಬರು ಮಹಿಳಾ ಅಧಿಕಾರಿಗಳ ನೇಮಕ ಸಾಧ್ಯತೆ

ಮುಂಬಯಿಯ ಕೊಲೆ ಆರೋಪಿಯನ್ನು ನೇಪಾಳ ಗಡಿಯಲ್ಲಿ ಬಂಧಿಸಿದ ಪೊಲೀಸರು

ಮುಂಬಯಿಯ ಕೊಲೆ ಆರೋಪಿಯನ್ನು ನೇಪಾಳ ಗಡಿಯಲ್ಲಿ ಬಂಧಿಸಿದ ಪೊಲೀಸರು

ನಾನು ಶಾಸನ ಸಭೆಗೆ ಬರದಂತೆ ಬಿಎಸ್ ವೈ ಮಾಡುತ್ತಿದ್ದಾರೆ: ವಾಟಾಳ್ ನಾಗರಾಜ್

ನಾನು ಶಾಸನ ಸಭೆಗೆ ಬರದಂತೆ ಬಿಎಸ್ ವೈ ಮಾಡುತ್ತಿದ್ದಾರೆ: ವಾಟಾಳ್ ನಾಗರಾಜ್

ಡ್ರಗ್ ಮಾಫಿಯಾ : ರಾಗಿಣಿ, ಸಂಜನಾ ಜಾಮೀನು ಅರ್ಜಿ ಸೆ. 24ಕ್ಕೆ ಮುಂದೂಡಿಕೆ

ಡ್ರಗ್ ಮಾಫಿಯಾ : ರಾಗಿಣಿ, ಸಂಜನಾ ಜಾಮೀನು ಅರ್ಜಿ ಸೆ. 24ಕ್ಕೆ ಮುಂದೂಡಿಕೆ

ಆರು ದಿನಗಳಿಗೆ ವಿಧಾನಮಂಡಲ ಅಧಿವೇಶನ ಮುಕ್ತಾಯ ಮಾಡಲು ನಿರ್ಧಾರ

ಆರು ದಿನಗಳಿಗೆ ವಿಧಾನಮಂಡಲ ಅಧಿವೇಶನ ಮುಕ್ತಾಯ ಮಾಡಲು ನಿರ್ಧಾರ

ಅವರೇನೋ ಶಬ್ದ ಬಳಕೆ ಮಾಡಿದರು, ಇನ್ನು ಈ ರೀತಿ ಮಾತಾಡಬಾರದು ಅಷ್ಟೇ: ವಾರ್ನ್ ಮಾಡಿದ ನಾರಯಣಗೌಡ

ಅವರೇನೋ ಶಬ್ದ ಬಳಕೆ ಮಾಡಿದರು, ಇನ್ನು ಈ ರೀತಿ ಮಾತಾಡಬಾರದು ಅಷ್ಟೇ: ವಾರ್ನ್ ಮಾಡಿದ ನಾರಾಯಣಗೌಡ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mumbai-tdy-1

ಕೈಗಾರಿಕೆಗಳಲ್ಲಿ ಆಮ್ಲಜನಕದ ಕೊರತೆ

ಕೋವಿಡ್‌ ಹಾಟ್‌ಸ್ಪಾಟ್‌ ಆಗುತ್ತಿರುವ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್

ಕೋವಿಡ್‌ ಹಾಟ್‌ಸ್ಪಾಟ್‌ ಆಗುತ್ತಿರುವ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್

ಕೋವಿಡ್‌ ಹಾಟ್‌ಸ್ಪಾಟ್‌ ಆಗುತ್ತಿರುವ ಬಾಂದ್ರಾ -ಕುರ್ಲಾ

ಕೋವಿಡ್‌ ಹಾಟ್‌ಸ್ಪಾಟ್‌ ಆಗುತ್ತಿರುವ ಬಾಂದ್ರಾ -ಕುರ್ಲಾ

mumbai-tdy-1

10 ಸಾವಿರ ಪ್ರಕರಣ ಪಟ್ಟಿಗೆ ಅಂಧೇರಿ, ಮಲಾಡ್‌ ಸೇರ್ಪಡೆ

ಆರನೇ ಶತಮಾನದ ಪಾರಂಪರಿಕ ತಾಣ ಧರಾಶಿವ್‌ ಗುಹೆ ಜೀರ್ಣೋದ್ಧಾರ

ಆರನೇ ಶತಮಾನದ ಪಾರಂಪರಿಕ ತಾಣ ಧರಾಶಿವ್‌ ಗುಹೆ ಜೀರ್ಣೋದ್ಧಾರ

MUST WATCH

udayavani youtube

ಬೆಳೆ ಹಾನಿ ತಡೆಗೆ ಪಟಾಕಿ ಸಿಡಿಸುವ ಕೋವಿ ತಯಾರಿ

udayavani youtube

ಕಬ್ಬಿನ ಬೆಳೆಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

udayavani youtube

Dr.Harsha Kamath : ಕಾರ್ಕಳದ ಈ Doctor ಕಲಾ ಕುಸುರಿಯ Master | Udayavani

udayavani youtube

ಮುಂಬೈಯಿಂದ ಡ್ರಗ್ಸ್‌ ತಂದು ಮಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದರು: ನಗರ ಪೊಲೀಸ್ ಆಯುಕ್ತ

udayavani youtube

ಕುತಂತ್ರಿ ಚೀನಾವನ್ನು ಕಟ್ಟಿ ಹಾಕುವುದು ಹೇಗೆ?ಹೊಸ ಸೇರ್ಪಡೆ

ಬೆಳೆ ಪರಿಹಾರದಲ್ಲಿ  ಕೇಂದ್ರ ತಾರತಮ್ಯ

ಬೆಳೆ ಪರಿಹಾರದಲ್ಲಿ ಕೇಂದ್ರ ತಾರತಮ್ಯ

ಬೆಳೆ ಹಾನಿ; ಎಕರೆಗೆ 25 ಸಾವಿರ ನೀಡಲು ಆಗ್ರಹ

ಬೆಳೆ ಹಾನಿ; ಎಕರೆಗೆ 25 ಸಾವಿರ ನೀಡಲು ಆಗ್ರಹ

ತುಂಗಭದ್ರಾ ಎಡದಂಡೆ ಕಾಲುವೆ ಅಕ್ವಾಡೆಕ್ಟನಲ್ಲಿ‌ ಬಿರುಕು : ಆತಂಕದಲ್ಲಿ ರೈತರು

ತುಂಗಭದ್ರಾ ಎಡದಂಡೆ ಕಾಲುವೆ ಅಕ್ವಾಡೆಕ್ಟನಲ್ಲಿ‌ ಬಿರುಕು : ಆತಂಕದಲ್ಲಿ ರೈತರು

bofara-tdy-2

ಬೀದರನಲ್ಲಿ ಲಕ್ಷ ಹೆಕ್ಟೇರ್‌ ಬೆಳೆ ಹಾನಿ

ಮನೆ ಕುಸಿತ; ಶೀಘ್ರ ಸಮೀಕ್ಷಾ ವರದಿ ಸಲ್ಲಿಸಿ

ಮನೆ ಕುಸಿತ; ಶೀಘ್ರ ಸಮೀಕ್ಷಾ ವರದಿ ಸಲ್ಲಿಸಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.