ಶ್ರೀ ದಾಮೋದರ ಮಹಾಲಕ್ಷ್ಮೀ ಕುಳಾವಿ ಸಮಾಜ: ಶ್ರೀ ಸತ್ಯನಾರಾಯಣ ಮಹಾಪೂಜೆ

Team Udayavani, Apr 25, 2019, 2:50 PM IST

ಮುಂಬಯಿ: ಶ್ರೀ ದಾಮೋದರ ಮಹಾಲಕ್ಷ್ಮೀ ಕುಳಾವಿ ಸಮಾಜ ಮುಂಬಯಿ ಸಮಿತಿಯ ವಾರ್ಷಿಕ ಶ್ರೀ ಸತ್ಯನಾರಾಯಣ ಮಹಾಪೂಜೆಯು ಎ. 21ರಂದು ವಡಾಲದ ಶ್ರೀರಾಮ ಮಂದಿರದ ದ್ವಾರಕಾನಾಥ ಸಭಾ ಭವನದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.

ಶ್ರೀ ದಾಮೋದರ ಮಹಾಲಕ್ಷ್ಮೀ ಕುಳಾವಿ ಸಮಾಜ ಮುಂಬಯಿ ಇದರ ಪ್ರಮುಖರಾದ ಪಾಂಡುರಂಗ ಶ್ಯಾನ್‌ಭಾಗ್‌ ದಂಪತಿ ಪೂಜಾ ಕಾರ್ಯಕ್ರಮದ ಯಜಮಾನತ್ವವನ್ನು ವಹಿಸಿದ್ದರು. ಇದೇ ಸಂದರ್ಭದಲ್ಲಿ ಶ್ರೀ ಬಾಲಾಜಿ ಭಜನಾ ಮಂಡಳಿ ವಸಾಯಿ ಇವರಿಂದ ಭಜನಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ದಾಮೋದರ ಮಹಾಲಕ್ಷ್ಮೀ ಸಂಸ್ಥಾನ ಮುಂಬಯಿ ಇದರ ಸಂಚಾಲಕ ಹರಿಮಣಿ ಶ್ಯಾನ್‌ಭಾಗ್‌, ಜಿಎಸ್‌ಬಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ವಡಾಲ ಇದರ ಮಾಜಿ ಕಾರ್ಯಾಧ್ಯಕ್ಷ, ಟ್ರಸ್ಟಿ ಎನ್‌. ಎನ್‌. ಪಾಲ್‌, ಟ್ರಸ್ಟಿ ಗೋಪಾಲ್‌ ಪೈ, ಗೋಕರ್ಣ ಪರ್ತಗಾಳಿ ಶ್ರೀ ಜೀವೋತ್ತಮ ಮಠ ಶ್ರೀರಾಮ ಮಂದಿರದ ವಡಾಲ ವಕ್ತಾರ ಕಮಲಾಕ್ಷ ಸರಾಫ್‌, ಹಾಗೂ ಜಂಟಿ ಸಂಸ್ಥೆಗಳ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ಶ್ರೀ ದಾಮೋದರ ಮಹಾಲಕ್ಷ್ಮೀ ಕುಳಾವಿ ಸಮಾಜ ಮುಂಬಯಿ ಇದರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಸಮಾಜ ಬಾಂಧವರು, ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಕೊನೆಯಲ್ಲಿ ಮಹಾ ಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು. ಸಮಾಜ ಬಾಂಧವರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ