226 ರನ್ನುಗಳಿಂದ ಗೆದ್ದ ವೆಸ್ಟ್ಇಂಡೀಸ್
Team Udayavani, Jun 12, 2018, 6:00 AM IST
ಪೋರ್ಟ್ ಆಫ್ ಸ್ಪೇನ್: ಪ್ರವಾಸಿ ಶ್ರೀಲಂಕಾ ವಿರುದ್ಧದ ಪೋರ್ಟ್ ಆಫ್ ಸ್ಪೇನ್ ಟೆಸ್ಟ್ ಪಂದ್ಯವನ್ನು ವೆಸ್ಟ್ ಇಂಡೀಸ್ 226 ರನ್ನುಗಳ ಬೃಹತ್ ಅಂತರದಿಂದ ಗೆದ್ದು 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಗೆಲುವಿಗೆ 453 ರನ್ನುಗಳ ಕಠಿನ ಗುರಿ ಪಡೆದ ಶ್ರೀಲಂಕಾ 226ಕ್ಕೆ ಆಲೌಟ್ ಆಯಿತು. ಆರಂಭಕಾರ ಕುಸಲ್ ಮೆಂಡಿಸ್ 102 ರನ್ ಮಾಡಿ ಹೋರಾಟವೊಂದನ್ನು ಸಂಘಟಿಸಿದರೂ ಉಳಿದವರು ಕ್ರೀಸ್ ಆಕ್ರಮಿಸಿಕೊಳ್ಳುವಲ್ಲಿ ವಿಫಲರಾದರು. ಚೇಸ್ 4, ದೇವೇಂದ್ರ ಬಿಶೂ 3, ಗ್ಯಾಬ್ರಿಯಲ್ 2 ವಿಕೆಟ್ ಕಿತ್ತರು. ಮೊದಲ ಇನ್ನಿಂಗ್ಸ್ನಲ್ಲಿ ಅಜೇಯ ಶತಕ ಹೊಡೆದಿದ್ದ ಶೇನ್ ಡೌರಿಚ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.
ಸಂಕ್ಷಿಪ್ತ ಸ್ಕೋರ್
ವೆಸ್ಟ್ ಇಂಡೀಸ್-8 ವಿಕೆಟಿಗೆ 424 ಡಿಕ್ಲೇರ್ ಮತ್ತು 7 ವಿಕೆಟಿಗೆ 223 ಡಿಕ್ಕೇರ್. ಶ್ರೀಲಂಕಾ-185 ಮತ್ತು 226.