ಭಾರತೀಯ ಆ್ಯತ್ಲೆಟಿಕ್ಸ್ಗೆ 3 ವಿದೇಶಿ ಕೋಚ್ಗಳು
Team Udayavani, Feb 7, 2019, 12:30 AM IST
ಹೊಸದಿಲ್ಲಿ: ಭಾರತೀಯ ಆ್ಯತ್ಲೆಟಿಕ್ಸ್ ಫೆಡರೇಶನ್ (ಎಎಫ್ಐ) 3 ವಿದೇಶಿ ಕೋಚ್ಗಳನ್ನು ನೇಮಕ ಮಾಡಿದೆ. ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್) ಟ್ವಿಟರ್ನಲ್ಲಿ ಇದನ್ನು ತಿಳಿಸಿದೆ.
ರಾಷ್ಟ್ರೀಯ ಜಾವೆಲಿನ್ ಎಸೆತಗಾರರಿಗೆ ಸಹಾಯಕ ಕೋಚ್ ಆಗಿ ಜರ್ಮನಿಯ ಬಯೋ ಮೆಕ್ಯಾನಿಕ್ ತಜ್ಞ ಡಾ| ಕ್ಲಾಸ್ ಬರ್ಟೊನೀಝ್ ಅವರನ್ನು ನೇಮಿಸಿದೆ. ವಿ ಹೊನ್ ಪ್ರಧಾನ ಕೋಚ್ ಆಗಿ ಉಳಿದುಕೊಂಡಿದ್ದಾರೆ. ಅವರಿಗೆ ಸಹಾಯಕರಾಗಿ ಕ್ಲಾಸ್ ಕೆಲಸ ಮಾಡಲಿದ್ದಾರೆ. ಬಹ್ರೈನ್ ರಿಲೇ ತಂಡದ ಸಹಾಯಕ ಕೋಚ್ ಆಗಿದ್ದ ರಶ್ಯದ ವ್ಯಾಲೆರಿ ಸತ್ಶುಕ್ ಅವರನ್ನು, 400 ಮೀ. ವಿಭಾಗದ ಮುಖ್ಯ ಕೋಚ್ ಗ್ಯಾಲಿನ ಬುಕರಿನ ಅವರಿಗೆ ಸಹಾಯಕರಾಗಿ ನೇಮಕ ಮಾಡಲಾಗಿದೆ.ಬೆಲರೂಸ್ನ ಆ್ಯಂಡ್ರಿ ಫಿಲಿಮೊನು ಅವರನ್ನು ಎಎಫ್ಐ ಮತ್ತೆ ಕರೆಸಿಕೊಂಡಿದೆ. 2012ರ ಲಂಡನ್ ಒಲಿಂಪಿಕ್ಸ್ ಹಾಗೂ 2016ರ ರಿಯೋ ಒಲಿಂಪಿಕ್ಸ್ ವೇಳೆ ಅವರು ಭಾರತ ತಂಡದಿಂದ ಬೇರ್ಪಟ್ಟಿದ್ದರು.
ಕ್ಲಾಸ್ ಬರ್ಟೊನಿಯೆಟ್ ಅವರನ್ನು ಜಾವೆಲಿನ್ ಸಹಾಯಕ ಕೋಚ್ ಆಗಿ ನೇಮಕ ಮಾಡಿರುವುದು ಪ್ರಮುಖ ಕೋಚ್ ವಿ ಹೊನ್ ಅವರಿಗೆ ಒತ್ತಡ ಕಡಿಮೆಯಾಗಲಿದ್ದು, ಅವರು ನೀರಜ್ ಚೋಪ್ರಾ ಅವರ ಪ್ರದರ್ಶನದ ಮೇಲೆ ಗಮನ ಕೇಂದ್ರೀಕರಿಸಬಹುದಾಗಿದೆ. ಹಿಮಾ ದಾಸ್ ಅವರ ತರಬೇತಿಗೆ ಸತ್ಶುಕ್ ಆಗಮನ ನೆರವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…