ಬ್ಯಾಡ್ಮಿಂಟನ್ನಲ್ಲಿ ಭಾರತಕ್ಕೆ ಮೂರನೇ ಚಿನ್ನ; ಟಿಟಿಯಲ್ಲಿ ಅಚಂತಾ ಕಮಾಲ್
Team Udayavani, Aug 8, 2022, 6:14 PM IST
ಬರ್ಮಿಂಗ್ ಹ್ಯಾಮ್ : ಕಾಮನ್ವೆಲ್ತ್ ಕ್ರೀಡಾಕೂಟದ ಅಂತಿಮ ದಿನ ಭಾರತದ ಪಾಲಿಗೆ ಸ್ಮರಣೀಯವಾಗಿದ್ದು, ಬಂಗಾರದ ಬೇಟೆ ಮುಂದುವರಿದಿದೆ.
ಬ್ಯಾಡ್ಮಿಂಟನ್ ಪುರುಷರ ಡಬಲ್ಸ್ನಲ್ಲಿ ಸಾತ್ವಿಕ್ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಇಂಗ್ಲೆಂಡ್ನ ಬೆನ್ ಲೇನ್ ಮತ್ತು ಸೀನ್ ವೆಂಡಿ ಅವರನ್ನು ಸೋಲಿಸಿ ಚಿನ್ನದ ಪದಕ ಗೆದ್ದರು. ಅವರು 21-15, 21-13 ರಲ್ಲಿ ಸೆಟ್ ಗಳಲ್ಲಿ ಜಯ ಗಳಿಸಿದರು.
ಅನುಭವಿ ಟಿಟಿ ಆಟಗಾರ ಅಚಂತಾ ಶರತ್ ಕಮಲ್ ಟೇಬಲ್ ಟೆನ್ನಿಸ್ ನಲ್ಲಿ ಇಂಗ್ಲೆಂಡ್ನ ಲಿಯಾಮ್ ಪಿಚ್ಫೋರ್ಡ್ ವಿರುದ್ಧ 4-1 ಅಂತರದಲ್ಲಿ ಜಯಗಳಿಸಿ ಚಿನ್ನದ ಪದಕ ಗೆದ್ದರು.
ಬ್ಯಾಡ್ಮಿಂಟನ್ ಕೂಟ ಸಿಂಗಲ್ಸ್ ನಲ್ಲಿ ಭಾರತ ಎರಡು ಚಿನ್ನ ಗೆದ್ದಿದೆ. ಮಹಿಳೆಯರ ಸಿಂಗಲ್ಸ್ ನಲ್ಲಿ ಪಿ.ವಿ.ಸಿಂಧು, ಪುರುಷರ ಸಿಂಗಲ್ಸ್ ನಲ್ಲಿ ಲಕ್ಷ್ಯ ಸೇನ್ ಬಂಗಾರದ ಪದಕ ತಮ್ಮದಾಗಿಸಿಕೊಂಡಿದ್ದಾರೆ.