ಅಯರ್‌ಲ್ಯಾಂಡ್‌ ಟೆಸ್ಟ್‌ ಪಂದ್ಯದಿಂದ ಆ್ಯಂಡರ್ಸನ್‌ ಔಟ್‌

Team Udayavani, Jul 24, 2019, 6:07 AM IST

ಲಂಡನ್‌: ಬುಧವಾರ ಲಾರ್ಡ್ಸ್‌ ಅಂಗಳದಲ್ಲಿ ಆರಂಭವಾಗುವ ಇಂಗ್ಲೆಂಡ್‌ ಮತ್ತು ಅಯರ್‌ಲ್ಯಾಂಡ್‌ ವಿರುದ್ಧದ ಟೆಸ್ಟ್‌ ಪಂದ್ಯದಿಂದ ಇಂಗ್ಲೆಂಡ್‌ ವೇಗಿ ಜೇಮ್ಸ್‌ ಆ್ಯಂಡರ್ಸನ್‌ ಹೊರಬಿದ್ದಿದ್ದಾರೆ.

ಆ್ಯಂಡರ್ಸನ್‌ ಬಲಗಾಲಿನ ಸ್ನಾಯುಸೆಳೆತಕ್ಕೆ ಒಳಗಾಗಿದ್ದು ಅವರಿಗೆ ಕೆಲ ತಿಂಗಳ ವಿಶ್ರಾಂತಿ ಅಗತ್ಯವಿದೆ ಎಂದು ಇಂಗ್ಲೆಂಡ್‌ ತಂಡದ ವೈದ್ಯಾಧಿಕಾರಿಗಳು ಸೂಚಿಸಿದ್ದಾರೆ. ಈ ಕಾರಣದಿಂದ ಆ್ಯಂಡರ್ಸನ್‌ ಟೆಸ್ಟ್‌ ನಿಂದ ದೂರ ಉಳಿಯುವಂತಾಗಿದೆ. ಮುಂದಿನ ತಿಂಗಳು ನಡೆಯುವ ಆ್ಯಶಸ್‌ ಕೂಟಕ್ಕೂ ಅವರು ಆಡುವುದು ಅನುಮಾನ ಎನ್ನಲಾಗಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ