ಲೋಕವೇ ಸಂಭ್ರಮಿಸಿತು! ಎಲ್ಲೆಡೆ ವಿಜಯೋತ್ಸವ, ಮೆಸ್ಸಿ ಮೆಸ್ಸಿ ಎಂಬ ಭೋರ್ಗರೆತ

Team Udayavani, Dec 20, 2022, 7:40 AM IST

ಲೋಕವೇ ಸಂಭ್ರಮಿಸಿತು! ಎಲ್ಲೆಡೆ ವಿಜಯೋತ್ಸವ, ಮೆಸ್ಸಿ ಮೆಸ್ಸಿ ಎಂಬ ಭೋರ್ಗರೆತ

ಬ್ಯೂನಸ್‌ ಐರಿಸ್‌ (ಆರ್ಜೆಂಟೀನಾ): ಇಡೀ ಜಗತ್ತಿನ ಹಾರೈಕೆ ಒಂದೇ ಆಗಿತ್ತು, ಈ ಕೊನೆಯ ಅವಕಾಶ ದಲ್ಲಾದರೂ ಫ‌ುಟ್‌ಬಾಲ್‌ ಮೋಡಿಗಾರ ಲಿಯೋನೆಲ್‌ ಮೆಸ್ಸಿ ವಿಶ್ವಕಪ್‌ ಹಿಡಿದು ಎಂದು ಸಂಭ್ರಮಿಸಲಿ ಎಂಬುದು. ಈ ನಿರೀಕ್ಷೆ ರವಿವಾರ ರಾತ್ರಿ “ಲುಸೈಲ್‌ ಸ್ಟೇಡಿಯಂ’ನಲ್ಲಿ ಫ‌ಲಿಸಿದ ಬೆನ್ನಲ್ಲೇ ಜಗತ್ತು ಮಹಾಸಂಭ್ರಮದಲ್ಲಿ ಮುಳುಗಿದ್ದು ಸಹಜವೇ ಆಗಿತ್ತು. ಎಲ್ಲೆಡೆ ವಿಜಯೋತ್ಸವ, ಮೆಸ್ಸಿ ಮೆಸ್ಸಿ ಎಂಬ ಭೋರ್ಗರೆತ, ಬೆಳಕಿನ ಚಿತ್ರಪಟ, ಆಗಸದಲ್ಲಿ ಸುಡಿಮದ್ದಿನ ಚಿತ್ತಾರ… ಹೀಗೆ ಅಭಿಮಾನಿಗಳ ಸಂಭ್ರಮ ಎಲ್ಲ ಗಡಿಗಳನ್ನು ದಾಟಿ ಮುನ್ನುಗ್ಗಿತ್ತು.

ಆರ್ಜೆಂಟೀನಾ ರಾಜಧಾನಿ ಬ್ಯೂನಸ್‌ ಐರಿಸ್‌ನಿಂದಲೇ ಆರಂಭಿಸುವುದಾದರೆ, ಮೆಸ್ಸಿ ಕಪ್‌ ಚುಂಬಿಸುವ ವೇಳೆ ಆಗಷ್ಟೇ ಸಂಜೆ ಆವರಿಸುತ್ತಿತ್ತು. ರಾತ್ರಿಯಿಡೀ ಜಾಗರಣೆ. ರಾಷ್ಟ್ರೀಯ ಸ್ಮಾರಕವಾದ “ಒಬೆಲಿಸ್ಕೊ’ದಲ್ಲಿ ಒಂದೆರಡಲ್ಲ, ಬರೋಬ್ಬರಿ 20 ಲಕ್ಷದಷ್ಟು ಮಂದಿ ಬೀದಿಯಲ್ಲಿ ಕುಣಿದು ಕುಪ್ಪಳಿಸು ತ್ತಿದ್ದರು. ಪುಟ್ಟ ಮಕ್ಕಳಿಂದ ಹಿಡಿದು, ಹಿರಿಯ ನಾಗರಿಕರೂ ಈ ಫ‌ುಟ್‌ಬಾಲ್‌ ಖುಷಿಯಲ್ಲಿ ತೇಲಾಡಿದರು. ಎಲ್ಲ ಕಟ್ಟಡಗಳ ಮೇಲೂ ಆರ್ಜೆಂಟೀನಾದ ಬೃಹತ್‌ ಜೆರ್ಸಿ, ಎಲ್ಲರ ಮೈಮೇಲೂ ಆರ್ಜೆಂಟೀನಾದ ಫ‌ುಟ್‌ಬಾಲ್‌ ದಿರಿಸು, ಕೈಯಲ್ಲಿ ರಾಷ್ಟ್ರಧ್ವಜ… ಕ್ರಿಸ್‌ಮಸ್‌ಗೂ ಮೊದಲೇ ಕಂಡುಬಂದ ಈ ಸಂಭ್ರಮದ ವಾತಾವರಣ ಆರ್ಜೆಂಟೀನಾದಲ್ಲಿ ಮಹಾಅಲೆಯನ್ನೇ ಎಬ್ಬಿಸಿದೆ. ಮೆಸ್ಸಿ ಬಳಗದ ಗೆಲುವಿನ ನಾದಕ್ಕೆ ಎಲ್ಲರೂ ದನಿಗೂಡಿಸಿದರು. ಸುದೀರ್ಘ‌ 36 ವರ್ಷಗಳ ಕಾಯುವಿಕೆಯ ಫ‌ಲ ಇದಾಗಿತ್ತು.

ಇವೆಲ್ಲದರ ನಡುವೆ ಆಕಾಶದೆತ್ತರಕೆ ಬೆಳೆದು ನಿಂತ ಮೆಸ್ಸಿ ಗೆಲುವಿನ ನಗು ಚಿಮ್ಮಿಸುತ್ತಿದ್ದರು. ಪ್ರೊಜೆಕ್ಟರ್‌ ಮೂಲಕ ಅವರ ಬೃಹತ್‌ ಚಿತ್ರವನ್ನು ಇಲ್ಲಿ ಪ್ರತಿಬಿಂಬಿಸಲಾಗಿತ್ತು. ಇನ್ನು ಮೆಸ್ಸಿ ಟೀಮ್‌ ಟ್ರೋಫಿಯೊಂದಿಗೆ ಮರಳಿದೊಡನೆ ಇದಕ್ಕೂ ಮಿಗಿಲಾದ ಸಂಭ್ರಮಾಚರಣೆ ನಡೆಯುವುದರಲ್ಲಿ ಅನುಮಾನವಿಲ್ಲ. ಫ‌ುಟ್‌ಬಾಲನ್ನೇ ಉಸಿರಾಡುತ್ತಿರು ದಕ್ಷಿಣ ಅಮೆರಿಕ, ಯುರೋಪ್‌ ದೇಶಗಳಲ್ಲೂ ಆರ್ಜೆಂಟೀನಾ ಗೆಲುವನ್ನು ದೊಡ್ಡ ಮಟ್ಟದಲ್ಲೇ ಸಂಭ್ರಮಿಸಲಾಯಿತು.

ಫ‌ುಟ್‌ಬಾಲ್‌ ಕಿಕ್‌
– ಆರ್ಜೆಂಟೀನಾ ಕೂಟದ ಮೊದಲ ಪಂದ್ಯವನ್ನು ಸೋತೂ ವಿಶ್ವ ಚಾಂಪಿ ಯನ್‌ ಆಗಿ ಮೂಡಿಬಂದ ಕೇವಲ 2ನೇ ತಂಡವೆನಿಸಿತು. ಮೊದಲ ತಂಡ ಸ್ಪೇನ್‌. ಅದು 2010ರ ಪಂದ್ಯಾವಳಿಯ ಆರಂಭಿಕ ಪಂದ್ಯದಲ್ಲಿ ಸ್ವಿಜರ್ಲೆಂಡ್‌ಗೆ ಸೋತು, ಕೊನೆಯಲ್ಲಿ ಚಾಂಪಿಯನ್‌ ಪಟ್ಟ ಅಲಂಕರಿಸಿತ್ತು.
– ವಿಶ್ವಕಪ್‌ಗೆ ಅಡಿಯಿರಿಸಿ 6,029 ದಿನಗಳ ಬಳಿಕ ಮೆಸ್ಸಿ ಅವರಿಗೆ ಕಪ್‌ ಎತ್ತುವ ಅದೃಷ್ಟ ಒಲಿಯಿತು.
– ಮೆಸ್ಸಿ ವಿಶ್ವಕಪ್‌ ಕೂಟವೊಂದರ ಎಲ್ಲ ಹಂತಗಳಲ್ಲೂ ಗೋಲು ಬಾರಿಸಿದ ವಿಶ್ವದ ಏಕೈಕ ಆಟಗಾರ. ಲೀಗ್‌, ರೌಂಡ್‌ ಆಫ್ 16, ಕ್ವಾರ್ಟರ್‌ ಫೈನಲ್‌, ಸೆಮಿಫೈನಲ್‌ ಮತ್ತು ಫೈನಲ್‌ನಲ್ಲಿ ಗೋಲು ಬಾರಿಸಿದ ಸಾಹಸ.
– ಮೆಸ್ಸಿ ವಿಶ್ವಕಪ್‌ ಪಂದ್ಯಾವಳಿಯೊಂದರಲ್ಲಿ ಅತ್ಯಧಿಕ 5 ಸಲ “ಪ್ಲೇಯರ್‌
ಆಫ್ ದ ಮ್ಯಾಚ್‌’ ಪ್ರಶಸ್ತಿಯಿಂದ ಪುರಸ್ಕೃತರಾದ ಏಕೈಕ ಆಟಗಾರ.
– ಮೆಸ್ಸಿ 2 ಪ್ರತಿಷ್ಠಿತ ಅಂತಾರಾಷ್ಟ್ರೀಯ ಕೂಟಗಳಲ್ಲಿ ಅತ್ಯಧಿಕ 26 ಗೋಲು ಬಾರಿಸಿದ ದಕ್ಷಿಣ ಅಮೆರಿಕದ ಆಟಗಾರನೆನಿಸಿದರು (ವಿಶ್ವಕಪ್‌ನಲ್ಲಿ 13, ಕೊಪಾ ಅಮೆರಿಕ ಕೂಟದಲ್ಲಿ 13). ರೊನಾಲ್ಡೊ ನಝಾರಿಯೊ ದ್ವಿತೀಯ ಸ್ಥಾನಕ್ಕೆ ಇಳಿದರು (25 ಗೋಲ್‌).
– ಮೆಸ್ಸಿ ಅತ್ಯಧಿಕ 26 ವಿಶ್ವಕಪ್‌ ಪಂದ್ಯಗಳಲ್ಲಿ ಆಡಿದ ದಾಖಲೆ ಸ್ಥಾಪಿಸಿದರು.
– ವಿಶ್ವಕಪ್‌ ಫೈನಲ್‌ನಲ್ಲಿ 2 ಗೋಲು ಹೊಡೆದ ಅತೀ ಹಿರಿಯ ಆಟಗಾರನೆಂಬ ದಾಖಲೆಯೂ ಮೆಸ್ಸಿ ಅವರದಾಯಿತು (35 ವರ್ಷ).
– ಮೆಸ್ಸಿ ಬಲಗಾಲಿನಿಂದ 100 ಗೋಲು ಹೊಡೆದರು.
– ಆರ್ಜೆಂಟೀನಾದ ಲಿಯೋನೆಲ್‌ ಸ್ಕಾಲೊನಿ ವಿಶ್ವಕಪ್‌ ಹಾಗೂ ಕೊಪಾ ಅಮೆರಿಕ (2021) ಪ್ರಶಸ್ತಿಗಳೆರಡನ್ನೂ ಗೆದ್ದ ಕೇವಲ 3ನೇ ಮ್ಯಾನೇಜರ್‌ ಎನಿಸಿದರು. ಬ್ರಝಿಲ್‌ನ ಮಾರಿಯೊ ಝಗಾಲೊ, ಕಾರ್ಲೋಸ್‌ ಆಲ್ಬರ್ಟ್‌ ಪೆರೇರ ಉಳಿದಿಬ್ಬರು.
– ಕೈಲಿಯನ್‌ ಎಂಬಪೆ ವಿಶ್ವಕಪ್‌ ಪಂದ್ಯಾವಳಿಯೊಂದರಲ್ಲಿ ಅತ್ಯಧಿಕ 8 ಗೋಲು ಬಾರಿಸಿದ 23 ಹಾಗೂ ಇದಕ್ಕೂ ಕೆಳ ವಯಸ್ಸಿನ ಆಟಗಾರನೆನಿಸಿದರು. 1958ರಲ್ಲಿ ಪೀಲೆ, 1978ರಲ್ಲಿ ಮಾರಿಯೊ ಕೆಂಪೆಸ್‌ ಮತ್ತು 2014ರಲ್ಲಿ ಜೇಮ್ಸ್‌ ರೋಡ್ರಿಗೆಝ್ ತಲಾ 6 ಗೋಲು ಹೊಡೆದಿದ್ದರು.
– ಎಂಬಪೆ 24 ವರ್ಷ ತುಂಬುವುದರೊಳಗೆ ವಿಶ್ವಕಪ್‌ ನಾಕೌಟ್‌ ಪಂದ್ಯಗಳಲ್ಲಿ ಸರ್ವಾಧಿಕ 7 ಗೋಲು ಹೊಡೆದರು. ಪೀಲೆ ಅವರ 6 ಗೋಲುಗಳ ದಾಖಲೆ ಪತನಗೊಂಡಿತು.
– ಎಂಬಪೆ ವಿಶ್ವಕಪ್‌ ಫೈನಲ್‌ಗ‌ಳಲ್ಲಿ ಅತ್ಯಧಿಕ 4 ಗೋಲು ಹೊಡೆದ ದಾಖಲೆ ಸ್ಥಾಪಿಸಿದರು (2018ರಲ್ಲಿ ಒಂದು, ಈ ಬಾರಿ 3).

ಮರಡೋನಾ ಇರಬೇಕಿತ್ತು…
ಭಾರತದಲ್ಲಿ ಮೆಸ್ಸಿಮೇನಿಯಾ ಆರಂಭದಿಂದಲೇ ಕಂಡುಬಂದಿತ್ತು. ಆರ್ಜೆಂಟೀನಾ ಚಾಂಪಿಯನ್‌ ಆದಮೇಲಂತೂ ಈ ಖುಷಿ ಮುಗಿಲು ಮುಟ್ಟಿತು. ಕೊಚ್ಚಿ, ತಿರುವನಂತಪುರ, ಪಣಜಿ, ಕೋಲ್ಕತಾ, ಇಂಫಾಲ ಮೊದಲಾದ ಕಡೆ ಫ‌ುಟ್‌ಬಾಲ್‌ ಅಭಿಮಾನಿಗಳು ಬೀದಿಗೆ ಇಳಿದು ವಿಜಯೋತ್ಸವ ಆಚರಿಸಿದರು. ಮೆಸ್ಸಿಗೆ ಜೈಕಾರ ಕೂಗಿದರು.
ನೀಲಿ-ಬಿಳಿ ಬಣ್ಣದ ಜೆರ್ಸಿ, ಆರ್ಜೆಂಟೀನಾದ ರಾಷ್ಟ್ರಧ್ವಜ ಎಲ್ಲೆಡೆ ಕಂಡುಬಂತು.

ಸುಡುಮದ್ದಿನ ಸದ್ದು ಕಿವಿಗೆ ಅಪ್ಪಳಿಸುತ್ತಿತ್ತು. “ಈ ಸಂಭ್ರಮವನ್ನು ಕಾಣಲು ಡೀಗೊ ಮರಡೋನಾ ಇರಬೇಕಿತ್ತು’ ಎಂಬುದಾಗಿ ಆರ್ಜೆಂಟೀನಾದ ಕಟ್ಟಾ ಅಭಿಮಾನಿ ಸುಜನ್‌ ದತ್ತ ನೀಡಿದ ಹೇಳಿಕೆ ಅರ್ಥಪೂರ್ಣವಾಗಿತ್ತು. ಕೋಲ್ಕತಾದ ಕೆಲವೆಡೆ ಮೆಸ್ಸಿ ಜತೆಗೆ ಮರಡೋನಾ ಅವರ ಪ್ರತಿಕೃತಿಯೂ ರಾರಾಜಿಸುತ್ತಿದ್ದುನ್ನು ನೋಡಬಹುದಿತ್ತು.

ಗೋವಾದ ಬಹುತೇಕ ಕಡೆಗಳಲಲ್ಲಿ ಮಿನಿ ಪ್ರೊಜೆಕ್ಟರ್‌ ಮೂಲಕ ಎಲ್‌ಇಡಿ ಸ್ಕ್ರೀನ್‌ನಲ್ಲಿ ಫೈನಲ್‌ ಪಂದ್ಯದ ನೇರ ಪ್ರಸಾರಕ್ಕೆ ಏರ್ಪಾಡು ಮಾಡಲಾಗಿತ್ತು. ಬಳಿಕ ಇದರ ಮರುಪ್ರಸಾರವನ್ನೂ ಮಾಡಲಾಯಿತು.
ಕೇಳರದ ಕೆಲವೆಡೆ ಇದು ಅತಿರೇಕಕ್ಕೆ ಹೋಯಿತು. ಕಣ್ಣೂರಿನಲ್ಲಿ ಫ‌ುಟ್‌ಬಾಲ್‌ ಅಭಿಮಾನಿಗಳು ಮತ್ತು ಪೊಲೀಸರ ನಡುವೆ ಗಲಾಟೆ ನಡೆಯಿತು. ಪೊಲೀಸರ ಮೇಲೆ ಹಲ್ಲೆ ನಡೆಸಲಾಗಿದ್ದು, ಓರ್ವನಿಗೆ ಚೂರಿಯಿಂದ ಇರಿಯಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ 5 ಮಂದಿ ವಿರುದ್ಧ ಕೇಸ್‌ ದಾಖಲಿಸಲಾಗಿದೆ. ಇಂಫಾಲದಲ್ಲಿ ನಡೆದ ದುರಂತವೊಂದರಲ್ಲಿ 50 ವರ್ಷದ ಮಹಿಳೆಯೊಬ್ಬರು ಗುಂಡಿನ ದಾಳಿಯಲ್ಲಿ ಮೃತಪಟ್ಟರು.

ಈ ರಾಜ್ಯಗಳ ಮುಖ್ಯಮಂತ್ರಿಗಳು ವಿಶ್ವ ಚಾಂಪಿಯನ್‌ ಆರ್ಜೆಂಟೀನಾಕ್ಕೆ ಶುಭ ಹಾರೈಸಿದ್ದು ವಿಶೇಷವಾಗಿತ್ತು.

ಟಾಪ್ ನ್ಯೂಸ್

SS Rajamouli:‌ ಬರಲಿದೆಯಾ ʼRRRʼ ಸೀಕ್ವೆಲ್?: ಜಪಾನ್‌ನಲ್ಲಿ ಸುಳಿವು ಕೊಟ್ಟ ರಾಜಮೌಳಿ

SS Rajamouli:‌ ಬರಲಿದೆಯಾ ʼRRRʼ ಸೀಕ್ವೆಲ್?: ಜಪಾನ್‌ನಲ್ಲಿ ಸುಳಿವು ಕೊಟ್ಟ ರಾಜಮೌಳಿ

Yadgiri: ಜೆಡಿಎಸ್ ಪಕ್ಷಕ್ಕೆ ಅಂಗಲಾಚುವ ಸ್ಥಿತಿ ಬಂದಿಲ್ಲ… ಶಾಸಕ‌ ಕಂದಕೂರು

Yadgiri: ಜೆಡಿಎಸ್ ಪಕ್ಷಕ್ಕೆ ಅಂಗಲಾಚುವ ಸ್ಥಿತಿ ಬಂದಿಲ್ಲ… ಶಾಸಕ‌ ಕಂದಕೂರು

OTT: ಸದ್ದಿಲ್ಲದೆ ಓಟಿಟಿಗೆ ಬಂತು ʼಒಂದು ಸರಳ ಪ್ರೇಮಕಥೆ’: ಯಾವುದರಲ್ಲಿ ಸ್ಟ್ರೀಮಿಂಗ್?‌

OTT: ಸದ್ದಿಲ್ಲದೆ ಓಟಿಟಿಗೆ ಬಂತು ʼಒಂದು ಸರಳ ಪ್ರೇಮಕಥೆ’: ಯಾವುದರಲ್ಲಿ ಸ್ಟ್ರೀಮಿಂಗ್?‌

Lok Sabha 2024: ಮೇಘಾಲಯದಲ್ಲಿ ಯಾವಾಗ ಜಾನ್‌ ಎಫ್‌ ಕೆನಡಿ ಹಿಟ್ಲರ್‌ ನನ್ನು ಬಂಧಿಸಿದ್ದು!

Lok Sabha 2024: ಮೇಘಾಲಯದಲ್ಲಿ ಯಾವಾಗ ಜಾನ್‌ ಎಫ್‌ ಕೆನಡಿ ಹಿಟ್ಲರ್‌ ನನ್ನು ಬಂಧಿಸಿದ್ದು!

17

ನಿರ್ಮಾಪಕನಾದ ರಾಜಮೌಳಿ ಪುತ್ರ: ಎರಡು ಹೊಸ ಸಿನಿಮಾ ಅನೌನ್ಸ್; ಲೀಡ್‌ ರೋಲ್ ನಲ್ಲಿ ಫಾಫಾ

ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ

ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ

Apex

CAA: ದೇಶದಲ್ಲಿ ಸಿಎಎ ಜಾರಿಗೆ ತಡೆ ನೀಡಲ್ಲ, 3 ವಾರದೊಳಗೆ ಉತ್ತರ ನೀಡಿ: ಸುಪ್ರೀಂಕೋರ್ಟ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

1-asaas

Mumbai Indians; ಹಾರ್ದಿಕ್‌ ಪಾಂಡ್ಯ, ಬೌಷರ್‌ ಮೌನ!

1-wewewqe

‘Bangaluru’: ಅನ್‌ಬಾಕ್ಸ್‌  ಸಮಾರಂಭದಲ್ಲಿ ಆರ್‌ಸಿಬಿ ವನಿತೆಯರು

1-saddas-aa-4

IPL:ರಾಹುಲ್‌ ಫಿಟ್‌; ಕೀಪಿಂಗ್‌ ಡೌಟ್‌

1-saddas-aa-3

IPL; ಬೆಂಗಳೂರಿನಲ್ಲಿ ಅಭ್ಯಾಸ ಆರಂಭಿಸಿದ ಕೊಹ್ಲಿ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

SS Rajamouli:‌ ಬರಲಿದೆಯಾ ʼRRRʼ ಸೀಕ್ವೆಲ್?: ಜಪಾನ್‌ನಲ್ಲಿ ಸುಳಿವು ಕೊಟ್ಟ ರಾಜಮೌಳಿ

SS Rajamouli:‌ ಬರಲಿದೆಯಾ ʼRRRʼ ಸೀಕ್ವೆಲ್?: ಜಪಾನ್‌ನಲ್ಲಿ ಸುಳಿವು ಕೊಟ್ಟ ರಾಜಮೌಳಿ

Yadgiri: ಜೆಡಿಎಸ್ ಪಕ್ಷಕ್ಕೆ ಅಂಗಲಾಚುವ ಸ್ಥಿತಿ ಬಂದಿಲ್ಲ… ಶಾಸಕ‌ ಕಂದಕೂರು

Yadgiri: ಜೆಡಿಎಸ್ ಪಕ್ಷಕ್ಕೆ ಅಂಗಲಾಚುವ ಸ್ಥಿತಿ ಬಂದಿಲ್ಲ… ಶಾಸಕ‌ ಕಂದಕೂರು

ಇಂಡಿಯನ್ ಆಯಿಲ್ ಕಂಪನಿಗೆ ನಿರ್ದೇಶಕರಾಗಿ (ಎಚ್‌ಆರ್) ರಶ್ಮಿ ಗೋವಿಲ್ ಅಧಿಕಾರ ಸ್ವೀಕಾರ

ಇಂಡಿಯನ್ ಆಯಿಲ್ ಕಂಪನಿಗೆ ನಿರ್ದೇಶಕರಾಗಿ (ಎಚ್‌ಆರ್) ರಶ್ಮಿ ಗೋವಿಲ್ ಅಧಿಕಾರ ಸ್ವೀಕಾರ

OTT: ಸದ್ದಿಲ್ಲದೆ ಓಟಿಟಿಗೆ ಬಂತು ʼಒಂದು ಸರಳ ಪ್ರೇಮಕಥೆ’: ಯಾವುದರಲ್ಲಿ ಸ್ಟ್ರೀಮಿಂಗ್?‌

OTT: ಸದ್ದಿಲ್ಲದೆ ಓಟಿಟಿಗೆ ಬಂತು ʼಒಂದು ಸರಳ ಪ್ರೇಮಕಥೆ’: ಯಾವುದರಲ್ಲಿ ಸ್ಟ್ರೀಮಿಂಗ್?‌

Lok Sabha 2024: ಮೇಘಾಲಯದಲ್ಲಿ ಯಾವಾಗ ಜಾನ್‌ ಎಫ್‌ ಕೆನಡಿ ಹಿಟ್ಲರ್‌ ನನ್ನು ಬಂಧಿಸಿದ್ದು!

Lok Sabha 2024: ಮೇಘಾಲಯದಲ್ಲಿ ಯಾವಾಗ ಜಾನ್‌ ಎಫ್‌ ಕೆನಡಿ ಹಿಟ್ಲರ್‌ ನನ್ನು ಬಂಧಿಸಿದ್ದು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.