ನಂ.1 ನಿರೀಕ್ಷೆಯಲ್ಲಿ ಆ್ಯಶ್ಲಿ ಬಾರ್ಟಿ
Team Udayavani, Jun 22, 2019, 5:40 AM IST
ಲಂಡನ್: ಫ್ರೆಂಚ್ ಓಪನ್ ಚಾಂಪಿಯನ್ ಆ್ಯಶ್ಲಿ ಬಾರ್ಟಿ ನೂತನ ಟೆನಿಸ್ ರ್ಯಾಂಕಿಂಗ್ನಲ್ಲಿ ನಂಬರ್ ವನ್ ಸ್ಥಾನ ಅಲಂಕರಿಸುವ ಸಾಧ್ಯತೆಯಿದೆ.
ಬರ್ಮಿಂಗ್ಹ್ಯಾಮ್ನಲ್ಲಿ ಸಾಗುತ್ತಿ ರುವ “ನೇಚರ್ ವ್ಯಾಲಿ ಕ್ಲಾಸಿಕ್’ ಕೂಟದಲ್ಲಿ ಒಂದು ವೇಳೆ ಬಾರ್ಟಿ ಪ್ರಶಸ್ತಿ ಗೆದ್ದರೆ ಅಗ್ರ ಸ್ಥಾನಕ್ಕೇರಲಿದ್ದಾರೆ. ಈ ಮೂಲಕ 40 ವರ್ಷಗಳ ಸುದೀರ್ಘ ಸಮಯದ ಬಳಿಕ ನಂ.1 ಸ್ಥಾನಕ್ಕೇರಿದ ಆಸ್ಟ್ರೇಲಿಯದ ಮೊದಲ ವನಿತೆ ಎನಿಸಿಕೊಳ್ಳಲಿದ್ದಾರೆ. 1976ರಲ್ಲಿ ಇವೋನ್ನೆ ಗೂಲಗಾಂಗ್ ಕಾವೆÉ ನಂ.1 ಅಲಂಕರಿಸಿದ್ದ ಆಸ್ಟ್ರೇಲಿಯದ ಸಾಧಕಿಯಾಗಿದ್ದರು.
ದ್ವಿತೀಯ ಸುತ್ತಿನಲ್ಲಿ ನವೋಮಿ ಒಸಾಕಾ ಸೋತ ಕಾರಣ ಬಾರ್ಟಿ ಅವರಿಗೆ ಅಗ್ರಸ್ಥಾನಕ್ಕೇರುವ ಸುವರ್ಣಾವಕಾಶ ಲಭಿಸಿದೆ. ಆಸ್ಟ್ರೇಲಿಯನ್ ಓಪನ್ ಗೆದ್ದ ಬಳಿಕ ನಂ.1 ಸ್ಥಾನಕ್ಕೇರಿದ್ದ ಒಸಾಕಾ ಇಲ್ಲಿ ಫೈನಲ್ ತಲುಪಿದ್ದರೆ ಅಗ್ರಸ್ಥಾನ ಉಳಿಸಿಕೊಳ್ಳುತ್ತಿದ್ದರು. ಆದರೆ ಒಸಾಕಾ ದ್ವಿತೀಯ ಸುತ್ತಿನಲ್ಲಿ ಕಜಾಕ್ಸ್ಥಾನದ ಯೂಲಿಯಾ ಪುತಿನ್ತ್ಸೇವಾ ಕೈಯಲ್ಲಿ 2-6, 3-6 ಸೆಟ್ಗಳಿಂದ ಶರಣಾಗಿದರು.
ಅಮೆರಿಕದ ಜೆನ್ನಿಫರ್ ಬ್ರ್ಯಾಡಿ ಅವರನ್ನು 6-3, 6-1 ನೇರ ಸೆಟ್ಗಳಿಂದ ಕೆಡಹಿದ ಬಾರ್ಟಿ ಕ್ವಾರ್ಟರ್ ಫೈನಲ್ ಹಂತಕ್ಕೇರಿದ್ದಾರೆ.
ವೀನಸ್ ಎದುರಾಳಿ
ಪ್ರಶಸ್ತಿ ಸುತ್ತಿಗೇರುವ ಮೊದಲು ಬಾರ್ಟಿ ಕ್ವಾರ್ಟರ್ ಫೈನಲ್ ಹೋರಾಟದಲ್ಲಿ ಐದು ಬಾರಿಯ ವಿಂಬಲ್ಡನ್ ಚಾಂಪಿಯನ್ ವೀನಸ್ ವಿಲಿಯಮ್ಸ್ ಅವರ ಸವಾಲನ್ನು ಎದುರಿಸಬೇಕಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ