ಬಾರ್ಟಿ-ಗವ್ರಿಲೋವಾ ಆಸ್ಟ್ರೇಲಿಯನ್ ಸೆಮಿಫೈನಲ್
Team Udayavani, Jan 12, 2018, 9:18 AM IST
ಸಿಡ್ನಿ: ಆ್ಯಶ್ ಬಾರ್ಟಿ ಮತ್ತು ಡರಿಯಾ ಗವ್ರಿಲೋವಾ ಸಿಡ್ನಿ ಇಂಟರ್ನ್ಯಾಶನಲ್ ಟೆನಿಸ್ ಪಂದ್ಯಾವಳಿಯ ಸೆಮಿಫೈನಲ್ನಲ್ಲಿ ಪರಸ್ಪರ ಎದುರಾಗಲಿದ್ದಾರೆ. ಇದರೊಂದಿಗೆ “ಆಲ್ ಆಸ್ಟ್ರೇಲಿಯನ್’ ರ್ಯಾಕೆಟ್ ಸಮರಕ್ಕೆ ವೇದಿಕೆಯೊಂದು ಸಿದ್ಧಗೊಂಡಿದೆ.
“ಕೆನ್ ರೋಸ್ವೆಲ್ ಅರೇನಾ’ದಲ್ಲಿ ಗುರುವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಆ್ಯಶ್ ಬಾರ್ಟಿ ಜೆಕ್ ಆಟಗಾರ್ತಿ ಬಾಬೊìರಾ ಸ್ಟ್ರೈಕೋವಾ ಅವರನ್ನು 68 ನಿಮಿಷಗಳ ಹೋರಾಟದ ಬಳಿಕ 6-3, 6-2 ಅಂತರದಿಂದ ಪರಾಭವಗೊಳಿಸಿದರು. ಇನ್ನೊಂದು ಕ್ವಾರ್ಟರ್ ಫೈನಲ್ನಲ್ಲಿ ಡರಿಯಾ ಗವ್ರಿಲೋವಾ ತಮ್ಮದೇ ದೇಶದ ಸಮಂತಾ ಸ್ಟೋಸರ್ ಅವರನ್ನು 6-4, 6-2 ಅಂತರದಿಂದ ಹಿಮ್ಮೆಟ್ಟಿಸಿದರು.
ಬಾರ್ಟಿ-ಗವ್ರಿಲೋವಾ ನಡುವಿನ ಸೆಮಿಫೈನಲ್ ಪಂದ್ಯ ಭಾರತೀಯ ಕಾಲಮಾನದ ಪ್ರಕಾರ ಶುಕ್ರವಾರ ಬೆಳಗ್ಗೆ 8.30ಕ್ಕೆ ಆರಂಭವಾಗಲಿದೆ. ಪ್ರಶಸ್ತಿ ಸುತ್ತಿಗೆ ಪ್ರವೇಶಿಸಲಿರುವ ಆತಿಥೇಯ ನಾಡಿನ ಆಟಗಾರ್ತಿ ಯಾರು ಎಂಬುದು ಟೆನಿಸ್ ಅಭಿಮಾನಿಗಳ ಕುತೂಹಲ.
“ನಾನು ಮತ್ತು ಗವ್ರಿಲೋವಾ ಒಬ್ಬರನ್ನೊಬ್ಬರು ಸಾಕಷ್ಟು ಅರಿತುಕೊಂಡಿದ್ದೇವೆ. ಉತ್ತಮ ಪ್ರದರ್ಶನ ನೀಡಿ ರಂಜಿಸುವುದು ನಮ್ಮ ಯೋಜನೆ’ ಎಂದು ಬಾರ್ಟಿ ಪ್ರತಿಕ್ರಿಯಿಸಿದ್ದಾರೆ.
ಕೆರ್ಬರ್ ವರ್ಸಸ್ ಜಾರ್ಜಿ
ಶುಕ್ರವಾರದ ಇನ್ನೊಂದು ವನಿತಾ ಸೆಮಿಫೈನಲ್ ಜರ್ಮನಿಯ ಆ್ಯಂಜೆಲಿಕ್ ಕೆರ್ಬರ್ ಮತ್ತು ಇಟೆಲಿಯ ಕ್ಯಾಮಿಲಾ ಜಾರ್ಜಿ ನಡುವೆ ಮಧ್ಯಾಹ್ನ 1.30ಕ್ಕೆ ನಡೆಯಲಿದೆ. ಗುರುವಾರದ ಕ್ವಾರ್ಟರ್ ಫೈನಲ್ನಲ್ಲಿ ಆ್ಯಂಜೆಲಿಕ್ ಕೆರ್ಬರ್ 6-3, 6-1 ಅಂತರದಿಂದ ಸ್ಲೊವಾಕಿಯನ್ ಆಟಗಾರ್ತಿ ಡೊಮಿನಿಕಾ ಸಿಬುಲ್ಕೋವಾ ಅವರನ್ನು ಮಣಿಸಿದರು. ಇನ್ನೊಂದು ಮುಖಾಮುಖೀಯಲ್ಲಿ ಜೂಲಿಯಾ ಜಾರ್ಜಿ ಮಾಜಿ ನಂ.2 ಆಟಗಾರ್ತಿ ಪೋಲೆಂಡಿನ ಅಗ್ನಿàಸ್ಕಾ ರಾದ್ವಂಸ್ಕಾ ಅವರಿಗೆ 6-1, 6-2 ಅಂತರದ ಆಘಾತವಿಕ್ಕಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ