Asian Champions Trophy ಹಾಕಿ ; ಮಲೇಷ್ಯಾಕ್ಕೆ 4-3 ಸೋಲುಣಿಸಿ ಪ್ರಶಸ್ತಿ ಗೆದ್ದ ಭಾರತ
Team Udayavani, Aug 12, 2023, 11:05 PM IST
ಚೆನ್ನೈ: ಇಲ್ಲಿನ ಮೇಯರ್ ರಾಧಾಕೃಷ್ಣನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತವು ಮಲೇಷ್ಯಾ ವಿರುದ್ಧ 4-3 ಅಂತರದ ರೋಚಕ ಜಯ ಸಾಧಿಸಿ ದಾಖಲೆಯ ನಾಲ್ಕನೇ ಎಸಿಟಿ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ.
ಆರಂಭದಲ್ಲಿ, ಜುಗರಾಜ್ ಸಿಂಗ್ ಮೊದಲ ಕ್ವಾರ್ಟರ್ನಲ್ಲಿ ಗೋಲು ಗಳಿಸಿ ಭಾರತಕ್ಕೆ ಆರಂಭಿಕ ಮುನ್ನಡೆ ಒದಗಿಸಿದರು, ಆದರೆ ಕಮಲ್ ಅಬು ಅರ್ಜೈ 1-1 ರಿಂದ ಸಮಬಲ ಸಾಧಿಸಿದರು.
ನಂತರ ಎರಡನೇ ಕ್ವಾರ್ಟರ್ನಲ್ಲಿ ರಾಝೀ ರಹೀಮ್ ಪೆನಾಲ್ಟಿ ಕಾರ್ನರ್ ಅನ್ನು ಗೋಲಾಗಿ ಪರಿವರ್ತಿಸುವ ಮೂಲಕ ಮಲೇಷ್ಯಾವನ್ನು 2-1 ರಿಂದ ಮುನ್ನಡೆಸಿದರು. ನಂತರ ಅಮಿನುದಿನ್ ಮುಹಮದ್ ಎರಡನೇ ಕ್ವಾರ್ಟರ್ನಲ್ಲಿ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಗಳಿಸಿ 3-1 ಮಾಡಿ ಭಾರತಕ್ಕೆ ಸವಾಲೆಸೆದರು.
ಮೂರನೇ ಕ್ವಾರ್ಟರ್ನಲ್ಲಿ, ಹರ್ಮನ್ಪ್ರೀತ್ ಸಿಂಗ್ ಪೆನಾಲ್ಟಿ ಸ್ಟ್ರೋಕ್ ಅನ್ನು 2-3 ಗೆ ಪರಿವರ್ತಿಸಿದರು ಮತ್ತು ನಂತರ ಗುರ್ಜಂತ್ ಗೋಳು ಬಾರಿಸಿ ಸಮಬಲ 3-3 ಸ್ಕೋರ್ಗೆ ತಂದರು. ಆಕಾಶದೀಪ್ ಆಕರ್ಷಕ ಗೋಲು ಬಾರಿಸಿ ಭಾರತಕ್ಕೆ ದಾಖಲೆಯ ನಾಲ್ಕನೇ ACT ಪ್ರಶಸ್ತಿಯನ್ನು ಪಡೆಯಲು ನೆರವಾದರು.