ಹಾಕಿ: ಭಾರತ ಸಿಡಿಸಿತು 26 ಗೋಲು!


Team Udayavani, Aug 23, 2018, 6:00 AM IST

s-28.jpg

ಜಕಾರ್ತಾ: ಏಶ್ಯಾಡ್‌ ಹಾಕಿ ಕೂಟದ ಬುಧವಾರದ ಲೀಗ್‌ ಪಂದ್ಯದಲ್ಲಿ ಪುರುಷರ ತಂಡ ಹಾಂಕಾಂಗ್‌ ವಿರುದ್ಧ 26-0 ಗೋಲುಗಳ ಪ್ರಚಂಡ ಗೆಲುವು ಸಾಧಿಸಿದೆ. ಇದು ಭಾರತೀಯ ಹಾಕಿ ಇತಿಹಾಸದ ಅತ್ಯಂತ ದೊಡ್ಡ ಗೆಲುವು ಎಂಬುದು ವಿಶೇಷ.

ಇದರೊಂದಿಗೆ ಭಾರತ 86 ವರ್ಷಗಳ ಗೆಲುವಿನ ದಾಖಲೆಯನ್ನು ಮುರಿಯಿತು. 1932ರ ಒಲಿಂಪಿಕ್ಸ್‌ನಲ್ಲಿ ಯುಎಸ್‌ಎ ವಿರುದ್ಧ 24-1 ಅಂತರದ ಗೆಲುವು ಸಾಧಿಸಿದ್ದು ಭಾರತದ ಈವರೆಗಿನ ಅತ್ಯುತ್ತಮ ಸಾಧನೆಯಾಗಿತ್ತು. ಭಾರತ ತನ್ನ ಮೊದಲ ಲೀಗ್‌ ಪಂದ್ಯದಲ್ಲಿ ಆತಿಥೇಯ ಇಂಡೋನೇಶ್ಯವನ್ನು 17-0 ಅಂತರದಿಂದ ಹಿಮ್ಮೆಟ್ಟಿಸಿತ್ತು. ಇದರೊಂದಿಗೆ ಕೇವಲ 2 ಲೀಗ್‌ ಪಂದ್ಯಗಳಲ್ಲಿ ಶ್ರೀಜೇಶ್‌ ಪಡೆ 43 ಗೋಲು ಬಾರಿಸಿ ಮೆರೆಯಿತು!

ಇದು ಭಾರತದ ಸತತ 2ನೇ ಅತೀ ದೊಡ್ಡ ಗೆಲುವು. ಹಿಂದಿನ ಪಂದ್ಯದಲ್ಲಿ ಇಂಡೋನೇಶ್ಯವನ್ನು 17 ಗೋಲುಗಳಿಂದ ಮಣಿಸಿದ್ದು ಭಾರತದ ಏಶ್ಯಾಡ್‌ ದಾಖಲೆ ಯಾಗಿತ್ತು. ಇದನ್ನು ಎರಡೇ ದಿನಗಳಲ್ಲಿ ಉತ್ತಮಪಡಿಸಿತು. ಭಾರತದ ಇದಕ್ಕೂ ಹಿಂದಿನ ಏಶ್ಯಾಡ್‌ ದಾಖಲೆ 1982ರಲ್ಲಿ ಬರೆಯಲ್ಪಟ್ಟಿತ್ತು. ಅಂದು ಬಾಂಗ್ಲಾದೇಶವನ್ನು 12-0 ಅಂತರದಿಂದ ಮಣಿಸಿತ್ತು. ಅಂತಾರಾಷ್ಟ್ರೀಯ ಹಾಕಿಯಲ್ಲಿ ಬೃಹತ್‌ ಗೆಲುವಿನ ದಾಖಲೆ ನ್ಯೂಜಿ ಲ್ಯಾಂಡ್‌ ಹೆಸರಲ್ಲಿದೆ. 1994ರಲ್ಲಿ ಅದು ಸಮೋವಾವನ್ನು 36-1 ಅಂತರದಿಂದ ಪರಾಭವಗೊಳಿಸಿತ್ತು.

ರೂಪಿಂದರ್‌ ಪಾಲ್‌ 5 ಗೋಲು
ಭಾರತದ ಪರ ರೂಪಿಂದರ್‌ ಪಾಲ್‌ ಸಿಂಗ್‌ ಸರ್ವಾಧಿಕ 5 ಗೋಲು ಬಾರಿಸಿದರು. ಹರ್ಮನ್‌ಪ್ರೀತ್‌ ಸಿಂಗ್‌ 4, ಆಕಾಶ್‌ದೀಪ್‌ ಸಿಂಗ್‌ 3, ಲಲಿತ್‌ ಉಪಾಧ್ಯಾಯ, ವರುಣ್‌ ಕುಮಾರ್‌ ಮತ್ತು ಮನ್‌ಪ್ರೀತ್‌ ಸಿಂಗ್‌ ತಲಾ 2 ಗೋಲು ಹೊಡೆದರು. ಉಳಿದ ಗೋಲು ಸಿಡಿಸಿದವರು ಸುನೀಲ್‌ ಎಸ್‌.ವಿ., ಸುರೇಂದರ್‌ ಕುಮಾರ್‌, ವಿವೇಕ್‌ ಸಾಗರ್‌ ಪ್ರಸಾದ್‌, ಅಮಿತ್‌ ರೋಹಿದಾಸ್‌, ಚಿಂಗ್ಲೆನ್ಸನ ಕಾಂಗುಜಮ್‌, ಮನ್‌ದೀಪ್‌ ಸಿಂಗ್‌, ಸಿಮ್ರನ್‌ಜಿàತ್‌ ಸಿಂಗ್‌ ಮತ್ತು ದಿಲ್‌ಪ್ರೀತ್‌ ಸಿಂಗ್‌. ವಿರಾಮದ ವೇಳೆ ಭಾರತ 14-0 ಗೋಲುಗಳಿಂದ ಮುಂದಿತ್ತು.

ಟಾಪ್ ನ್ಯೂಸ್

ಕಾಂಗ್ರೆಸ್ ಶಾಸಕರಿಗೆ ಟಿಕೆಟ್ ಕೈ ತಪ್ಪುವ ಭೀತಿ; ಚುನಾವಣಾ ಸಿದ್ದತೆ ಆರಂಭಿಸಿದ ಕೈ ಪಡೆ

ಕಾಂಗ್ರೆಸ್ ಶಾಸಕರಿಗೆ ಟಿಕೆಟ್ ಕೈ ತಪ್ಪುವ ಭೀತಿ; ಚುನಾವಣಾ ಸಿದ್ದತೆ ಆರಂಭಿಸಿದ ಕೈ ಪಡೆ

ಜಿ.ಪಂ-ತಾ.ಪಂ ಚುನಾವಣೆ: ವಿಚಾರಣೆ ಮೇ 23ಕ್ಕೆ ಮುಂದೂಡಿಕೆ

ಜಿ.ಪಂ-ತಾ.ಪಂ ಚುನಾವಣೆ: ವಿಚಾರಣೆ ಮೇ 23ಕ್ಕೆ ಮುಂದೂಡಿಕೆ

1-fdsfdsfds

ಕಿರುತೆರೆ ನಟಿ ಚೇತನಾ ಸಾವು!: ಬೊಜ್ಜು ತೆಗೆಯುವ ಶಸ್ತ್ರಚಿಕಿತ್ಸೆ ಮುಳುವಾಯಿತೇ ?

ಸಾಗರ : ಶಾಲೆಗೆ ಹೋಗುವುದಾಗಿ ಹೇಳಿ ಹೋದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ಆತ್ಮಹತ್ಯೆ

ಸಾಗರ: ಶಾಲೆಗೆ ಹೋಗುತ್ತೇನೆಂದು ಹೋದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯ ಶವ ಕೆರೆಯಲ್ಲಿ ಪತ್ತೆ

cm-ibrahim.

ಪರಿಷತ್ ಸ್ಥಾನದ ಮೇಲೆ ಕಣ್ಣಿಟ್ಟ ಸಿ.ಎಂ.ಇಬ್ರಾಹಿಂ; ಜೆಡಿಎಸ್ ನಾಯಕರಿಗೆ ಕಸಿವಿಸಿ

sensex

1,300 ಅಂಕಗಳ ಏರಿಕೆ ಕಂಡ ಸೆನ್ಸೆಕ್ಸ್ ; 16,200 ಮಟ್ಟವನ್ನು ಮರಳಿ ಪಡೆದ ನಿಫ್ಟಿ

21

ಹೆತ್ತವರ ಅಪಸ್ವರ ಲೆಕ್ಕಿಸದೇ ಹಿಂದೂ ಯುವಕ, ಮುಸ್ಲಿಂ ಯುವತಿ ವಿವಾಹಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

“ಅಗ್ರ ಕ್ರಮಾಂಕ ಕ್ಲಿಕ್‌ ಆಗಬೇಕು’: ಕೆಎಲ್‌ ರಾಹುಲ್‌

“ಅಗ್ರ ಕ್ರಮಾಂಕ ಕ್ಲಿಕ್‌ ಆಗಬೇಕು’: ಕೆಎಲ್‌ ರಾಹುಲ್‌

south africa team announced for t20 seies against India

ಭಾರತ ವಿರುದ್ಧದ ಟಿ20 ಸರಣಿಗೆ ದ.ಆಫ್ರಿಕಾ ತಂಡ ಪ್ರಕಟ: ಮುಂಬೈ ಇಂಡಿಯನ್ಸ್ ಆಟಗಾರನಿಗೆ ಅವಕಾಶ

IPL 2022: rcb qualification scenario

ದಾರಿ ಯಾವುದಯ್ಯಾ? ಪ್ಲೇ ಆಫ್ ತಲುಪಲು ಆರ್ ಸಿಬಿಗೆ ಇನ್ನೂ ಇದೆ ಅವಕಾಶ; ಇಲ್ಲಿದೆ ಲೆಕ್ಕಾಚಾರ

ಐಪಿಎಲ್‌ ಟೈ ಮ್ಯಾಚ್‌-08: 5 ರನ್‌ ಗಳಿಸಲಾಗದೆ ಸೂಪರ್‌ ಓವರ್‌ ಆಡಿದ ಡೆಲ್ಲಿ!

ಐಪಿಎಲ್‌ ಟೈ ಮ್ಯಾಚ್‌-08: 5 ರನ್‌ ಗಳಿಸಲಾಗದೆ ಸೂಪರ್‌ ಓವರ್‌ ಆಡಿದ ಡೆಲ್ಲಿ!

ಹೈದರಾಬಾದ್‌ ಹೊರಬೀಳುವ ಹೊತ್ತು! ಇಂದು ಮುಂಬೈ ಎದುರಾಳಿ

ಹೈದರಾಬಾದ್‌ ಹೊರಬೀಳುವ ಹೊತ್ತು! ಇಂದು ಮುಂಬೈ ಎದುರಾಳಿ

MUST WATCH

udayavani youtube

ಉದ್ಘಾಟನೆಗೆ ಶಾಸಕರೇ ಬರಬೇಕಂತೆ; ಕಾಫಿನಾಡಲ್ಲಿ ರಸ್ತೆಗೆ ಬೀಗ ಹಾಕಿದ ಬಿಜೆಪಿ ಸದಸ್ಯರು!

udayavani youtube

ಜ್ಞಾನವಾಪಿ ಮಸೀದಿ ಸರ್ವೇ ಸಂಪೂರ್ಣ; ಬಾವಿಯಲ್ಲಿ ‘ಶಿವಲಿಂಗ’ಪತ್ತೆ

udayavani youtube

ದತ್ತ ಜಯಂತಿ ಸಮಯದಲ್ಲಿ ಹೋಮದ ಹೊಗೆ.. ಬೇರೆ ಸಮಯದಲ್ಲಿ ಮಾಂಸದ ಹೊಗೆ

udayavani youtube

ಶಾಲಾ ಪ್ರಾರಂಭೋತ್ಸವ ಹಿರಿಯಡ್ಕ ಸರಕಾರಿ ಪಬ್ಲಿಕ್ ಸ್ಕೂಲ್ ನಲ್ಲಿ ಮಕ್ಕಳಿಗೆ ಸಂಭ್ರಮದ ಸ್ವಾಗತ

udayavani youtube

ಶಂಕರನಾರಾಯಣ : ಶಾಲಾರಂಭದ ದಿನದಂದೇ ಸರಕಾರಿ ಶಾಲೆಯಲ್ಲಿ ಪ್ರತಿಭಟನೆ ಬಿಸಿ

ಹೊಸ ಸೇರ್ಪಡೆ

19land

ಶಾಲಾ ಕಟ್ಟಡ ಕಾಮಗಾರಿಗೆ ಭೂಮಿಪೂಜೆ

ಸಾಗರ: ಹೊಟ್ಟೆಯೊಳಗಿದ್ದ ಏಳು ಕೆಜಿಯ ಗಡ್ಡೆಯನ್ನು ಯಶಸ್ವಿಯಾಗಿ ಹೊರ ತೆಗೆದ ವೈದ್ಯರು

ಸಾಗರ: ಹೊಟ್ಟೆಯೊಳಗಿದ್ದ ಏಳು ಕೆಜಿಯ ಗಡ್ಡೆಯನ್ನು ಯಶಸ್ವಿಯಾಗಿ ಹೊರ ತೆಗೆದ ವೈದ್ಯರು

18raichur

ರಾಯಚೂರು ನಗರಸಭೆಗೆ ಮತ್ತೆ ಹಳೇ ಕಮಿಷನರ್‌?

ಕಾಡಿಗೆ ಲಾರಿಗಳ ಪ್ರವೇಶಕ್ಕೆ ನಿರ್ಬಂಧ ; ಪ್ರಗತಿ ಪರಿಶೀಲನಾ ಸಭೆಯಲ್ಲಿ ಹಾಲಪ್ಪ ಸೂಚನೆ

ಮಳೆಗಾಲದಲ್ಲಿ ಕಾಡಿಗೆ ಲಾರಿಗಳ ಪ್ರವೇಶಕ್ಕೆ ನಿರ್ಬಂಧ ; ಸಭೆಯಲ್ಲಿ ಹಾಲಪ್ಪ ಸೂಚನೆ

“ಅಗ್ರ ಕ್ರಮಾಂಕ ಕ್ಲಿಕ್‌ ಆಗಬೇಕು’: ಕೆಎಲ್‌ ರಾಹುಲ್‌

“ಅಗ್ರ ಕ್ರಮಾಂಕ ಕ್ಲಿಕ್‌ ಆಗಬೇಕು’: ಕೆಎಲ್‌ ರಾಹುಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.