ಎಟಿಪಿ ವರ್ಲ್ಡ್ ಟೂರ್‌ ಫೈನಲ್ಸ್‌ ಥೀಮ್‌-ಸಿಸಿಪಸ್‌ ಪ್ರಶಸ್ತಿ ಕಾಳಗ

Team Udayavani, Nov 18, 2019, 12:41 AM IST

ಲಂಡನ್‌: ಆಸ್ಟ್ರಿಯಾದ ಡೊಮಿನಿಕ್‌ ಥೀಮ್‌ ಮತ್ತು ಗ್ರೀಕ್‌ನ ಸ್ಟೆಫ‌ನಸ್‌ ಸಿಸಿಪಸ್‌ ಪ್ರತಿಷ್ಠಿತ “ಎಟಿಪಿ ವರ್ಲ್ಡ್ ಟೂರ್‌ ಫೈನಲ್ಸ್‌’ ಪಂದ್ಯಾವಳಿಯ ಪ್ರಶಸ್ತಿಗಾಗಿ ಹೋರಾಟ ನಡೆಸಲಿದ್ದಾರೆ. ಇವರಿ ಬ್ಬರಿಗೂ ಇದು ಮೊದಲ ಫೈನಲ್‌ ಆಗಿದ್ದು, ಯಾರೇ ಗೆದ್ದರೂ ನೂತನ ಚಾಂಪಿಯನ್‌ ಆಗಿ ಹೊರ ಹೊಮ್ಮಲಿದ್ದಾರೆ. ರವಿವಾರ ತಡರಾತ್ರಿ ಇವರಿಬ್ಬರ ಸ್ಪರ್ಧೆ ನಡೆಯಲಿದೆ.

ಮೊದಲ ಸೆಮಿಫೈನಲ್‌ನಲ್ಲಿ ಸಿಸಿಪಸ್‌ ವಿಶ್ವದ ನಂ.3 ಟೆನಿಸಿಗ ರೋಜರ್‌ ಫೆಡರರ್‌ ಅವರನ್ನು 6-3, 6-4 ಅಂತರದಿಂದ ಪರಾಭವಗೊಳಿಸಿದರು. ದ್ವಿತೀಯ ಸೆಮಿಫೈನಲ್‌ ಕಾಳಗದಲ್ಲಿ ಡೊಮಿನಿಕ್‌ ಥೀಮ್‌ ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೇವ್‌ ವಿರುದ್ಧ 7-5, 6-3ರಿಂದ ಗೆದ್ದು ಬಂದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ