ಟೆಸ್ಟ್ ರಾಂಕಿಂಗ್ ನಲ್ಲಿ ಜೀವನಶ್ರೇಷ್ಠ ಎತ್ತರವೇರಿದ ಶಮಿ, ಮಯಾಂಕ್

Team Udayavani, Nov 17, 2019, 4:58 PM IST

ದುಬೈ: ಶನಿವಾರವಷ್ಟೇ ಅಂತ್ಯವಾದ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಮಯಾಂಕ್ ಅಗರ್ವಾಲ್ ಮತ್ತು ಮೊಹಮ್ಮದ್ ಶಮಿ ಐಸಿಸಿ ಟೆಸ್ಟ್ ರಾಂಕಿಂಗ್ ನಲ್ಲಿ ಜೀವನಶ್ರೇಷ್ಠ ಸಾಧನೆ ಮಾಡಿದ್ದಾರೆ.

ಇಂಧೋರ್ ಪಂದ್ಯದಲ್ಲಿ 58 ರನ್ ಗಳಿಗೆ ಏಳು ವಿಕೆಟ್ ಕಿತ್ತಿದ್ದ ಮೊಹಮ್ಮದ್ ಶಮಿ ಬೌಲಿಂಗ್ ಪಟ್ಟಿಯಲ್ಲಿ ಏಳನೇ ಸ್ಥಾನಕ್ಕೇರಿದ್ದಾರೆ. ಶಮಿ ಸದ್ಯ 790 ಅಂಕ ಹೊಂದಿದ್ದು, ಇದು ಟೆಸ್ಟ್ ಕ್ರಿಕೆಟ್ ನಲ್ಲಿ ಭಾರತೀಯ ವೇಗಿಯ ಮೂರನೇ ಅತೀ ಹೆಚ್ಚಿನ ಅಂಕವಾಗಿದೆ ಈ ಹಿಂದೆ ಕಪಿಲ್ ದೇವ್ (877) ಮತ್ತು ಜಸ್ಪ್ರೀತ್ ಬುಮ್ರಾಹ್ (832) ಅಂಕ ಪಡೆದಿದ್ದರು.

ಇಂಧೋರ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ 243 ರನ್ ಗಳಿಸಿದ್ದ ಮಯಾಂಕ್ ಅಗರ್ವಾಲ್ ಬ್ಯಾಟಿಂಗ್ ರಾಕಿಂಗ್ ನಲ್ಲಿ 11 ಸ್ಥಾನಕ್ಕೇರಿದ್ದಾರೆ.

ಉಳಿದಂತೆ ರವಿಚಂದ್ರನ್ ಬೌಲಿಂಗ್ ನಲ್ಲಿ ಹತ್ತನೇ ಸ್ಥಾನದಲ್ಲಿದ್ದು, ಆಲ್ ರೌಂಡರ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದ್ದಾರೆ. ಇಶಾಂತ್ ಶರ್ಮಾ 20ನೇ ಸ್ಥಾನಕ್ಕೇರಿದ್ದರೆ, ಉಮೇಶ್ ಯಾದವ್ 22ನೇ ಸ್ಥಾನದಲ್ಲಿದ್ದಾರೆ,


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ