ಸಯ್ಯದ್ ಮುಷ್ತಾಕ್ ಅಲಿ: ಗೋವಾ ವಿರುದ್ಧ ಗೆದ್ದು ಅಗ್ರ ಸ್ಥಾನಿಯಾದ ಕರ್ನಾಟಕ

Team Udayavani, Nov 17, 2019, 4:24 PM IST

ವಿಶಾಖಪಟ್ಟಣ: ಸಯ್ಯದ್ ಮುಷ್ತಾಕ್ ಅಲಿ ಟಿ ಟ್ವೆಂಟಿ ಟೂರ್ನಿಯ ಇಂದಿನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕರ್ನಾಟಕ ತಂಡ ಗೋವಾ ತಂಡವನ್ನು 35 ರನ್ ಅಂತರದಿಂದ ಸೋಲಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡಕ್ಕೆ ರಾಹುಲ್ ಮತ್ತು ಪವನ್ ದೇಶಪಾಂಡೆ ನೆರವಾದರು. ರಾಹುಲ್ 34 ರನ್ ಗಳಿಸಿ ಔಟಾದರೆ, ಪವನ್ ದೇಶಪಾಂಡೆ ಕೇವಲ 32 ಎಸೆತಗಳಲ್ಲಿ ಭರ್ಜರಿ ಐದು ಸಿಕ್ಸರ್ ನೆರವಿನಿಂದ 63 ರನ್ ಬಾರಿಸಿದರು. ನಿಗದಿತ 20 ಓವರ್ ನಲ್ಲಿ ಕರ್ನಾಟಕ 9ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿತು.

ಗುರಿ ಬೆನ್ನತ್ತಿದ ಗೋವಾ ತಂಡ ಸತತ ವಿಕೆಟ್ ಕೈಚೆಲ್ಲಿತು. ಆದಿತ್ಯ ಕೌಶಿಕ್ 48 ರನ್, ಮಲ್ಲಿಕ್ ಸಾಬ್ 27 ಮತ್ತು ಸುಯಾಷ್ ಪ್ರಭು ದೇಸಾಯ್ 28 ರನ್ ಗಳಿಸಿ ಅಲ್ಪ ಕಾಣಿಕೆ ನೀಡಿದರು. ಅಂತಿಮವಾಗಿ ಗೋವಾ 19.3 ಓವರ್ ನಲ್ಲಿ 137 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ಶ್ರೇಯಸ್ ಗೋಪಾಲ್ ಮೂರು ವಿಕೆಟ್ ಪಡೆದರು. ಈ ಜಯದೊಂದಿಗೆ ಗುಂಪಿನಲ್ಲಿ ಕರ್ನಾಟಕ ಅಗ್ರಸ್ಥಾನ ಪಡೆಯಿತು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ