Australia-Pakistan ಟೆಸ್ಟ್ ಗೆ ಮಳೆ ತೊಂದರೆ
Team Udayavani, Jan 5, 2024, 12:04 AM IST
ಸಿಡ್ನಿ: ಪ್ರವಾಸಿ ಪಾಕಿಸ್ಥಾನ ಮತ್ತು ಆಸ್ಟ್ರೇಲಿಯ ನಡುವಣ ಸಿಡ್ನಿ ಟೆಸ್ಟ್ ಪಂದ್ಯದ ದ್ವಿತೀಯ ದಿನದಾಟದ ಬಹುತೇಕ ಸಮಯ ಮಳೆ ಮತ್ತು ಮಂದ ಬೆಳಕಿನಿಂದಾಗಿ ನಷ್ಟವಾಗಿದೆ. ವಿದಾಯ ಟೆಸ್ಟ್ ಪಂದ್ಯ ಆಡುತ್ತಿರುವ ಆರಂಭಿಕ ಆಟಗಾರ ಡೇವಿಡ್ ವಾರ್ನರ್ 34 ರನ್ ಗಳಿಸಿ ಔಟಾದರು.
ವಿಕೆಟ್ ನಷ್ಟವಿಲ್ಲದೇ ಆರು ರನ್ನಿನಿಂದ ದಿನದಾಟ ಆರಂಭಿಸಿದ ಆಸ್ಟ್ರೇಲಿಯ ತಂಡವು ಊಟದ ವಿರಾಮದ ವೇಳೆ ಒಂದ ವಿಕೆಟಿಗೆ 78 ರನ್ ಗಳಿಸಿತ್ತು. ತನ್ನ 112ನೇ ಟೆಸ್ಟ್ ಆಡಿದ ವಾರ್ನರ್ ಅವರು ಆಘಾ ಸಲ್ಮಾನ್ ಅವರ ಎಸೆತ ದಲ್ಲಿ ಮೊದಲ ಸ್ಲಿಪ್ನಲ್ಲಿ ಅಜಂಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ವಿರಾಮದ ಬಳಿಕ ಸ್ವಲ್ಪ ಹೊತ್ತಿನಲ್ಲಿ ಭಾರೀ ಮಳೆ ಸುರಿಯತೊಡಗಿತು. ಆಗ ಆಸ್ಟ್ರೇಲಿಯ 2 ವಿಕೆಟಿಗೆ 116 ರನ್ ಗಳಿಸಿತ್ತು.
ಸಂಕ್ಷಿಪ್ತ ಸ್ಕೋರು: ಪಾಕಿಸ್ಥಾನ 313; ಆಸ್ಟ್ರೇಲಿಯ 2 ವಿಕೆಟಿಗೆ 116 (ವಾರ್ನರ್ 34, ಲಬುಶೇನ್ 23 ಬ್ಯಾಟಿಂಗ್).