ಜಾಸನ್‌ ರಾಯ್‌ 180 ಇಂಗ್ಲೆಂಡ್‌ ಗೆಲುವಿನ ಗತ್ತು

Team Udayavani, Jan 15, 2018, 6:25 AM IST

JASON-ROY.jpg

ಮೆಲ್ಬರ್ನ್: ಆ್ಯಶಸ್‌ ಸರಣಿಯನ್ನು 4-0 ಅಂತರದಿಂದ ಕಳೆದುಕೊಂಡ ಅವಮಾನದಲ್ಲಿರುವ ಇಂಗ್ಲೆಂಡ್‌ ಏಕದಿನ ಸರಣಿಯಲ್ಲಿ ಪ್ರಚಂಡ ಆರಂಭ ಗಳಿಸಿದೆ. ರವಿವಾರ ಮೆಲ್ಬರ್ನ್ನಲ್ಲಿ ನಡೆದ ಮೊದಲ ಪಂದ್ಯ ದಲ್ಲಿ 300 ಪ್ಲಸ್‌ ಮೊತ್ತವನ್ನು ದಿಟ್ಟ ರೀತಿಯಲ್ಲಿ ಬೆನ್ನಟ್ಟಿ 5 ವಿಕೆಟ್‌ಗಳ ಜಯಭೇರಿ ಮೊಳಗಿಸಿದೆ. 

ಆರಂಭಕಾರ ಜಾಸನ್‌ ರಾಯ್‌ 180 ರನ್‌ ಬಾರಿಸಿ ಇಂಗ್ಲೆಂಡ್‌ ಪರ ನೂತನ ದಾಖಲೆ ಸ್ಥಾಪಿ ಸಿದ್ದು ಈ ಪಂದ್ಯದ ವಿಶೇಷವಾಗಿತ್ತು. ಡೇ-ನೈಟ್‌ ಪಂದ್ಯದಲ್ಲಿ ಬ್ಯಾಟಿಂಗಿಗೆ ಇಳಿಸಲ್ಪಟ್ಟ ಆಸ್ಟ್ರೇಲಿಯ ಆರನ್‌ ಫಿಂಚ್‌ ಅವರ 9ನೇ ಶತಕದ ನೆರವಿನಿಂದ 8 ವಿಕೆಟಿಗೆ 304 ರನ್‌ ಪೇರಿಸಿದರೆ, ಇಂಗ್ಲೆಂಡ್‌ 48.5 ಓವರ್‌ಗಳಲ್ಲಿ 5 ವಿಕೆಟಿಗೆ 308 ರನ್‌ ಬಾರಿಸಿ ಗೆಲುವಿನ ಸಂಭ್ರಮ ಆಚರಿಸಿತು.

ರಾಯ್‌ ಆಕ್ರಮಣಕಾರಿ ಆಟ
ಎಂದಿನ ಆಕ್ರಮಣಕಾರಿ ಶೈಲಿಯಲ್ಲಿ ಬ್ಯಾಟ್‌ ಬೀಸಿ ಆಸೀಸ್‌ ಬೌಲರ್‌ಗಳ ಮೇಲೆರಗಿ ಹೋದ ಜಾಸನ್‌ ರಾಯ್‌ 4ನೇ ಶತಕದೊಂದಿಗೆ ಇಂಗ್ಲೆಂಡ್‌ ಗೆಲುವನ್ನು ಸುಲಭಗೊಳಿಸಿದರು. ದ್ವಿಶತಕ ಬಾರಿಸುವ ಎಲ್ಲ ಸಾಧ್ಯತೆಗಳನ್ನು ಹೊಂದಿದ್ದ ರಾಯ್‌ 43ನೇ ಓವರ್‌ ತನಕ ಕ್ರೀಸ್‌ ಆಕ್ರಮಿಸಿಕೊಂಡು 180 ರನ್ನುಗಳ ಅತ್ಯಾಕರ್ಷಕ ಬ್ಯಾಟಿಂಗ್‌ ಪ್ರದರ್ಶನವಿತ್ತರು. ಇದು ಏಕದಿನದಲ್ಲಿ ಇಂಗ್ಲೆಂಡ್‌ ಆಟಗಾರನೊಬ್ಬನ ಸರ್ವಾಧಿಕ ವೈಯಕ್ತಿಕ ಗಳಿಕೆಯಾಗಿದೆ. 

2016ರ ಪಾಕಿಸ್ಥಾನ ವಿರುದ್ಧದ ನಾಟಿಂಗಂ ಪಂದ್ಯದಲ್ಲಿ ರಾಯ್‌ ಜತೆಗಾರ ಅಲೆಕ್ಸ್‌ ಹೇಲ್ಸ್‌ 171 ರನ್‌ ಬಾರಿಸಿದ್ದು ಈವರೆಗಿನ ದಾಖಲೆಯಾಗಿತ್ತು. ಅದೇ ವರ್ಷ ಶ್ರೀಲಂಕಾ ವಿರುದ್ಧದ ಓವಲ್‌ ಪಂದ್ಯದಲ್ಲಿ ಅಜೇಯ 162 ರನ್‌ ಹೊಡೆದದ್ದು ರಾಯ್‌ ಅವರ ಸರ್ವಾಧಿಕ ಗಳಿಕೆಯಾಗಿತ್ತು.

ಇಂಗ್ಲೆಂಡ್‌ ಗೆಲುವಿನ ವೇಳೆ ಜೋ ರೂಟ್‌ 91 ರನ್‌ ಗಳಿಸಿ ಅಜೇಯರಾಗಿದ್ದರು (110 ಎಸೆತ, 5 ಬೌಂಡರಿ). ರಾಯ್‌-ರೂಟ್‌ 3ನೇ ವಿಕೆಟಿಗೆ 221 ರನ್‌ ಪೇರಿಸಿ ಆಸೀಸ್‌ ಮೇಲೆ ಒತ್ತಡ ಹೇರಿದರು.

ಫಿಂಚ್‌ ಶತಕ ಸಂಭ್ರಮ
ಆಸ್ಟ್ರೇಲಿಯದ ಸ್ಕೋರ್‌ ಮುನ್ನೂರರ ಗಡಿ ದಾಟುವಲ್ಲಿ ನೆರವಾದದ್ದು ಆರಂಭಕಾರ ಆರನ್‌ ಫಿಂಚ್‌ ಅವರ ಆಕರ್ಷಕ ಶತಕ. ವಾರ್ನರ್‌ (2) ಅವರನ್ನು 10 ರನ್‌ ಆಗುವಷ್ಟರಲ್ಲಿ ಕಳೆದುಕೊಂಡ ಆಸೀಸ್‌ಗೆ ಫಿಂಚ್‌ ಅಗತ್ಯ ರಕ್ಷಣೆ ಒದಗಿಸುತ್ತ ಹೋದರು. ಬಳಿಕ ಮಿಚೆಲ್‌ ಮಾರ್ಷ್‌ ಮತ್ತು ಮಾರ್ಕಸ್‌ ಸ್ಟೋಯಿನಿಸ್‌ ಅರ್ಧ ಶತಕದ ಕೊಡುಗೆ ಸಲ್ಲಿಸಿದರು.

86ನೇ ಏಕದಿನ ಪಂದ್ಯ ಆಡಲಿಳಿದ ಫಿಂಚ್‌ 36ನೇ ಓವರ್‌ ತನಕ ಕ್ರೀಸಿನಲ್ಲಿ ನಿಂತು 107 ರನ್‌ ಬಾರಿಸಿದರು (119 ಎಸೆತ, 10 ಬೌಂಡರಿ, 3 ಸಿಕ್ಸರ್‌). ಸ್ಮಿತ್‌ (23), ಹೆಡ್‌ (5) ವಿಫ‌ಲರಾದ ಬಳಿಕ ಮಾರ್ಷ್‌-ಸ್ಟೊಯಿನಿಸ್‌ ಭರ್ಜರಿ ಬ್ಯಾಟಿಂಗ್‌ ಪರಾಕ್ರಮ ತೋರಿದರು. ಮಾರ್ಷ್‌ 68 ಎಸೆತ ಎದುರಿಸಿ 50 ರನ್‌ ಮಾಡಿದರೆ (2 ಬೌಂಡರಿ, 2 ಸಿಕ್ಸರ್‌), ಸಿಡಿದು ನಿಂತ ಸ್ಟೊಯಿನಿಸ್‌ 40 ಎಸೆತಗಳಿಂದ 60 ರನ್‌ ಬಾರಿಸಿದರು (5 ಬೌಂಡರಿ, 2 ಸಿಕ್ಸರ್‌). 2ನೇ ಪಂದ್ಯ ಜ. 19ರಂದು ಬ್ರಿಸ್ಬೇನ್‌ನಲ್ಲಿ ನಡೆಯಲಿದೆ.

ಸಂಕ್ಷಿಪ್ತ ಸ್ಕೋರ್‌ 
ಆಸ್ಟ್ರೇಲಿಯ-8 ವಿಕೆಟಿಗೆ 304 (ಫಿಂಚ್‌ 107, ಸ್ಟೊಯಿನಿಸ್‌ 60, ಮಾರ್ಷ್‌ 50, ಪ್ಲಂಕೆಟ್‌ 71ಕ್ಕೆ 3, ರಶೀದ್‌ 73ಕ್ಕೆ 2). ಇಂಗ್ಲೆಂಡ್‌-48.5 ಓವರ್‌ಗಳಲ್ಲಿ 5 ವಿಕೆಟಿಗೆ 308 (ರಾಯ್‌ 180, ರೂಟ್‌ ಅಜೇಯ 91, ಸ್ಟಾರ್ಕ್‌ 71ಕ್ಕೆ 2, ಕಮಿನ್ಸ್‌ 63ಕ್ಕೆ 2). ಪಂದ್ಯಶ್ರೇಷ್ಠ: ಜಾಸನ್‌ ರಾಯ್‌.

ಟಾಪ್ ನ್ಯೂಸ್

ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು

ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು

H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ

H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ

Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ

Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು

ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು

H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ

H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ

Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ

Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.