6ನೇ ಬಾರಿ “ಬ್ಯಾಲನ್‌ ಡಿ ಓರ್‌’ ಪ್ರಶಸ್ತಿ ಗೆದ್ದ ಮೆಸ್ಸಿ

Team Udayavani, Dec 3, 2019, 11:30 PM IST

ಪ್ಯಾರಿಸ್‌: ವಿಶ್ವ ಶ್ರೇಷ್ಠ ಫ‌ುಟ್ಬಾಲ್‌ ಆಟಗಾರ ಆರ್ಜೆಂಟೀನಾದ ಲಿಯೊನೆಲ್‌ ಮೆಸ್ಸಿ ತಮ್ಮ ವೃತ್ತಿ ಜೀವನದಲ್ಲಿ ಆರನೇ ಬಾರಿ “ಬ್ಯಾಲನ್‌ ಡಿ ಓರ್‌’ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಲಿವರ್‌ಪೂಲ್‌ನಿಂದ ನಾಮ ನಿರ್ದೇಶಿತಗೊಂಡಿದ್ದ ನಾಲ್ವರನ್ನು ಹಿಂದಿಕ್ಕಿದ ಮೆಸ್ಸಿ ಈ ಗೌರವ ಸ್ವೀಕರಿಸಿದರು.

ಮೆಸ್ಸಿ ನಾಯಕತ್ವದಲ್ಲಿ ಬಾರ್ಸಿಲೋನ ತಂಡ ಲಾಲಿಗ ಟೂರ್ನಿಯಲ್ಲಿ ಚಾಂಪಿಯನ್‌ ಪಟ್ಟ ಅಲಂಕರಿಸಿದೆ. ಆದರೆ ಕೊಪಾ ಅಮೆರಿಕ ಟೂರ್ನಿಯಲ್ಲಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿತು. ಈ ಹಿಂದೆ 2009, 2010, 2011, 2012 ಹಾಗೂ 2015ರಲ್ಲಿ ಮೆಸ್ಸಿ ಬ್ಯಾಲನ್‌ ಡಿ ಓರ್‌ ಪ್ರಶಸ್ತಿಗೆ ಪಾತ್ರರಾಗಿದ್ದರು.

ಮೆಸ್ಸಿ ಆರನೇ ಬಾರಿ ಪ್ರಶಸ್ತಿ ಗೆಲ್ಲುವ ಹಾದಿಯಲ್ಲಿ ಪ್ರತಿಸ್ಪರ್ಧಿ ವಿರ್ಜಿಲ್‌ ವ್ಯಾನಿjಕ್‌ ಹಾಗೂ ಐದು ಬಾರಿ ಪ್ರಶಸ್ತಿ ಜಯಿಸಿದ್ದ ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊರನ್ನು ಹಿಂದಿಕ್ಕಿದ್ದಾರೆ.

“10 ವರ್ಷಗಳ ಹಿಂದೆ ಮೂವರು ಸಹೋದರರ ಮಾರ್ಗದರ್ಶನದ ಫ‌ಲವಾಗಿ ನಾನು ಮೊದಲ ಬಾರಿ “ಬ್ಯಾಲನ್‌ ಡಿ ಓರ್‌’ ಪ್ರಶಸ್ತಿ ಸ್ವೀಕರಿಸಿ¨ªೆ. ಇಂದು ಪತ್ನಿ ಹಾಗೂ ಮಕ್ಕಳ ಬೆಂಬಲದಿಂದಾಗಿ ಆರನೇ ಬಾರಿ ಈ ಪ್ರಶಸ್ತಿಯನ್ನು ಸ್ವೀಕರಿಸುತ್ತಿದ್ದೇನೆ’ಎಂದು ಮೆಸ್ಸಿ ಹೇಳಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ