ತಮಿಮ್ ಶತಕ; ವಿಂಡೀಸ್ ವಿರುದ್ಧ ಬಾಂಗ್ಲಾ ಗೆಲುವು
Team Udayavani, Jul 24, 2018, 12:33 PM IST
ಗಯಾನಾ: ಆರಂಭಕಾರ ತಮಿಮ್ ಇಕ್ಬಾಲ್ ಅವರ 10ನೇ ಶತಕ, ಆಲ್ರೌಂಡರ್ ಶಕಿಬ್ ಅಲ್ ಹಸನ್ ಅವರ 97 ರನ್ ಸಾಹಸ, ಮಶ್ರಫೆ ಮೊರ್ತಜಾ ಅವರ ಘಾತಕ ಬೌಲಿಂಗ್ ದಾಳಿಯ ನೆರವು ಪಡೆದ ಬಾಂಗ್ಲಾದೇಶ, ಆತಿಥೇಯ ವೆಸ್ಟ್ ಇಂಡೀಸ್ ಎದುರಿನ ಪ್ರಥಮ ಏಕದಿನ ಪಂದ್ಯವನ್ನು 48 ರನ್ನುಗಳಿಂದ ಜಯಿಸಿದೆ.
ಇಲ್ಲಿನ “ಪ್ರೊವಿಡೆನ್ಸ್ ಸ್ಟೇಡಿಯಂ’ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಬಾಂಗ್ಲಾದೇಶ 4 ವಿಕೆಟಿಗೆ 279 ರನ್ ಪೇರಿಸಿ ಸವಾಲೊಡ್ಡಿದರೆ, ವೆಸ್ಟ್ ಇಂಡೀಸ್ 9 ವಿಕೆಟಿಗೆ 231 ರನ್ ಮಾತ್ರ ಗಳಿಸಿ ಶರಣಾಯಿತು. ಅನುಭವಿ ಬೌಲರ್ ಮೊರ್ತಜಾ 37 ರನ್ನಿತ್ತು 4 ವಿಕೆಟ್ ಉರುಳಿಸಿದರು.
ತಮಿಮ್ ಇಕ್ಬಾಲ್ ಅಜೇಯ ಬೀಸುಗೆಯಲ್ಲಿ 130 ರನ್ ಹೊಡೆದರು. 160 ಎಸೆತಗಳ ಈ ಪಂದ್ಯಶ್ರೇಷ್ಠ ಆಟದಲ್ಲಿ 10 ಬೌಂಡರಿ, 3 ಸಿಕ್ಸರ್ ಸೇರಿತ್ತು. ಇದು 180ನೇ ಪಂದ್ಯದಲ್ಲಿ ತಮಿಮ್ ಬಾರಿಸಿದ 10ನೇ ಶತಕ. ಶಕಿಬ್ 121 ಎಸೆತ ಎದುರಿಸಿ 97 ರನ್ ಕೊಡುಗೆ ಸಲ್ಲಿಸಿದರು (6 ಬೌಂಡರಿ). ಇವರಿಬ್ಬರ 2ನೇ ವಿಕೆಟ್ ಜತೆಯಾಟದಲ್ಲಿ 207 ರನ್ ಒಟ್ಟುಗೂಡಿತು. ವೆಸ್ಟ್ ಇಂಡೀಸ್ ಪರ ಶಿಮ್ರನ್ ಹೆಟ್ಮೈರ್ ಸರ್ವಾಧಿಕ 52 ರನ್, ಕ್ರಿಸ್ ಗೇಲ್ 60 ಎಸೆತಗಳಿಂದ 40 ರನ್ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ