ಸ್ಟೋಕ್ಸ್ ಇಲ್ಲದೆಯೂ ಇಂಗ್ಲೆಂಡ್ಆ್ಯಶಸ್ ಗೆಲ್ಲಬಲ್ಲದು: ಮೊಯಿನ್
Team Udayavani, Oct 2, 2017, 7:20 AM IST
ಲಂಡನ್: ಬೆನ್ ಸ್ಟೋಕ್ಸ್ ಇಲ್ಲದೇ ಹೋದರೆ ಇಂಗ್ಲೆಂಡಿಗೆ ಆ್ಯಶಸ್ ಉಳಿಸಿಕೊಳ್ಳಲಾಗದು ಎಂದು ಇಯಾನ್ ಚಾಪೆಲ್ ಇತ್ತೀಚೆಗಷ್ಟೇ ತಮ್ಮ ಅಂಕಣವೊಂದರಲ್ಲಿ ಪ್ರಸ್ತಾವಿಸಿದ್ದರು. ಇದರ ಬೆನ್ನಲ್ಲೇ ಆಂಗ್ಲ ತಂಡದ ಸವ್ಯಸಾಚಿ ಮೊಯಿನ್ ಅಲಿ ಹೇಳಿಕೆಯೊಂದನ್ನು ನೀಡಿದ್ದು, ಸ್ಟೋಕ್ಸ್ ಗೈರಲ್ಲೂ ಆ್ಯಶಸ್ ಗೆಲ್ಲುವ ಸಾಮರ್ಥ್ಯ ಇಂಗ್ಲೆಂಡಿಗಿದೆ ಎಂದಿದ್ದಾರೆ.
“ಬೆನ್ ಸ್ಟೋಕ್ಸ್ ನಮ್ಮ ತಂಡದ ಅತ್ಯುತ್ತಮ ಆಟಗಾರರಲ್ಲಿ ಒಬ್ಬರು. ಪಂದ್ಯದ ಗತಿಯನ್ನೇ ಬದಲಿಸಲಬಲ್ಲ ಕ್ರಿಕೆಟಿಗ. ಅವರು ತಂಡದಲ್ಲಿರುವುದೇ ದೊಡ್ಡ ಸಂಗತಿ. ಆದರೆ ಏನಾಗಲಿದೆ ಎಂದು ಕಾದು ನೋಡೋಣ. ಸ್ಟೋಕ್ಸ್ ಆ್ಯಶಸ್ ಸರಣಿಗೆ ಇಲ್ಲದೇ ಹೋದರೆ ನಾವೆಲ್ಲರೂ ಉತ್ತಮ ಪ್ರದರ್ಶನ ನೀಡಬೇಕಾಗುತ್ತದೆ. ಸ್ಟೋಕ್ಸ್ ಇಲ್ಲದೆಯೂ ಆ್ಯಶಸ್ ಗೆಲ್ಲುವ ಸಾಮರ್ಥ್ಯ ನಮ್ಮ ಈಗಿನ ತಂಡಕ್ಕಿದೆ’ ಎಂದಿದ್ದಾರೆ ಮೊಯಿನ್ ಅಲಿ.
ಅ. 28ರಂದು ಇಂಗ್ಲೆಂಡ್ ತಂಡ ಆಸ್ಟ್ರೇಲಿಯದತ್ತ ಪ್ರಯಾಣ ಬೆಳೆಸಲಿದೆ. 5 ಪಂದ್ಯಗಳ ಆ್ಯಶಸ್ ಸರಣಿ ನ. 23ರಿಂದ ಬ್ರಿಸ್ಬೇನ್ನಲ್ಲಿ ಆರಂಭವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
Athletics: ಕಿರಿಯರ ಏಷ್ಯನ್ ಆ್ಯತ್ಲೆಟಿಕ್ಸ್ ಜಾವೆಲಿನ್ನಲ್ಲಿ ದೀಪಾಂಶುಗೆ ಬಂಗಾರ
Gukesh: ಚಾಂಪಿಯನ್ ಗುಕೇಶ್ಗೆ ಭವ್ಯ ಸ್ವಾಗತ